‘ತಳಮಳ’ ಕವನ – ಸುಮತಿ ಕೃಷ್ಣಮೂರ್ತಿ

ಗಂಟಲಲಿ ಸಿಲುಕಿತ್ತು, ಹೃದಯದ ಹಾಡು… ರಾಗ ದೊರಕದ ಅದಕೆ, ಏಕಾಂಗಿ ಪಾಡು….ಸುಮತಿ ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಬಿತ್ತಿದ್ದ ಕವಿತೆ
ನೂರಾಗಲಿಲ್ಲ
ಫಲವತ್ತು ಭೂಮಿ
ದಕ್ಕಲೇ ಇಲ್ಲ
ಉತ್ತಿದ್ದು ಹೊತ್ತಿದ್ದು
ಮಣ್ಣಾಯಿತು
ಕಣ್ಣ ಬಟ್ಟಲು ಇಂಗಿ
ಬರಡಾಯಿತು

ಗಂಟಲಲಿ ಸಿಲುಕಿತ್ತು
ಹೃದಯದ ಹಾಡು
ರಾಗ ದೊರಕದ ಅದಕೆ
ಏಕಾಂಗಿ ಪಾಡು
ಕನ್ನಡಿಯಲಿ ಪ್ರತಿಬಿಂಬ
ಅಣಕಿಸುತಿತ್ತು
ಆತ್ಮರತಿ ಆಘಾತಕೆ
ನಲುಗುತ್ತಿತ್ತು

ಭಾವಗಳ ಅಡವಿಟ್ಟು
ಪದ ಸಾಲ ಪಡೆದು
ಬಡ್ಡಿಗಾಗಿಯೇ ನಿತ್ಯ
ಹಗಲಿರುಳು ದುಡಿದು
ಪದ ಮನೆಯ ಕೋಶ
ಬರಿದಾಗಿದೆ
ಬರೆದ ಅಕ್ಷರಗಳೆಲ್ಲಾ
ದಿವಾಳಿಯಾಗಿದೆ


  • ಸುಮತಿ ಕೃಷ್ಣಮೂರ್ತಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading