ಮೆಣಸಿಕಾಯಿ ಬಜ್ಜಿ, ಆಲೂಗಡ್ಡೆ ಬಜ್ಜಿ, ಹಿರೇಕಾಯಿ ಬಜ್ಜಿ, ತಿಂದು ಅದರ ರುಚಿ ಸವಿದಿದ್ದೀರಿ. ಹಾಗಲಕಾಯಿ ಪಲ್ಯ, ಗೊಜ್ಜು ತಿಳಿದಿರಬಹುದು. ಆದರೆ ಬಜ್ಜಿ ಮಾಡಿ ಒಮ್ಮೆ ತಿನ್ನಿ ಎನ್ನುತ್ತಾರೆ ನಳಪಾಕ ಪ್ರವೀಣೆ ರತ್ನ ಜಾಧವ್ ಅವರು, ತಪ್ಪದೆ ಮುಂದೆ ಓದಿ…
ಬೇಕಾಗುವ ಸಾಮಗ್ರಿಗಳು :
- ಹಾಗಲಕಾಯಿ
- ಕಡಲೆಹಿಟ್ಟು
- ಸ್ವಲ್ಪ ಅಕ್ಕಿ ಹಿಟ್ಟು
- ಉಪ್ಪು
- ಅರಶಿನ ಪುಡಿ
- ಕೆಂಪು ಮೆಣಸಿನ ಪುಡಿ
- ನಿಂಬೆರಸ.
ಮಾಡುವ ವಿಧಾನ :
ಹಾಗಲಕಾಯಿ ನಿಮಗೆ ಬೇಕಾದ ಆಕಾರದಲ್ಲಿ ಹೆಚ್ಚಿ. ಉಪ್ಪಲ್ಲಿ ಕಲಸಿ ಸ್ವಲ್ಪ ಹೊತ್ತು ನೆನೆಯಿಡಿ. ಆಮೇಲೆ ನೀರಲ್ಲಿ ತೊಳ್ದು ನೀರು ಬಸಿಯಬೇಕು. ಕಡಲೆಹಿಟ್ಟು, ಉಪ್ಪು, (ಉಪ್ಪು ಮೊದಲೆ ಸ್ವಲ್ಪ ಹಾಕಿದ್ದರಿಂದ ಅದರ ಅಂಶ ಉಳಿದಿರುತ್ತೆ ಅದ್ಕೆ ನೊಡಿ ಹಾಕ್ಬೆಕು), ಅರಶಿನ ಖಾರಪುಡಿ, ನಿಂಬೆರಸ, ಬೇಕಿದ್ರೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಬೇಕು. ನಿಂಬೆ ಹಾಕದೆ ಇದ್ರು ನಡಿಯುತ್ತದೆ. ಎಲ್ಲ ಕಲಸಿ ಇಟ್ಟು, ಎಣ್ಣೆ ಬಿಸಿ ಮಾಡಿ ಬಜ್ಜಿಯ ಹಾಗೆ ಎಣ್ಣೆಯಲ್ಲಿ ಬಿಡ್ಭೆಕು. ಆದರೆ ಗ್ಯಾಸ ಮಂದವಾಗಿದ್ರೆ ಹಾಗಲಕಾಯಿ ಬೇಯುತ್ತೆ ಚೆನ್ನಾಗಿ. ನೀರು ಬಿಟ್ಟ ಮೇಲೆ ತೆಗೆಯೋದು.
- ರತ್ನ ಜಾಧವ್ – ನಳಪಾಕ ಪ್ರವೀಣೆ, ಅಂಬಿಕಾನಗರ
