‘ಬದುಕಿನ ಬಗ್ಗೆ’ ಕವನ

ನಮ್ಮ ಜೀವನದ ರೀತಿ ನಮಗಾಗಬೇಕು ಸ್ಪೂರ್ತಿ, ಬದುಕೋಣ ನಾವು ಜೀವನ ಬೆಳಗುವ ರೀತಿ…ಕವಿ ನಾಗರಾಜ ಜಿ.ಎನ್.ಬಾಡ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಇಷ್ಟ ಆಗುವುದನ್ನು ತುಂಬ ಇಷ್ಟಪಡೋಣ
ಎತ್ತಿಟ್ಟು ಪ್ರೀತಿಯಿಂದ ಜೋಪಾನ ಮಾಡೋಣ
ಕಷ್ಟ ಆಗುವುದನ್ನ ದೂರವೆ ಇಟ್ಟುಬಿಡೋಣ
ನಮ್ಮ ನೆಮ್ಮದಿಯನ್ನ ಕಾಪಾಡಿಕೊಳ್ಳೋಣ

ಸಹಿಸಲಾಗದನ್ನು ಬಳಿಗೆ ಇಟ್ಟುಕೊಂಡು
ಸುಮ್ಮನೆ ಪರಿತಪಿಸುವುದು ವ್ಯರ್ಥ ವ್ಯರ್ಥ
ಮಾನಸಿಕ ಕಿರಿಕಿರಿ ಹೆಚ್ಚಾಗುವ ಮೊದಲೇ
ದೂರ ಸರಿಯುವುದರಲ್ಲಿದೆ ಬದುಕಿಗೆ ಅರ್ಥ

ನಮ್ಮ ಬದುಕಿನ ಬಗ್ಗೆ ನಮಗಿರಬೇಕು ಪ್ರೀತಿ
ಯಾರಂದುಕೊಂಡರೇನು ನಮಗೆ ಸ್ವಾರ್ಥಿ
ನಮ್ಮ ಜೀವನದ ರೀತಿ ನಮಗಾಗಬೇಕು ಸ್ಪೂರ್ತಿ
ಬದುಕೋಣ ನಾವು ಜೀವನ ಬೆಳಗುವ ರೀತಿ

ಯಾರ ಬಗ್ಗೆಯೂ ಬೇಕಿಲ್ಲ ನಮಗೆ ದ್ವೇಷ
ನಿವಾರಿಸಿಕೊಳ್ಳೋಣ ನಮ್ಮೊಳಗಿ ಲೋಪದೋಷ
ಹೊಂದಿಕೊಂಡು ಹೋಗುವುದರಲ್ಲಿದೆ ಸಂತೋಷ
ತುಂಬಿಕೊಳ್ಳೋಣ ಬಾಳಲ್ಲಿ ಸದಾ ಹರುಷ


  • ನಾಗರಾಜ ಜಿ.ಎನ್.ಬಾಡ, ಕುಮಟ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading