ಬೇಬಿ ಆಲೂ ಧಂ ಮಾಡುವ ವಿಧಾನ ಅತ್ಯಂತ ಸಿಂಪಲ್ ಅಷ್ಟೇ ರುಚಿಕೂಡಾ. ಮಾಡೋದು ಹೇಗೆ ಅಂದ್ರೆ ಶಕುಂತಲ ಸವಿ ಅವರು ಹೇಳಿಕೊಟ್ಟಿದ್ದಾರೆ, ನಿಮ್ಮನೆಯಲ್ಲಿ ಮಾಡಿ ನೋಡಿ…
ಬೇಕಾಗುವ ಪದಾರ್ಥಗಳು :
- ಆಲೂಗೆಡ್ಡೆ – !/2 ಕೆ.ಜಿ
- ಈರುಳ್ಳಿ – 3
- ಟೊಮೆಟೊ – 5, 6
- ಹಸಿ ಮೆಣಸಿನಕಾಯಿ 2
- ಬ್ಯಾಡಗಿ 4
- ಗುಂಟೂರು 3
- ಚಕ್ಕೆ ಅರ್ಧ ಇಂಚು
- ಲವಂಗ 2
- ಏಲಕ್ಕಿ 1
- ಶುಂಠಿ ಬೆಳ್ಳುಳ್ಳಿ ಪೇಸ್ಟ್. 1ಸ್ಪೂನ್
- ಹಾಲಿನ ಕೆನೆ ಅರ್ಧ ಬಟ್ಟಲು

ಮಾಡುವ ವಿಧಾನ :
ಅರ್ಧ ಕೆ.ಜಿ ಬೇಬಿ ಆಲೂಗಳನ್ನು ಕುಕ್ಕರ್ ಗೆ ಹಾಕಿ ಸಾಕಷ್ಟು ನೀರು ಹಾಕಿ ನಾಲ್ಕೈದು ವಿಷಲ್ ಕೂಗಿಸಿ ಕೊಳ್ಳಿ. ಎರಡು ಈರುಳ್ಳಿ, 5, 6 ಟೊಮೆಟೊಗಳನ್ನು ಹೆಚ್ಚಿಕೊಂಡು ಹಸಿಯಾಗಿ ಸಪರೇಟ್ ಆಗಿ ರುಬ್ಬಿ ಕೊಳ್ಳಿ.
ಒಂದು ಬಾಣಲಿಗೆ 2 ಸ್ಪೂನ್ ಎಣ್ಣೆ ಹಾಕಿ ಕಾದ ನಂತರ 1ಸ್ಪೂನ್ ಧನಿಯಾ, ಅರ್ಧ ಸ್ಪೂನ್ ಜೀರಿಗೆ, 5, 6 ಮೆಣಸು ಕಾಳು, ಅರ್ಧ ಇಂಚು ಚಕ್ಕೆ, 2 ಲವಂಗ , 1 ಏಲಕ್ಕಿ , 4 ಬ್ಯಾಡಗಿ ಮೆಣಸಿನಕಾಯಿ, 3 ಗುಂಟೂರು ಮೆಣಸಿನ ಕಾಯಿ ಹಾಕಿ ಹುರಿದು ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಈರುಳ್ಳಿ 2 ಹಸಿ ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿಟ್ಟಕೊಳ್ಳಿ. ಒಂದು ಬಾಣಲಿಗೆ 2 ಸ್ಪೂನ್ ಎಣ್ಣೆ ಹಾಕಿ ಹೆಚ್ಚಿಟ ಈರುಳ್ಳಿ , ಮೆಣಸಿನ ಕಾಯಿ ಹಾಕಿ ಬಾಡಿಸಿ ಕೊಳ್ಳಿ ಜೊತೆಗೆ 2 ಸ್ಪೂನ್ ಬೆಣ್ಣೆ ಹಾಕಿ ರುಬ್ಬಿಟ್ಟು ಕೊಂಡ ಮಸಾಲೆ , ಪೇಸ್ಟ್ ಗಳನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಚಿಟಿಕೆ ಅರಶಿನ ಹಾಕಿ ಬೇಯಿಸಿ ಸಿಪ್ಪೆ ತೆಗೆದ ಅಲೂಗಡ್ಡೆ ಗಳನ್ನು ಹಾಕಿ ಮಸಾಲೆ ವಾಸನೆ ಹೋಗುವ ತನಕ ಚೆನ್ನಾಗಿ ಕುದಿಸಿ. ಹಾಲಿನ ಕೆನೆ ಹಾಕಿ ಮುಚ್ಚಿಡಿ. ಈಗ ರುಚಿಯಾದ ಅಲೂ ಧಮ್ ರೆಡಿ.
- ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು.
