ಬಿಲ್ವಪತ್ರೆ ಇದು ಹಿಂದೂ ಧರ್ಮದಲ್ಲಿ ಪವಿತ್ರ ಮರ. ಶಿವನಿಗೆ ಪ್ರತಿದಿನ ಮತ್ತು ವಿಶೇಷ ವಾಗಿ ಮಹಾಶಿವರಾತ್ರಿಯ ದಿವಸ ಬಿಲ್ವಪತ್ರೆಯಿಂದ ಶಿವನನ್ನು ಪೂಜಿಸಿದರೆ, ಶಿವನ ವಿಶೇಷ ಅನುಗ್ರಹ ಸಿಗುತ್ತದೆ ಎಂದು ನಂಬಿಕೆಯಿದೆ. ಬಿಲ್ವಪತ್ರೆ ಮಹತ್ವದ ಕುರಿತು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಆಯುರ್ವೇದ ದ ಮೆಡಿಸಿನ್ ನಲ್ಲಿನ ಉಪಯೋಗ ಮನಗಂಡ ಹಿರಿಯರು ದೇವರ ಪೂಜೆಯ ನೆಪದಲ್ಲಿ ನಮ್ಮೊಂದಿಗೆ ಬೆರೆಸಿ ಬೆಳೆಸಿ ವನದ ರೂಪ ಕೊಟ್ಟಿದ್ದಾರಾ ಅನ್ನಿಸದಿರದು: ನೆಗಡಿ, ಕೆಮ್ಮು, ದಮ್ಮು.
ಶ್ವಾಸಕೋಶದ ಸಮಸ್ಯೆಗಳು : ಕ್ಷಯರೋಗದಿಂದ ಬಳಲುತ್ತಿರುವವರು ಉಪಯೋಗಿಸಬಹುದಾದ ದೇಹದ ಉಷ್ಣತೆ ಹೆಚ್ಚಿಸಲು ನೆರವಾಗುತ್ತದೆ. ಇದರ ಎಲೆ, ಹೂವು, ಕಾಯಿ, ಬೇರುಗಳನ್ನು ಔಷಧಿಯಾಗಿ ಉಪಯೋಗಿಸಬಹುದು.

ಫೋಟೋ ಕೃಪೆ :google
- ಊಟದ ನಂತರ ಬಿಲ್ವದ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಜೇನು ತುಪ್ಪ ಸೇರಿಸಿ ತಿಂದರೆ ಕಫ ನೀರಾಗುತ್ತದೆ.
- ನೆಗಡಿಯಾದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ.
- ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮುಂಜಾನೆ ಎದ್ದಕೂಡಲೇ ಒಂದು ಬಿಲ್ವದ ಎಲೆಯನ್ನು ೨-೩ ಕಾಳುಮೆಣಸಿನೊಂದಿಗೆ ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು.
- ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಿಕೊಳ್ಳಬೇಕು. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ ಮತ್ತು ಹೆನು ಉದುರುವುದು. ಅಕಾಲ ನರೆಕೂದಲು ಸಮಸ್ಯೆ ನಿವಾರಣೆಯಾಗುತ್ತದೆ.
- ವಾತದ ದೋಷಗಳನ್ನು ನಿವಾರಿಸುವ ಗುಣ ಬೇರಿನಲ್ಲಿದೆ. 6)ಬಿಲ್ವದ ಹಸಿಕಾಯಿ ಕಫ ಮತ್ತು ವಾತನಿವಾರಕವಾಗಿದೆ.
- ಬಿಲ್ವದ ಹಣ್ಣು ಹಸಿವು ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಹೊಟ್ಟೆ ನೋವು ಮತ್ತು ಭೇದಿಗೆ ಚಿಕಿತ್ಸೆ ಮಾಡಲು ನೆರವಾಗುತ್ತದೆ. ಪಕ್ವವಾದ ಬಿಲ್ವದ ಹಣ್ಣು ವಾತಪಿತ್ತವನ್ನು ಹೆಚ್ಚಿಸುತ್ತದೆ. ಕಫವನ್ನು ಕಡಿಮೆ ಮಾಡುತ್ತದೆ.
- ಬಿಲ್ವಪತ್ರೆಯ ಹಣ್ಣಿನ ಸೇವನೆ ಮಾಡಿದರೆ ಅಜೀರ್ಣ, ತಿಸಾರ, ರಕ್ತದಿಂದಾಗುವ ತೊಂದರೆಗಳು ಪಿತ್ತ, ವಾತ, ಕಫ, ಕಡಿಮೆಯಾಗುತ್ತದೆ.
- ಪಕ್ವಗೊಂಡ ಹಣ್ಣುಗಳನ್ನು ತಿರುಳು ತೆಗೆದು ಒಣಗಿಸಿ ಕಾಲು ಚಮಚ ಪುಡಿಯನ್ನು ಹಾಲು ಅಥವಾ ನೀರುಸೇರಿಸಿ ಕುಡಿಯುವುದರಿಂದ ದೇಹಪುಷ್ಟಿ ಆಗುತ್ತದೆ.
- ತಿರುಳನ್ನು ನುಣ್ಣಗೆ ರುಬ್ಬಿ ಎಳ್ಳೆಣ್ಣೆ ಸೇರಿಸಿ ಬೆರಣಿಯಲಿ ತಿಳುವಾದ ಬಟ್ಟೆಯನ್ನು ಸುತ್ತಿ ಹತ್ತು ದಿನ ಬಿಸಿಲಿನಲ್ಲಿ ಇಟ್ಟು ನಂತರ ಸೊಸಿ ಗಾಳಿಯಾಡದಂತೆ ಇಡಬೇಕು. ಇದು ಸುಟ್ಟ ಗಾಯಕ್ಕೆ ಒಳ್ಳೆಯ ಮೆಡಿಸಿನ್.
- ಹಣ್ಣುಗಳ ಓಡುಗಳನ್ನು ಸಂಗ್ರಹಿಸಿ ಹೊಗೆ ಹಾಕುವುದರಿಂದ ಸೊಳ್ಳೆಗಳು ಮನೆಯಿಂದ ಹೊರಗೆ ಹೊಗುವುದು.
- ಪತ್ರೆ ಮರದ ಅಂಟನ್ನು ಪಾನಕ ಮಾಡಿ ಕುಡಿಯುವುದರಿಂದ ಅತಿಸಾರ ಗುಣವಾಗುತ್ತದೆ.
- ಅಂಟಿನೊಂದಿಗೆ ದನಿಯಾ ಮತ್ತು ಕಲ್ಲು ಸಕ್ಕರೆ ಸೇರಿಸಿ ಕಷಾಯ ಮಾಡಿ ಕುಡಿದರೆ ಕಾಲರಾ ಗುಣವಾಗುತ್ತದೆ.
- ಪತ್ರೆಯ ರಸವನ್ನು ಅಕ್ಕಿತೊಳೆದ ನೀರಿನಲ್ಲಿ ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಮೂರು ಬಾರಿ ಗರ್ಭಿಣಿ ಯರ ವಾಂತಿ ಭೇದಿ ನಿಲ್ಲುತ್ತದೆ.
- ಒಂದು ಚಮಚ ತಾಜಾ ಎಲೆಯ ರಸ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದು ಕೊಂಡರೆ ಶುಗರ್ ನಾರ್ಮಲ್ ಬರುತ್ತದೆ. ನಾನು ತಯಾರಿಸುವ ಶುಗರ್ ಮೆಡಿಸಿನ್ ನಲ್ಲಿ ಬಿಲ್ಲವ ಪುಡಿಯನ್ನು ಉಪಯೋಗಿಸಿ ರುತ್ತೇನೆ.
- ತಾಜಾ ಎಲೆಯ ರಸ ಅರೆದು ಪೇಸ್ಟ್ ಮಾಡಿ ಗಾಯಬಾವಿಗೆ ಹಚ್ಚಿದರೆ ಗುಣವಾಗುತ್ತದೆ.
- ತಾಜಾ ಎಲೆಯನ್ನು ಅರೆದು ಪೇಸ್ಟ್ ಮಾಡಿ ಕಣ್ಣಿಗೆ ಪಟ್ಟಿ ಕಟ್ಟಿದರೆ ಕಣ್ಣು ಉರಿ ನೋವು ಗುಣವಾಗುತ್ತದೆ.
- ಎಲೆಯ ರಸದಲ್ಲಿ ಶುದ್ಧ ಆಕಳು ತುಪ್ಪವನ್ನು ಸೇರಿಸಿ ಸೇವಿಸಿ ದರೆ ಹೃದಯದ ಬಲವಾಗುತ್ತದೆ.
- ಮುಳ್ಳು ಗಾಜು ದೇಹದ ಒಳ ಸೇರಿ ತೆಗೆಯಲು ಸಾದ್ಯವಿಲ್ಲ ವಾದರೆ ಎಲೆಗಳನ್ನು ನೂಣ್ಣಗೆ ಅರೆದು ಕಟ್ಟಿದರೆ ಕರಗಿ ಗಾಯಗುಣವಾಗುತ್ತದೆ.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು.
