ಹರಿಹರ ಬಿ ಆರ್ ಅವರ ಸುಂದರ ಕವನ ತಪ್ಪದೆ ಮುಂದೆ ಓದಿ…
ಗೆದ್ದವರಿಗೆ ನಾನು ಗೆದ್ದೆನಾ ಎನಿಸುವುದು
ಹತ್ತು ಹೆಜ್ಜೆಗಳ ಶ್ರಮಗಳ ಫಲವಿತ್ತಿಹುದು
ಮನೆಯೇ ಮೊದಲ ಪಾಠಶಾಲೆಯಹುದು
ಗುರು ಮಾರ್ಗದರ್ಶನದ ಹಾದಿಯ ಹಿಡಿದು
ಹಿರಿಕಿರಿಯರ ಮಾತುಗಳ ಅಳವಡಿಸುತ
ಸಹನೆಗಳಿಗೆ ಸತತ ಧ್ಯಾನಗಳ ಮಾಡುತ
ಏಕಾಗ್ರತೆಗೆ ಚಿತ್ತವನು ವಿಲೀನಗೊಳಿಸುತ
ಅಭ್ಯಾಸ ಎಡಬಿಡದೆ ಮುಂದುವರೆಸುತ
ಮಿತಾಹಾರದಿ ಆರೋಗ್ಯ ಕಾಪಾಡುತಲಿ
ಗುರುತರ ದುರುದ್ದೇಶಗಳ ತ್ಯಜಿಸುತಲಿ
ದುಗುಡವ ಹತೋಟಿಯಲಿ ಇಡುತಲಿ
ಪಂದ್ಯದ ನಿಯಮಾವಳಿ ತಿಳಿದಿರುತಲಿ
ಎದುರಾಳಿ ಬಲಾಬಲಗಳ ವಿಶ್ಲೇಶಿಸುತ
ವಿವಿಧ ಕೋನಗಳಿಂದ ಅಲೋಚಿಸುತ
ಆತ್ಮವಿಶ್ವಾಸದಿ ಸದೃಢದಿ ತಯಾರಾಗುತ
ಫಲಿತಾಂಶದಿ ಆಶ್ಚರ್ಯಕರದಲಿ ವಿಜೇತ.
- ಹರಿಹರ ಬಿ ಆರ್
