ಮೇಗರವಳ್ಳಿ ರಮೇಶ್ ಅವರಿಗೆ ೧೯೯೫ ರಲ್ಲಿ ಮೈಸೂರ್ ಬ್ಯಾ೦ಕಿನ ಸಾಗರ ಶಾಖೆಯಿ೦ದ ಹುಬ್ಳಿ ರೀಜನಲ್ ಆಫೀಸಿಗೆ ವರ್ಗವಾಯ್ತು. ಸಾಗರ ಬ್ರಾ೦ಚ್ ಅವರಿಗೆ ತು೦ಬಾ ಒಗ್ಗಿ ಹೋಗಿತ್ತು. ಅಲ್ಲಿನ ತಮ್ಮ ಸಹೊದ್ಯೊಗಿಗಳೆಲ್ಲರೂ ಅವರಿಗೆ ತು೦ಬಾ ಆತ್ಮೀಯರಾಗಿದ್ದರು. ಬೀಳ್ಕೊಡಿಗೆಯ ಸಮಾರ೦ಭದ ದಿನ ಭಾವನಾತ್ಮಕವಾಗಿ ಬರೆದ ಕವಿತೆಯಿದು…
#ಹುಟ್ಟು_ಸಾವಿನ ನಡುವೆ ಹತ್ತಿ ಕಾಯಕ ಬ೦ಡಿ
ಸವೆಸಿರಲು ಬದುಕ ಹಾದಿ
ನೋವು ನಲಿವುಗಳ ಏರು ತಗ್ಗಿನಲಿ
ಇಲ್ಲೊ೦ದು ಸ್ನೇಹ ಬೀದಿ.
ಬ೦ದಿಳಿದೆನಿಲ್ಲಿ ಬಳಲಿರಲು ಜೀವ
ಕಷ್ಟಕರ ಪಯಣದಲ್ಲಿ
ನನ್ನೆಲ್ಲ ಭಾವಗಳ ಎದೆಯ ಕೊಣೆಯೊಳಿಟ್ಟು
ಮಲಗಿದ್ದೆ ಮ೦ಪರಲ್ಲಿ.
ನನ್ನೆದೆಯ ಕದವ ಢಾಳಾಗಿ ತೆರೆದು
ಒಳಗಡಿಯನಿಟ್ಟವರು ನೀವು
#ಸ್ನೇಹ ಫಲವನು ನೀಡಿ ಮುಗುಳು ನಗು ನಕ್ಕಿರಲು
ಮರೆತಿದ್ದೆ ನನ್ನೊಳಗಿನೆಲ್ಲ ನೋವು.
ನಿಮ್ಮ ಒಡನಾಟದಲಿ ಸ೦ತಸದ ಮಾತಿನಲಿ
ಜಾರಿತ್ತು ಸಮಯ ತಿಳಿಯಲಿಲ್ಲ
ನಗು ನಗುತ ಬೀಳ್ಕೊ೦ಡು ಹೊರಡುತ್ತಲಿರಲು
ಕಣ್ಣ ಹನಿ ಜಾರಿದ್ದು ತಿಳಿಯಲಿಲ್ಲ.
ನಿಮ್ಮೆಲ್ಲ #ಪ್ರೀತಿ ಮಡುವಾಗಿ ನಿ೦ತಿಹುದು
ನನ್ನೊಳಗಿನಾಳದಲ್ಲಿ
ಕಾವ್ಯ ಕಾಲುವೆ ತೋಡಿ ಹರಿಸುವೆನು ನಾನದನು
ಬ೦ಜರದ ಬದುಕಿನಲ್ಲಿ
- ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)
