ಯಾರದೋ ಪ್ರೀತಿ, ಯಾರದೋ ಬದುಕು ನಾವು ಮೂಗು ತೂರಿಸಿ ಸಿಕ್ಕಿದ್ದಾದರೂ ಏನು? ಬೇರೆಯವರ ವಿಷ್ಯದಲ್ಲಿ ಮೂಗು ತೂರಿಸಿ ಬೆಪ್ಪಾಗಬೇಡಿ. ತಪ್ಪದೆ ಮುಂದೆ ಓದಿ…
ಪ್ರೀತಿ ಮಾಡಿದ್ಮೇಲೆ ಅದು ವರ್ಕ್ ಔಟ್ ಆಗಿಲ್ಲ ಅಂದ್ರೆ ಆ ನಾಲ್ಕು ಜನ ಆಡ್ಕೋತಾರೆ, ನಿಶ್ಚಿತಾರ್ಥ ನಿಂತು ಹೋಯ್ತಾ ಆ ನಾಲ್ಕು ಜನ ಆಡ್ಕೋತಾರೆ, ಮದುವೆ ಮುರಿದು ಬಿತ್ತಾ ಆ ನಾಲ್ಕು ಜನ ಆಡ್ಕೋತಾರೆ, ಆ ನಾಲ್ಕು ಜನ ಯಾರು ಯಾರು ಅಂತ ಹುಡುಕ್ತಿದ್ದೆ. ಈಗ ಗೊತ್ತಾಯ್ತು. ಆ ನಾಲ್ಕು ಜನಕ್ಕೆ ಗೊತ್ತಾದ್ರು ಯಾರ್ ಜೀವನ ಬದಲಾಗೋಲ್ಲ ಅಂತ ರಶ್ಮಿಕಾ ಮದ್ದಣ ಅವರ ಮದುವೆ ನೋಡಿದ್ಮೇಲೆ ಅರ್ಥ ಆಯ್ತು.
ಆ ನಾಲ್ಕು ಜನ ಸಿಕ್ಕಾಪಟ್ಟೆ ತಲೆಕೆಡಸ್ಕೊಂಡು ರಶ್ಮಿಕಾ ಮತ್ತು ರಕ್ಷಿತ್ ಅವರ ನಿಶ್ಚಿತಾರ್ಥದ ಹಳೆಯ ಫೋಟೋ, ಪ್ಯಾಥೋ ಸಾಂಗ್ ಹಾಕೊಂಡು ಕೂತಕೊಂಡಿದ್ದಾರೆ. ಅದು ರಶ್ಮಿಕಾಗೂ ತಟ್ಟಲಿಲ್ಲ, ಇತ್ತಕಡೆ ರಕ್ಷಿತಶೆಟ್ಟಿಗೂ ತಟ್ಟಲಿಲ್ಲ. ರಕ್ಷಿತ್ ಬಗ್ಗೆ ಚಿಂತಿಸೋರು ಯೋಚಿಸಬೇಕು, ಅವರು ಹಳೆ ಲವ್ ಸ್ಟೋರಿಯಿಂದ ಹೊರಗೆ ಬಂದು ಒಂದು “ಅವನೇ ಶ್ರೀಮನ್ನಾರಾಯಣ” ಅಂತಹ ಹಿಟ್ ಸಿನಿಮಾ ಕೊಟ್ಟಾಯ್ತು. ಈಗ ಹೊಸ ಸಿನಿಮಾ ಕೆಲಸ ಶುರು ಮಾಡ್ಕೊಂಡಿದ್ದಾರೆ.
ಅವರ ಲವ್ ಬ್ರೇಕ್ ಅಪ್ ಆಗಿ ಅವರವರ ದಾರಿ ಬದಲಾಯಿಸಿಕೊಂಡು ಮುಂದೆ ಹೋಗಿ ಆಯ್ತು. ಆದರೆ ಆ ನಾಲ್ಕು ಜನ ಅಂತ ನಾವೇನು ಹೇಳ್ತಿವೋ ಅವರು ಮಾತ್ರ ಅಲ್ಲೇ ಕೂತಿದ್ದಾರೆ.
ಸಕ್ಕರೆ ಇದ್ಮೇಲೆ ಇರುವೆ ಮುತ್ತಕೊಳ್ಳೋದು ಸಹಜ. ಅದೇ ತರ ಪ್ರತಿಭೆ ಇದೇ ಅಂದ್ರೆ ಅವಕಾಶ ಕೊಡೋರು ಇರತ್ತಾರೆ. ರಶ್ಮಿಕಾ ಬೇರೆ ಭಾಷೆಗೆ ಹೋಗಾಯ್ತು. ನಮ್ಮ ಕನ್ನಡದ ಹುಡುಗಿ ಅಂತ ಪರ ಪರ ಕೆರಕೊಳ್ಳೋದು ಬಿಟ್ಟಬಿಡಬೇಕು.
ಮನೆಗೆ ಬಂದು ಅರಿಶಿಣ ಕುಂಕುಮ ಕೊಟ್ಟು ಕಾರ್ಯಕ್ರಮಕ್ಕೆ ಕರದ್ರೇನೇ ಒಮ್ಮೊಮ್ಮೆ ಏನೋ ಕಾರಣದಿಂದ ಹೋಗೋಕೆ ಆಗೋಲ್ಲ. ಅಂತದ್ರಲ್ಲಿ ಕರೆಯದೆ ಇದ್ದ ಕಾರ್ಯಕ್ರಮಕ್ಕೆ ಹೋಗೋದು ಅಂದ್ರೆ ನಮ್ಮಗಳಿಗೆ ಆಗದ ಮಾತು. ರಶ್ಮಿಕಾ ಅವರ ಮದುವೆಗೆ ಆಮಂತ್ರಣ ಕೊಟ್ಟಿಲ್ಲ ಅಂದ್ಮೇಲೆ ಅವರ ಕೊಡಗಿನ ಮನೆಗೆ ಹೋಗಿ ಮದುವೆ ಸಂಭ್ರಮ ತೋರಿಸ್ತಾರಲ್ಲ ನಮ್ಮ ಕೆಲವು ಮಾಧ್ಯಮದವರಿಗೆ ಏನ್ ಹೇಳ್ಬೇಕು.
ಆದ್ರೆ ಅವರ ಮದುವೆಗೆ ದೂರದಿಂದಲೇ ಶುಭಕೋರಿ ಅವರ ಪಾಡಿಗೆ ಬಿಟ್ಟುಬಿಡಬೇಕು. ಸಾಧ್ಯವಾದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ನಾಯಕಿಯರು ಯಾಕೆ ಮಿಂಚುತ್ತಿಲ್ಲ, ಅವರೆಲ್ಲ ಬೇರೆ ಭಾಷೆಯಲ್ಲಿ ಹೇಗೆ ಮಿಂಚತ್ತಿದ್ದಾರೆ ಅಂತ ಮಾಧ್ಯಮದವರು, ನಾಲ್ಕು ಜನ ತಲೆ ಕೆಡಸ್ಕೊoಡ್ರೆ ಕನ್ನಡ ಚಿತ್ರರಂಗದಲ್ಲಿ ನಾಯಕಿ ಪ್ರಧಾನ ಚಿತ್ರಗಳು ಬರುತ್ತೆ.
ನಮ್ಮ ಕನ್ನಡದ ಕ್ಯೂಟಿ ಶ್ರೀಲೀಲಾ ಕೂಡಾ ಬೇರೆ ಭಾಷೆಗೆ ಹೋಗಾಯ್ತು. ಮೊನ್ನೆ ರಾಗಿಣಿ ಅವರು ಮಾಧ್ಯಮದವರ ಮುಂದೆ ದುಃಖದಲ್ಲಿ ಹೇಳ್ಕೊಂಡ್ರು. ನಾನು ಕನ್ನಡವನ್ನ ಉಸಿರಾಗಿಸಿಕೊಂಡಿದ್ದೀನಿ. ಎಲ್ಲೇ ಹೋದ್ರು ನಾನು ಕನ್ನಡದವಳು, ಕನ್ನಡ ಚಿತ್ರರಂಗದಿಂದ ಬಂದವಳು ಅಂತ ಹೆಮ್ಮೆಯಿಂದ ಹೇಳ್ಕೋತೀನಿ. ಆದ್ರೆ ನನಗೆ ಅವಕಾಶಗಳೆ ಬರ್ತಿಲ್ಲ ಅಂತ ಕಣ್ಣೀರು ಹಾಕಿದ್ರು. ಆಗ ಇದೇ ನಾಲ್ಕು ಜನಕ್ಕೆ ತಟ್ಟಲಿಲ್ಲ.
ಹಾಗೇ ನೋಡಿದ್ರೆ ದರ್ಶನ್ ಅವರು ತಮ್ಮ ಸಿನಿಮಾದಲ್ಲಿ ಕನ್ನಡ ನಟಿಯರಿಗೆ ಅವಕಾಶ ಕೊಟ್ಟಿದ್ದನ್ನು ಸ್ಮರಿಸಬೇಕು. ರಚಿತಾ ರಾಮ್, ಆರಾಧನಾ ಅವರು ಅವರ ಚಿತ್ರಗಳಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಬಂದವರು.
ಆ ನಾಲ್ಕು ಜನ ಆಗಿ ಹೋಗಿದ್ದನ್ನು ಬಿಟ್ಟು, ಮುಂದೆ ಆಗೋದನ್ನು ನೋಡಿದ್ರೆ. ನಮ್ಮಲ್ಲಿ ರಶ್ಮಿಕಾರಂತೆ ಸಾಕಷ್ಟು ನಟಿಯರನ್ನು ನಮ್ಮ ಕನ್ನಡದಲ್ಲಿ ಬೆಳೆಸಬಹುದು. ಪರ ಭಾಷೆಗರು ನಮ್ಮ ಕ್ಯೂಟಿ, ಬ್ಯೂಟಿ ನಟಿಯರನ್ನ ಸೆಳೆಯೋದನ್ನ ತಡೀಬಹುದು, ಸ್ವಲ್ಪ ಯೋಚಿಸಿ ಆ ನಾಲ್ಕು ಜನರೇ.
ನಮ್ಮ ಕನ್ನಡದ ನೆಲದಲ್ಲಿ ಮಸ್ತಾದ ಹುಡುಗಿರು ರಕ್ಷಿತ್ ಅವರಿಗೆ ಸಿಗದೆ ಇರತ್ತಾರಾ?… ಸಿಗ್ತಾರೆ ಅವರಿಗೂ ಕಂಕಣ ಭಾಗ್ಯ ಕೂಡಿ ಬರುತ್ತೆ, ಅಲ್ಲಿವರೆಗೂ ತಾಳ್ಮೆ ಇಡ್ಕೊಳ್ಳಿ ನಾಲ್ಕು ಜನರೇ. ನಮ್ಮ ಕನ್ನಡದ ನಟಿಯರಿಗೆ ನಮ್ಮ ಭಾಷೆಯಲ್ಲಿಯೇ ತೂಕದ ಪಾತ್ರ ಸಿಗಲಿ, ಯಾವ ನಟಿಯರು ನಮ್ಮ ಭಾಷೆ ಬಿಟ್ಟು ಹೋಗದಂತೆ ಅವಕಾಶಗಳು ನಮ್ಮಲ್ಲಿ ಸೃಷ್ಠಿಯಾಗಲಿ ಎಂದು ಶುಭಕೊರೋಣ ನಾಲ್ಕು ಜನರೇ…
ಬೇರೆಯವರ ಜೀವನದಲ್ಲಿ ತಲೆ ಹಾಕಿ ಮಂಗಾ ಆಗ್ಬೇಡಿ..
- ಓಹ್… ಬದುಕೇ ಇಷ್ಟೇ ಸಾಕೆ? (ಭಾಗ-1)
- ಓಹ್… ಬದುಕೇ ಇಷ್ಟೇ ಸಾಕೆ? (ಭಾಗ-2)
- ಓಹ್… ಬದುಕು ಇಷ್ಟೇ ಸಾಕೆ? (ಭಾಗ-3)
- ಓಹ್… ಬದುಕು ಇಷ್ಟೇ ಸಾಕೆ? (ಭಾಗ-೪)
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ
