ಪಪ್ಪಾಯ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಪಪ್ಪಾಯ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ನಿಜ… ಆದ್ರೆ ಎಲ್ಲರೂ ಪಪ್ಪಾಯ ತಿನ್ನುವ ಹಾಗಿಲ್ಲ. ಯಾರೆಲ್ಲ ಪಪ್ಪಾಯ ತಿನ್ನಬಾರದು ಹಾಗಾದರೆ..
ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು. ತೂಕ ಇಳಿಕೆಗೂ ಸಹಕಾರಿ. ಯಕೃತಿನ ಆರೋಗ್ಯಕ್ಕೂ ಇದು ಉತ್ತಮ ಆಹಾರ. ಪಪ್ಪಾಯ ಹಣ್ಣು ತಿನ್ನೋದಕ್ಕಿಂತ ಕಾಯಿ ಪಪ್ಪಾಯ ಹೆಚ್ಚು ಪ್ರಯೋಜನಕಾರಿ ಎಂಬ ಮಾತಿದೆ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ. ಪಪ್ಪಾಯ ಎಲ್ಲರಿಗೂ ಒಳ್ಳೆಯದಲ್ಲ. ಯಾರು ಪಪ್ಪಾಯ ತಿನ್ನಬಾರದು, ತಿಂದರೆ ಪರಿಣಾಮವೇನು?
ಫೋಟೋ ಕೃಪೆ :google
ಗರ್ಭಿಣಿಯರು :
ಹೌದು ಗರ್ಭಿಣಿಯರು ಪಪ್ಪಾಯ ತಿನ್ನಲೇಬಾರದು. ಇದರಲ್ಲಿ ಲ್ಯಾಟೆಕ್ಸ್ ಮತ್ತು ಪಾಪೈನ್ ಅಂಶವಿದೆ. ಕೆಲವೊಮ್ಮೆ ಗರ್ಭಪಾತಕ್ಕೂ ಇದು ಕಾರಣವಾಗಬಹುದು. ಅನಿಯತ ಹೃದಯ ಬಡಿತ ಹೊಂದಿರುವ ಜನ ಹೃದಯ ಬಡಿತ ಸಮರ್ಪಕವಾಗಿ ಇಲ್ಲದೇ ಇರುವಂಥವರು ಅಂದರೆ ಅನಿಯತ ಹೃದಯ ಬಡಿತ ಹೊಂದಿದವರು ಪಪ್ಪಾಯ ಸೇವಿಸಬಾರದು. ಅತಿಯಾಗಿ ಪಪ್ಪಾಯ ಹಣ್ಣು ಸೇವಿಸಿದರೆ ಇಂಥವರಲ್ಲಿ ಹೃದಯ ಸಮಸ್ಯೆ ಕಾಣಿಸಬಹುದು.
ಫೋಟೋ ಕೃಪೆ :google
ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು :
ಕಿಡ್ನಿ ಸ್ಟೋನ್ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಾದ್ರೆ ದಯವಿಟ್ಟು ಪಪ್ಪಾಯ ಸೇವಿಸಬೇಡಿ. ಈ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಅತಿಯಾದ ವಿಟಮಿನ್ ಸಿ ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾದೀತು.
ಹೈಪೊಗ್ಲಿಸಿಮಿಯಾ ಇರುವಂಥವರು :
ಹೈಪೊಗ್ಲಿಸಿಮಿಯಾ ಸಮಸ್ಯೆ ಇರುವವರು ಪಪ್ಪಾಯ ತಿನ್ನಬಾರದು. ಈ ಹಣ್ಣು ರಕ್ತದ ಸಕ್ಕರೆಯ ನಿಯಂತ್ರಣಕ್ಕೆ ಸಹಕಾರಿ. ಆದರೆ, ಈ ಹಣ್ಣಿನಲ್ಲಿ ಹೈಪೊಗ್ಲಿಸಿಮಿಕ್ ವಿರೋಧಿ ಗುಣಗಳಿವೆ. ಇದು ಗ್ಲೂಕೋಸ್ ಅಥವಾ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆರೋಗ್ಯ ಸಮಸ್ಯೆ ಇರುವಂಥವರು ಡಾಕ್ಟರ್ ಸಲಹೆ ಪಡೆದುಕೊಂಡೇ ಈ ಪಪ್ಪಾಯ ಹಣ್ಣು, ಪಪ್ಪಾಯ ಕಾಯಿ ಸೇವಿಸುವುದು ಉತ್ತಮ.