ಸಂಧಿವಾತ (Arthritis) ಎಂದರೆ ಕೇವಲ ವಯಸ್ಸಾದವರಲ್ಲಿ ಮಾತ್ರ ಬರುವ ಸಮಸ್ಯೆಯಲ್ಲ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಮಂಡಿ, ಭುಜ, ಸೊಂಟ, ಕುತ್ತಿಗೆ, ಬೆರಳುಗಳ ಕೀಲುಗಳಲ್ಲಿ ನೋವು, ಊತ ಮತ್ತು ಬಿಗಿತ ಹೆಚ್ಚಾಗಿ ಕಂಡುಬರುತ್ತಿದೆ. ಸಂಧಿವಾತದ ಕುರಿತು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಾಮಾನ್ಯ ಕಾರಣಗಳು:
- ವಯೋಸಹಜ ಕೀಲು ಸವೆತ (Osteoarthritis)
- ಸಂಧಿವಾತದ ಉರಿಯೂತ (Rheumatoid Arthritis)
- ಅಧಿಕ ತೂಕ
- ಹಳೆಯ ಗಾಯಗಳು
- ವ್ಯಾಯಾಮದ ಕೊರತೆ
ಕೆಲವು ಚಯಾಪಚಯ (Metabolic) ಸಮಸ್ಯೆಗಳು :
ಮನೆಯಲ್ಲೇ ಮಾಡಬಹುದಾದ ಕ್ರಮಗಳು:
- ಪ್ರತಿದಿನ ಮಿತವಾದ ವ್ಯಾಯಾಮ ಮತ್ತು ನಡೆಯುವ ಅಭ್ಯಾಸ ಮಾಡಿ.
- ಅಧಿಕ ತೂಕವಿದ್ದರೆ ನಿಧಾನವಾಗಿ ತೂಕ ಇಳಿಸಿಕೊಳ್ಳಿ.
- ನೋವಿರುವ ಕೀಲುಗಳಿಗೆ ಅಗತ್ಯಕ್ಕೆ ತಕ್ಕಂತೆ ಬೆಚ್ಚಗಿನ ಶಾಖ ನೀಡಬಹುದು (ತೀವ್ರ ಊತ ಇದ್ದರೆ ವೈದ್ಯರ ಸಲಹೆ ಪಡೆಯಿರಿ).
- ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ D ಮತ್ತು ಸಮತೋಲನ ಆಹಾರ ಸೇವಿಸಿ.
- ನೆಲದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ಅತಿಯಾದ ಮೆಟ್ಟಿಲು ಹತ್ತಿಳಿಯುವುದು ಮತ್ತು ಕೀಲುಗಳಿಗೆ ಅತಿಯಾದ ಒತ್ತಡ ನೀಡುವುದನ್ನು ತಪ್ಪಿಸಿ.
ಗಮನಿಸಿ: ಕೀಲುಗಳಲ್ಲಿ ಕೆಂಪಾಗುವುದು, ಹೆಚ್ಚು ಊತ, ಬೆಳಿಗ್ಗೆ ಒಂದು ಗಂಟೆಗೂ ಹೆಚ್ಚು ಬಿಗಿತ, ಜ್ವರ ಅಥವಾ ಹಲವಾರು ಕೀಲುಗಳಲ್ಲಿ ಒಂದೇ ಸಮಯದಲ್ಲಿ ನೋವು ಇದ್ದರೆ ವೈದ್ಯರನ್ನು ಸಂಪರ್ಕಿಸಿ. ಇವು ಉರಿಯೂತದ ಸಂಧಿವಾತದ ಲಕ್ಷಣಗಳಾಗಿರಬಹುದು.
ಆಯುರ್ವೇದದ ದೃಷ್ಟಿಯಲ್ಲಿ, ಸಂಧಿವಾತಕ್ಕೆ ಕೇವಲ ನೋವು ನಿವಾರಿಸುವುದು ಮಾತ್ರ ಚಿಕಿತ್ಸೆ ಅಲ್ಲ. ಕಾರಣವನ್ನು ಕಂಡುಹಿಡಿದು, ಆಹಾರ-ವಿಹಾರದಲ್ಲಿ ಬದಲಾವಣೆ, ಸೂಕ್ತ ಔಷಧಿಗಳು, ಎಣ್ಣೆ ಚಿಕಿತ್ಸೆ .
ಸಂಧಿವಾತದ ಆರಂಭಿಕ ಹಂತದಲ್ಲಿ:
ಹೊಂಗೆ ಚಿಗುರು ಎಲೆಗಳನ್ನು ಸ್ವಚ್ಛವಾಗಿ ತೊಳೆದು ನುಣ್ಣಗೆ ಅರೆದು, ಸ್ವಲ್ಪ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಸೇರಿಸಿ ಸ್ವಲ್ಪ ಬಿಸಿ ಮಾಡಿ ನೋವಿರುವ ಕೀಲುಗಳ ಮೇಲೆ ಲೇಪಿಸಿ 30–45 ನಿಮಿಷ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಬಹುದು. ಇದು ಕೆಲವರಿಗೆ ನೋವು ಮತ್ತು ಉರಿಯೂತ ಕಡಿಮೆಯಾಗಲು ಸಹಾಯ ಮಾಡಬಹುದು ಎಂಬ ಜನಪದ ಅನುಭವವಿದೆ.
ಜೊತೆಗೆ ಪ್ರತಿದಿನ ಮಿತವಾದ ವ್ಯಾಯಾಮ, ಬೆಚ್ಚಗಿನ ನೀರಿನ ಶಾಖ ಮತ್ತು ವಾತವನ್ನು ಹೆಚ್ಚಿಸುವ ಆಹಾರವನ್ನು ಕಡಿಮೆ ಮಾಡುವುದು ಸಹ ಪ್ರಯೋಜನಕಾರಿ. ಸಂಧಿವಾತವನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದರೆ ಕೀಲುಗಳ ಹಾನಿಯನ್ನು ಕಡಿಮೆ ಮಾಡಬಹುದು. ನೋವು ಸಹಿಸಿಕೊಂಡು ಕಾಲಹರಣ ಮಾಡಬೇಡಿ.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು
