‘ಸ್ವಾತಿ ಮಳೆಯ ಬಿಂದು, ಚಿಪ್ಪಿನೊಳಗೆ ಬಂಧಿ’….ಕವಿಯತ್ರಿ ಅಂಜನಾ ಗಾಂವ್ಕರ್ ಅವರ ಸುಂದರ ಕವನ ಓದುಗರ ಮುಂದೆ, ತಪ್ಪದೆ ಓದಿ ಪ್ರೋತ್ಸಾಯಿಸಿ…
ಭ್ರಮೆಯ ಪೊರೆಯೊಳ್
ಬದುಕಿದೆ, ಎಷ್ಟು ಚೆಂದ,
ಭವದ ಹಂಗಿಲ್ಲ,
ಸಂಕೋಲೆಗಳಿಲ್ಲದ ಬಂಧ,
ಎಲ್ಲೆಲ್ಲೂ ತಡುಕಾಡಬೇಕಿಲ್ಲ,
ಏನೇನೂ ಹುಡುಕಬೇಕಿಲ್ಲ,
ಅಲ್ಲಲ್ಲೇ ಜೋಡಿಸಿತ್ತಂತೆ,
ಭಾವಗಳು ಬದಲಾಗಿಲ್ಲ.
ಏನೇನೂ ಹುಡುಕಬೇಕಿಲ್ಲ,
ಅಲ್ಲಲ್ಲೇ ಜೋಡಿಸಿತ್ತಂತೆ,
ಭಾವಗಳು ಬದಲಾಗಿಲ್ಲ.
ಸ್ವಾತಿ ಮಳೆಯ ಬಿಂದು,
ಚಿಪ್ಪಿನೊಳಗೆ ಬಂಧಿ,
ಕತ್ತಲೆಯ ಕೋಣೆಯೊಳು
ಹೊಳೆದರೂ ಕಾಣಿಸದ ಸಂಧಿ.
ಚಿಪ್ಪಿನೊಳಗೆ ಬಂಧಿ,
ಕತ್ತಲೆಯ ಕೋಣೆಯೊಳು
ಹೊಳೆದರೂ ಕಾಣಿಸದ ಸಂಧಿ.
ಕುಹುಕದ ನುಡಿಗಳೇ,
ಸ್ವಾರ್ಥದ ನಡೆಗಳೇ,
ಎದೆಗಳಲಿ ತುಂಬಿರಲು
ಬರೀ ಕತ್ತಲ ವೇಷಧಾರಿಗಳೇ,
ಸ್ವಾರ್ಥದ ನಡೆಗಳೇ,
ಎದೆಗಳಲಿ ತುಂಬಿರಲು
ಬರೀ ಕತ್ತಲ ವೇಷಧಾರಿಗಳೇ,
ಬದಲಾಗದ ನೆಲಮುಗಿಲ,
ಸ್ವಾರ್ಥವಿರದೆ ಬೆಳೆದ ಪೈರ,
ನೋಡಿದಾಗಲೆಲ್ಲ ಅನಿಸಿದೆ,
ನಮ್ಮಲ್ಲೇಕೆ ಇಂತಹ ವೈರ.
ಸ್ವಾರ್ಥವಿರದೆ ಬೆಳೆದ ಪೈರ,
ನೋಡಿದಾಗಲೆಲ್ಲ ಅನಿಸಿದೆ,
ನಮ್ಮಲ್ಲೇಕೆ ಇಂತಹ ವೈರ.
ದಿನವೂ ಬರುವ ಸೂರ್ಯನಂತೆ,
ಕತ್ತಲಕಳೆದು ಬೆಳಗುವಂತೆ,
ಬದುಕಬೇಕು ಇರುವಂತೆ,
ನೆಲ ಮುಗಿಲು ಬದಲಾಗದಂತೆ.
ಕತ್ತಲಕಳೆದು ಬೆಳಗುವಂತೆ,
ಬದುಕಬೇಕು ಇರುವಂತೆ,
ನೆಲ ಮುಗಿಲು ಬದಲಾಗದಂತೆ.
- ಅಂಜನಾ ಗಾಂವ್ಕರ್ (ಕವಿಯತ್ರಿ)
