‘ಬಾಳ ದೀಪ’ ಕವನ – ಹೇಮಂತ್ ಪಾರೇರಾ

ಒಲಿದಭಾಗ್ಯಕ್ಕೆ ಶುದ್ಧ ಮನಸಿದ್ದಷ್ಟು ಸಾಕು, ಹಣತೆಯಂತೆ ಬದುಕುವಲ್ಲಿ ಚಂದ ನೋಡಾ…ಕೊಡಗಿನ ಕವಿ ಹೇಮಂತ್ ಪಾರೇರಾ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಮಣ್ಣಿನಿಂದ ಮಾಡಿದ ಹಣತೆಯ ಭಾಗ್ಯಕ್ಕೆ
ತುಪ್ಪವೆ ತೇಲಿ ಜ್ಯೋತಿ ಹೊತ್ತಿದೆ ನೋಡಾ
ಅಂಗಳದಲ್ಲಿ ನಾಲ್ಕು ನಡುಮನೆಗೂ ಬೆಳಕು
ದೀಪಾ ದೀವಳಿಗೆ ಕತ್ತಲೆ ಕಳೆದೀತು ನೋಡಾ ll

ಹಲಬಗೆಯ ರುಚಿ ಅಡುಗೆಮನೆ ಕಾಣಲು
ಮಡಿವಸ್ತ್ರದಲ್ಲಿ ಅವಳುಡುಗೆ ಹಬ್ಬನೋಡಾ
ಹೊಸಿಲಲ್ಲಿ ಬೆಳಗಿದ ದೀಪವೂ ಅವಳಿಂದ
ಬೆಳಕಾಗಿ ಇರುವಳು ಮನೆಯೊಡತಿ ನೋಡಾ ll

ಚಿನ್ನದ ಸೂಜಿ ಮೆರಗು ಹೆಚ್ಚೆಂದು ಕೇಳಲು
ನೆರೆಮನೆ ಸಿರಿಗೂ ಬೆಟ್ಟದಷ್ಟೇ ಕಷ್ಟ ನೋಡಾ
ಒಲಿದಭಾಗ್ಯಕ್ಕೆ ಶುದ್ಧ ಮನಸಿದ್ದಷ್ಟು ಸಾಕು
ಹಣತೆಯಂತೆ ಬದುಕುವಲ್ಲಿ ಚಂದ ನೋಡಾ ll

ಒಪ್ಪುವ ಸೂರಿರಲಿ ತನ್ನದಲ್ಲದ ಕಡೆಗಣಿಸಿ
ಇದ್ದಷ್ಟೂ ನೆಮ್ಮದಿಯೂ ಹಣೆಬರಹ ನೋಡಾ
ದಕ್ಕುದಲ್ಲದ ಆಸೆಗಳ ನರಕಕ್ಕೆ ಸಮವೆಂದು
ಇರುವುದೆಲ್ಲ ಸುಖವೆಂದರೆ ಸ್ವರ್ಗ ನೋಡಾ ll


  • ಹೇಮಂತ್ ಪಾರೇರಾ – ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading