‘ಬಿಂಬ ಪ್ರತಿಬಿಂಬ’ ಕವನ

ಕಣ್ಮನವ ಸೆಳೆವ ಬಿಂಬಕೆದುರಾಗೆ ಕಣ್ತೆರೆವ ಪ್ರತಿಬಿಂಬ, ಎದುರಾದ ಅಸ್ಥಿ ಪಂಜರ ಯಾವ ಅರಿವೆಯ ಬೇಡದು… ಕವಿ ವೀಣಾ ವೈಷ್ಣವಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಸೃಷ್ಟಿಯ ಸೊಬಗಿದು ಕಣ್ಮುಂದೆ ಕಾಣುತಿಹುದು
ಮಾಂಸ ಮಜ್ಜೆಗಳ ಆಕಾರ ಕಳಚಲದುವೆ ವಿಕಾರ
ಇದರ ಮರ್ಮವ ಅರಿತಾಗ ಬಾಳು ಸಾಕಾರ.

ಕಣ್ಮನವ ಸೆಳೆವ ಬಿಂಬಕೆದುರಾಗೆ ಕಣ್ತೆರೆವ ಪ್ರತಿಬಿಂಬ
ನಶ್ವರದ ರೂಪು ಲಾವಣ್ಯದಲ್ಲಿ ಗುಟ್ಟೊಂದು ಅಡಗಿಹುದು
ಎದುರಿನ ದರ್ಪಣದಲಿ ಶಾಶ್ವತ ಸತ್ಯವೂ ಕಾಣುತಿಹುದು.

ಬೆಡಗು ಭಿನ್ನಾಣದ ದೇಹವಿದು ಮೂಳೆಯ ಹಂದರವದು
ನುಣ್ಣಗೆ ಹೊಳಪಿನ ರೇಶಿಮೆ ವಸ್ತ್ರವ ತನು ಧರಿಸಿಹುದು
ಎದುರಾದ ಅಸ್ಥಿ ಪಂಜರ ಯಾವ ಅರಿವೆಯ ಬೇಡದು.

ಮುಚ್ಚಿದ ಚಿತ್ತದ ಭಿತ್ತಿಯಲಿ ಆಸೆಯ ಅಂಧಕಾರವಿಹುದು
ತೆರೆದ ಎಲುಬು ಗೂಡಲಿ ನಿರ್ಭಾವ ಬಿಳಿಯ ಕಾಯವದು
ಕಪ್ಪು ಬಿಳುಪಿನ ಬಣ್ಣದಲ್ಲಿ ಸತ್ಯವೂ ಹೊಳೆಯುತಿಹುದು.

ನಾನೇನ್ನುವುದೇ ಮಿತ್ಯ ಬದುಕ ದರ್ಪಣದಿ ಕಾಣು ಸತ್ಯ
ಕೊನೆಗೂಳ್ಳದ ಮೋಹವಿದು ಬದುಕಿನಡೆಗೋ,
ಎಲ್ಲಾ ಕೊನೆಗೊಂಡು ನಡೆವುದು ಮಸಣದೆಡೆಗೋ.


  •  ವೀಣಾ ವೈಷ್ಣವಿ – ಕವಿಗಳು

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading