ದೇಶದ ಅತಿದೊಡ್ಡ ಸುರಂಗ ಮಾರ್ಗ ಬಹುತೇಕ ಪೂರ್ಣ, ಇನ್ನೆರಡು ವರ್ಷದಲ್ಲಿ ಕೆಲಸ ಮುಕ್ತಾಯ. ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ೧೩.೯ ಕಿಮೀ ಉದ್ದದ ಸುರಂಗ ಮಾರ್ಗ ದೇಶದಲ್ಲೇ ಅತಿದೊಡ್ಡದಾದ ಸುರಂಗ ಮಾರ್ಗ ಎನ್ನಿಸಿದೆ. ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಸುರಂಗ ಕೊರೆಯುವಲ್ಲಿ ತೊಡಗಿಸಿಕೊಂಡಿದೆ. ಈ ಕುರಿತ ಒಂದು ವರದಿ…
ನಮ್ಮ ಮೆಟ್ರೋದ ಗೊಟ್ಟಿಗೇರೆ-ನಾಗವಾರದವರೆಗಿನ ೨೧.೩೦ಕಿಮೀ ಗುಲಾಬಿ ಮಾರ್ಗದ ಭಾಗವಾಗಿರುವ ಸುರಂಗ ಮಾರ್ಗದ ಕಾಮಗಾರಿ ಚುರುಕಿನಿಂದ ಸಾಗಿದೆ. ಇನ್ನೆರಡು ವರ್ಷದಲ್ಲಿ ಮುಕ್ತಾಯವಾಗುವ ನಿರೀಕ್ಷೆ ಇದೆ.
ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ೧೩.೯ ಕಿಮೀ ಉದ್ದದ ಸುರಂಗ ಮಾರ್ಗ ದೇಶದಲ್ಲೇ ಅತಿದೊಡ್ಡದಾದ ಸುರಂಗ ಮಾರ್ಗ ಎನ್ನಿಸಿದೆ. ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಸುರಂಗ ಕೊರೆಯುವಲ್ಲಿ ತೊಡಗಿಸಿಕೊಂಡಿದೆ. ಈವರೆಗೆ ಒಟ್ಟಾರೆ ಶೇ. ೭೪.೯೦ರಷ್ಟು ಸುರಂಗ ಕೊರೆಯುವ ಕಾರ್ಯ ಮುಗಿದಿದೆ ಎಂದು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಹೇಳಿದೆ.
ಫೋಟೋ ಕೃಪೆ : google
ರುದ್ರ ಟಿಬಿಎಂ ಡೈರಿ ಸರ್ಕಲ್‌ನಿಂದ ಲಕ್ಕಸಂದ್ರದ ಸ್ಟೇಷನ್‌ವರೆಗೆ ಸುರಂಗ ಕೊರೆಯುತ್ತಿದೆ. ಈವರೆಗೆ ಶೇ. ೬೨ರಷ್ಟು ಕಾಮಗಾರಿ ಪೂರ್ಣಗೊಳಿಸಿ ಕೆಲಸ ಮುಂದುವರಿಸಿದೆ. ವಾಮಿಕಾ ಟಿಬಿಎಂ ಶೇ.೬೭ರಷ್ಟು ಸಾ‘ನೆಯೊಂದಿಗೆ ಲಕ್ಕಸಂದ್ರದಿಂದ ಲಾಂಗ್‌ಫೋರ್ಡ್ ಟೌನ್ ನಿಲ್ದಾಣದವರೆಗೆ ದಕ್ಷಿಣಕ್ಕೆ ಸುರಂಗದ ಕೆಲಸ ಮುಂದುವರಿಸಿದೆ. ಭದ್ರಾ ಟಿಬಿಎಂ ಉತ್ತರಾಭಿಮುಖವಾಗಿ ವೆಂಕಟೇಶಪುರದಿಂದ ಕಾಡುಗೊಂಡನಹಳ್ಳಿವರೆಗೆ ಶೇ. ೩೫ ಹಾಗೂ ತುಂಗಾ ಟಿಬಿಎಂ ವೆಂಕಟೇಶಪುರದಿಂದ ದಕ್ಷಿಣಾಭಿಮುಖವಾಗಿ ಕಾಡುಗೊಂಡನಹಳ್ಳಿ ಮಾರ್ಗವಾಗಿ ಸುರಂಗ ಕೊರೆಯುತ್ತ ಸಾಗಿದ್ದು, ಶೇ.೪೪ರಷ್ಟು ಕಾಮಗಾರಿ ಮುಗಿಸಿದೆ.
ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿ ನಗರ ನಡುವೆ ೨.೭ಕಿಮೀ ಉದ್ದದ ಸುರಂಗವನ್ನು ಟಿಬಿಎಂ ಅವನಿ ಮತ್ತು ಲಾವಿ ಕೊರೆದಿವೆ. ಟಿಬಿಎಂ ಲಾವಿ ಎಂ.ಜಿ.ರಸ್ತೆಯಿಂದ ವೆಲ್ಲಾರದವರೆಗೆ ಹಾಗೂ ಟಿಬಿಎಂ ಊರ್ಜಾ ಎರಡು ಡ್ರೈವ್‌ಗಳಲ್ಲಿ ಕೆಲಸ ನಿರ್ವಹಿಸಿ ದಂಡು ರೈಲ್ವೇ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ ಸುರಂಗ ದಾರಿ ಕೊರೆದಿದೆ. ವಿಂಧ್ಯಾ ಟಿಬಿಎಂ ಪಾಟರಿ ಟೌನ್ ಸ್ಟೇಷನ್‌ನಿಂದ ರಿಟ್ರಿವಲ್ ಶ್ಟ್‌ಾವರೆಗೆ ಸುರಂಗ ನಿರ್ಮಿಸಿದೆ.
ಸುರಂಗದಡಿಯ ಸಿವಿಲ್ ಕಾಮಗಾರಿ ೨೦೨೪ರ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ೧೨ ನಿಲ್ದಾಣ ಹಾಗೂ ಎತ್ತರಿಸಿದ ಮಾರ್ಗದಲ್ಲಿನ ೬ ನಿಲ್ದಾಣಗಳ ಕೆಲಸ ನಡೆಯುತ್ತಿದೆ. ಟ್ರ್ಯಾಕ್ ಅಳವಡಿಕೆ, ಸಿಗ್ನಲಿಂಗ್, ವಿದ್ಯುತ್ ಸಂಪರ್ಕ, ಸುರಕ್ಷತಾ ಕ್ರಮದ ಕಾಮಗಾರಿ ಸೇರಿ ಸಂಪೂರ್ಣ ಕೆಲಸ ಮುಗಿಯಲು ಇನ್ನೆರಡು ವರ್ಷ ಕಾಯಬೇಕಿದೆ.
- ಆಕೃತಿ ನ್ಯೂಸ್