ಬೆಂಡೆಕಾಯಿ ಫ್ರೈ ಊಟದ ರುಚಿ ಹೆಚ್ಚಿಸುತ್ತದೆ. ಮಾಡುವ ವಿಧಾನ ಸರಳವಾಗಿದ್ದು ಇದನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮಾಡಿ ನೋಡಿ…
ಬೇಕಾಗುವ ಸಾಮಗ್ರಿ :
ಬೆಂಡೆಕಾಯಿ – ಐದಾರು
ಕಾರ್ನ್ ಫ್ಲೋರ್ – ಒಂದೆರಡು ಸ್ಪೂನ್
ಅಕ್ಕಿ ಹಿಟ್ಟು – ಒಂದೆರಡು ಸ್ಪೂನ್
ಅಚ್ಚ ಮೆಣಸಿನ ಪುಡಿ – ಸ್ವಲ್ಪ
ಅರಶಿನ – ಸ್ವಲ್ಪ
ಉಪ್ಪು – ಸ್ವಲ್ಪ
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಬಟ್ಟೆಯಲ್ಲಿ ಒರೆಸಿ ನೀರಿನಂಶ ಹೋಗುವಂತೆ ನೋಡಿಕೊಳ್ಳಿ.

ಈಗ ಸಣ್ಣಗೆ ಉದ್ದದ್ದ ಕಟ್ ಮಾಡಿ ಒಂದು ಬೇಸನ್ ಗೆ ಹಾಕಿ ಉಪ್ಪು, ಅಚ್ಚ ಮೆಣಸಿನ ಪುಡಿ, ಅರಶಿನ, ಒಂದೆರಡು ಸ್ಪೂನ್ ಕಾರ್ನ್ ಫ್ಲೋರ್, ಒಂದೆರಡು ಸ್ಪೂನ್ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟು ಕೊಳ್ಳಿ. ನೀರು ಬೆರೆಸುವುದು ಬೇಡ.
ಒಂದು ಬಾಣಲಿಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಮಿಕ್ಸ್ ಮಾಡಿದ ಬೆಂಡೆಕಾಯಿ ಹಾಕಿ ಕೆಂಪಗಾಗುವ ತನಕ ಫ್ರೈ ಮಾಡಿ.
ತಣ್ಣಗಾದ ನಂತರ ಏರ್ ಟೈಟ್ ಕಂಟೈನರ್ ನಲ್ಲಿ ಹಾಕಿಟ್ಟರೆ ಬೇಕಾದಾಗ ಉಪಯೋಗಿಸಬಹುದು.
- ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು
