ಭಾರತದಲ್ಲಿ ಬಾಕ್ಸರ್ ಲೇಖಾ ಕೆ ಸಿ ಒಬ್ಬ ಸಿನೆಮಾ ತಾರೆ,ರಾಜಕಾರಾಣಿ ವ್ಯಕ್ತಿ ಆಗಿದ್ದರೆ ಇಂದು ಎಲ್ಲೋ ಇರುತ್ತಿದ್ದಳು,ಆದರೆ ಅವಳ ದುರ್ದೈವ ವೇನೆಂದರೆ ಆಕೆ ಮೊದಲನೆಯದಾಗಿ ದಕ್ಷಿಣ ಭಾರತದವಳು, ಎರಡನೆಯದು ಒಬ್ಬ ಕಾಡಿನ ಕುಟುಂಬದ ಕೂಲಿ ಕಾರ್ಮಿಕನ ಮಗಳು. ಬಾಕ್ಸರ್ ಲೇಖಾ ಅವರ ಸಾಧನೆಯ ಕುರಿತು ಪ್ರೊ.ರೂಪೇಶ್ ಪುತ್ತೂರು ಅವರು ಬರೆದ ಲೇಖನ.ಮುಂದೆ ಓದಿ…
ಇವಳು ಫೋಟೋದಲ್ಲಿ ಇರುವವಳು ನನ್ನ (ತಂದೆಯ ಚಿಕ್ಕ ತಂಗಿ ರೋಹಿಣಿ) ಚಿಕ್ಕಮ್ಮನ ಮಗಳು… ತಂಗಿ #ಲೇಖಾ_ಕೆ_ಸಿ. ಹಿಂದೆ ತಂದೆಯ ಊರಿಗೆ ಯಾವುದೇ ಬಸ್ಸು ಇರಲಿಲ್ಲ. ನನ್ನ ಅಮ್ಮಜ್ಜನಿಗೆ ” ಯಾಕಜ್ಜಾ ಆ ಕಾಡಿನ ಜನರಿಗೆ ನನ್ನ ತಾಯಿನ ಮದುವೆ ಮಾಡಿಸಿದೆ?” ಅನ್ನುತ್ತಿದ್ದೆ.
” ನಾನು ಕೂಲಿ ನಾಲಿ ಹುಡುಕಿ ಇಲ್ಲಿ ಬಂದಿದ್ದರಿಂದ ನಿನಗೆ ನಾನು ಗ್ರಾಮವಾಸಿ ಎಂದು ಬಾಸವಾಗಿರ ಬಹುದು. ನಾವೆಲ್ಲಾ ಕಾಡಿನವರೇ” ಎಂದುತ್ತರಿಸುತ್ತಿದ್ದರು.
ಅಪ್ಪನ ಊರು ಒಂದು ದಟ್ಟ ಕಾಡಾಗಿತ್ತು (ಇಂದು ಪುಟ್ಟ ಕಾಡಾಗಿದೆ) ತಂದೆ ಡ್ಯೂಟಿಗೆ ರಜೆ ಹಾಕದ ಮನುಷ್ಯ, ಫೆಬ್ರವರಿ ಯಲ್ಲಿ ಅಮ್ಮ ಪತ್ರ ಬರೆಯುತ್ತಿದ್ದಳು .. ಎಪ್ರಿಲ್ ರಜೆಯ ಇಂತಹಾ ದಿನ ನಾವು ಅಪ್ಪಜ್ಜಿನ (ತಂದೆಯ ತಾಯಿ ನನ್ನ ಅಪ್ಪಜ್ಜಿ) ನೋಡಲು ಬರುತ್ತೇವೆ… ಎಂದು.
ಅಲ್ಲಿ ತಳಿಪ್ಪರಂಬಾ(ಕೇರಳ) ಬಸ್ ನಿಲ್ದಾಣದಲ್ಲಿ ಯಾರಾದರೂ (ಒಂಬತ್ತರಲ್ಲಿ) ಒಬ್ಬರು ಚಿಕ್ಕಪ್ಪ ನಮ್ಮನ್ನು ಕಾಯುತ್ತಾ ಇರುತ್ತಾರೆ. ತಂದೆ ನಮ್ಮ ಜೊತೆ ಇದ್ದರೆ ಯಾರೂ ಬರೋದಿಲ್ಲ. ಬಂದಿಳಿದ ಕೂಡಲೇ ಚಿಕ್ಕಪ್ಪನಿಂದ ಒಂದು ಬಿಸಿ ಬೋಂಡಾ ನನಗೂ ತಂಗಿಗೂ. ಕಾಡಿನ ಕಡೆ ಹೋಗುವ ಒಂದು ಡಕೋಟಾ ಜೀಪು, ಅದರಲ್ಲಿ ಡ್ರೈವರ್ ಜೊತೆ ಮುದುಕರು , ಮಹಿಳೆಯರು. ತಾಯಿ ತಂಗಿ ಅಲ್ಲೇ, ನಾನು ಜೀಪಿನ ಹಿಂದೆ, ಅಲ್ಲಿ ಚಿಕ್ಕಪ್ಪ ನೇತಾಡಿ ನಿಂತ್ಕೋತಾರೆ ಅವರ ಬಾಹು-ಕರ-ಕೈಗಳೊಳಗೆ ನಾನೂ. ಓಡುವ ಜೀಪಿನ ಹಿಂದಿನಲ್ಲಿ ನೇತಾಡಿ ಹೋಗೋದು ಒಂದು ಮಸ್ತ್ ಮಜೋತ್ಸವ.
ಚಪ್ಪಾರಪಡುವು ಎಂಬಲ್ಲಿ ಜೀಪಿನ ಕೊನೆ ನಿಲ್ದಾಣ. ಅಲ್ಲಿಂದ ಒಂದು ಚಿಕ್ಕ ನದಿ (ಅದರ ಉಗಮ ನನ್ನ ತಂದೆಯ ಮನೆಯ ಹತ್ತಿರ) ಚಿಕ್ಕಪ್ಪನ ತಲೆಯ ಎಡ- ಬಲ ಭುಜದಲ್ಲಿ ನಾನೂ ತಂಗಿಯೂ, ಚಿಕ್ಕಪ್ಪನ ತಲೆಯ ಮೇಲೆ ನಮ್ಮ ಬ್ಯಾಗು ,ಅದನ್ನು ನಾನೂ ತಂಗಿಯೂ ಗಟ್ಟಿ ಹಿಡಿಯೋದು. ಹೆಂಗಸರಿಗೆ ಒಂದು ತೆಪ್ಪ, ಅದರಲ್ಲಿ ತಾಯಿ. ಆ ತೀರದಿಂದ ನಂತರ ತಂದೆಯ ಮನೆ(ಪೆರುಂಪಡವು)ಗೆ ಸುಮಾರು ಎರಡ್ಮೂರು ಗಂಟೆ ಕಾಲ್ನಡಿಗೆ. ಆದರೆ ನಾನೂ ತಂಗಿ, ಸುಖಾಸೀನ ಚಿಕ್ಕಪ್ಪನ ಬುಜದಲ್ಲಿ.

ಫೋಟೋ ಕೃಪೆ : google
ಕೆಲವೊಮ್ಮೆ ಕೆಲ ಕಾಡು ಪ್ರಾಣಿಗಳನ್ನು ನೋಡಿದ್ದೂ ಇದೆ. (ತಂದೆ ಹಾಗೂ ಅವರ ಕಾಡಿನವರಿಗೆ) ಚಿಕ್ಕಪ್ಪನವರಿಗೆ ಈ ಪ್ರಾಣಿಗಳ ಕಾಣ್ತಪ್ಪಿಸುವ ಕಲೆ ಚೆನ್ನಾಗಿ ಗೊತ್ತಿತ್ತು. ಒಂದು ವೇಳೆ ನಾವೂ ತಾಯಿಯೂ ಆ ಕಾಡಿನಲ್ಲಿ ಇವರಾರೂ ಇಲ್ಲದೆ ಹೋಗುತ್ತಿದ್ದರೆ ನಾವು ಆ ಕಾಡು ಪ್ರಾಣಿಗಳಿಗೆ ಹೋಮೋಸಿಪಿಯನ್ ಚಿಲ್ಲಿ, ಮಾನವ ೬೫…. ಆಗುತ್ತಿದ್ದೆವೋ ಏನೋ….
ಅಪ್ಪಜ್ಜಿ ನಮಗೆ ಮಾಡುತ್ತಿದ್ದ ಬಿಸಿ ಬಿಸಿ ಕಪ್ಪು ತೊಗರಿ ಊಟ , ನವಣೆ ಸಜ್ಜೆ ದೋಸೆ… ಕಾಡು ಜಿಂಕೆ ಅಥವಾ ಕಾಡು ಹಂದಿ , ಕಾಡು ಮೊಲ ಮಾಂಸ ಹೀಗೆ ವಿವಿಧತೆಯ ಆಹಾರದಲ್ಲಿ ಎಲ್ಲರೂ ಏಕತೆ ತೋರುತ್ತಿದ್ದರೂ ನಾನೊಬ್ಬ ಬರೇ ಸಸ್ಯಾಹಾರಿ. ಅದರಿಂದ ನಮ್ಮ ಕುಟುಂಬದವರಿಂದ ಪಡೆಯುತ್ತಿದ್ದೆ ಚೀಮಾರಿ!!!
ನಂತರ ಒಬ್ಬೊಬ್ಬ ಚಿಕ್ಕಪ್ಪ/ಮ್ಮ ಅಥವಾ ಅವರ ಮಕ್ಕಳು ಅವರವರ ಮನೆಗೆ ನಮ್ಮನ್ನು ಕರ್ಕೊಂಡು ಹೋಗಲು ಅಪ್ಪಜ್ಜಿ ಮನೆಗೆ ಬಂದಿರುತ್ತಾರೆ.

(ಅಪ್ಪ ಅಮ್ಮ , ಅಣ್ಣಂದಿರ ಜೊತೆಗೆ ಲೇಖಾ ಕೆ ಸಿ ಅವರು ) ಫೋಟೋ ಕೃಪೆ : google
ಮೊದಲು ಸಿಗೋದು ರೋಹಿಣಿ ಚಿಕ್ಕಮ್ಮ – ರೋಹಿಣಿ ಚಿಕ್ಕಪ್ಪನ ಮನೆ. ಅವರ ಮೂರು ಮಕ್ಕಳು ರಾಜೀವ, ರಾಜೇಶ್ ಹಾಗೂ ಲೇಖ- ಎಲ್ಲರೂ ನನ್ನಿಂದ ಕಿರಿಯರು. ಆದರೆ ಕಾಡಿನೊಳಗೆ ಲೀಲಾಜಾಲವಾಗಿ ಓಡಾಡುವುದರಲ್ಲಿ ಎತ್ತಿದ ಕೈ. ಅಂದು ತಂದೆಯ ಇಬ್ಬರು ಸಹೋದರರು ಸೇನೆಯಲ್ಲಿ,(ಇವಾಗ ನಿವೃತ್ತರಾಗಿದ್ದಾರೆ) ಅವರ ಮಕ್ಕಳು , ನಾನು ಹಾಗೂ ತಂಗಿ ಕಾಡಿನೊಳಗೆ ಪುಕ್ಲರು. ಯಾಕೆಂದರೆ ನಾವು ಕಾಡಿನ ಹೊರಗೆ ಜೀವಿಸುವ ಕತರ್ನಾಕುಗಳು.
ಅಂದು ಆ ಬಾಲ್ಯದಲ್ಲಿ , ನಾವೆಲ್ಲಾ ಸಂಜೆ ಸುಮಾರು ೪ಗಂಟೆ ಹೊತ್ತಿಗಿರುವ ಕಾಡಿನೊಳ ಕಗ್ಗತ್ತಲೆಯಲ್ಲಿ ಮಿಂಚು ಹುಳುಗಳನ್ನು ಹಿಡಿದು ಒಂದು ಬಾಟ್ಲಿಯಲ್ಲಿ ಹಾಕಿ ಅದರ ಬೆಳಕಿನಲ್ಲಿ ಓಡಾಡಿ ಆಟವಾಡುತ್ತಿದ್ದೆವು. ರಾತ್ರಿ ನಿದ್ದೆಯೇ ಮೊದಲು ಆ ಮಿಂಚು ಹುಳಗಳನ್ನು ಬಾಟಲಿಯಿಂದ ಬಿಡುಗಡೆ ಗೊಳಿಸಿ ಅವುಗಳೆಲ್ಲಾ ಒಂದೇ ರೀತಿ ಅಥವಾ ಪಸರಿಸಿ ಹೋದ ದಾರಿ ನೋಡಿ ಆನಂದಪಟ್ಟ ದಿನಗಳು….

ಫೋಟೋ ಕೃಪೆ : google
ಅಲ್ಲಿ ವಾಸಿಸುವ ತಂದೆಯ ಕುಟುಂಬದವರೆಲ್ಲರಂತೆ ಕಾಡಿನಲ್ಲಿ ಚಿಕ್ಕಪುಟ್ಟ ಕೂಲಿ ಕೆಲಸಕ್ಕೆ ಹೋಗುವವರಾಗಿದ್ದರು ರೋಹಿಣಿ ಚಿಕ್ಕಪ್ಪ. ಲೇಖ ತನ್ನ ಅಣ್ಣಂದಿರ ಜೊತೆ ಪೆರುಂಪಡವಿನ ಶಾಲೆಯಲ್ಲಿ ಕಲಿಯುತ್ತಿದ್ದಳು. ಅಂದು ಹತ್ತನೇ ತರಗತಿಯಲ್ಲಿ ಪೆರುಂಪಡವಿನ ಹೈಸ್ಕೂಲಿನ ಸ್ಪೋರ್ಟ್ಸ್ ಡೇ ದಿನ ಎಲ್ಲರಿಗೂ ದೊಡ್ಡ ಬಿಂದಿಗೆಯಲ್ಲಿ ನೀರು ಸೇದಿ ತಂದು ಕುಡಿಯಲು ಕೊಡುತ್ತಿದ್ದ ಲೇಖನನ್ನು ಅವಳ ಗುರು ಸೆಬಾಸ್ಟಿಯನ್ ಜಾನ್ , ಒಂದು ಬಾರಿ ಜಾವಲಿನ್ , ಡಿಸ್ಕಸ್ ತ್ರೋ ಮಾಡಲು ಕೇಳಿಕೊಂಡರು. ಸಂಕೋಚದಿಂದ ಎಸೆದದ್ದೇ ಅವಳ ಜೀವನದ ದಾರಿ ಬದಲಾಯಿತು. ನಂತರ ತಾಲೂಕು ಮಟ್ಟ ನಂತರ ಆ ಕಣ್ಣೂರು (ಕಣ್ಣನ್ನೂರು)ಜಿಲ್ಲೆಯಲ್ಲೇ ಅವಳು ಚಾಂಪಿಯನ್ ಆದಳು.
ತದನಂತರ ಕಣ್ಣೂರು ಎಸ್. ಎನ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುವಾಗ ಪಿ.ಕೆ. ಜಗನ್ನಾಥ್ ಎಂಬ ದೈಹಿಕ ಶಿಕ್ಷಕ ಅವಳನ್ನು ರಾಜ್ಯ ಬಾಕ್ಸಿಂಗ್ ಕೋಚ್ ಚಂದ್ರಲಾಲ್ ರವರಿಗೆ ಪರಿಚಯಿಸಿದರು.ಅಲ್ಲಿಂದ ಅವಳು ಚರಿತ್ರೆಯ ಪುಟಗಳಲ್ಲಿ ತನ್ನ ಚಾಪು ಮೂಡಿಸತೊಡಗಿದಳು. ಇಪ್ಪತ್ತು ಬಾರಿ ಭಾರತವನ್ನು ಪ್ರತಿನಿಧಿಸಿದಳು , ಭಾರತಕ್ಕಾಗಿ ಬಾಕ್ಸಿಂಗ್ ಪಟು ಆದಳು.
2001 ರಿಂದ ಅವಳು ಸತತವಾಗಿ ಭಾರತದ ಏಕೈಕ ಬಾಕ್ಸಿಂಗ್ ಪಟುವಾದಳು. ಭಾರತಕ್ಕಾಗಿ ಗೆದ್ದು ಅದರ ಪತಾಕೆಯನ್ನು ಹಾರಾಡಿಸುವಾಗ ಅವಳು ಪಡೆದ ಸುಖ ಅಷ್ಟಿಷ್ಟಲ್ಲವಂತೆ.
- 2004:Taiwan international Boxing
- 2005: world championship 3rd price
- 2005:Kaohsiung Asian Championship
- 2006-2007: New Delhi World Boxing Championship.
- 2008: Moscow -Russian International Boxing
- 2008 Canada Boxing Championship
- 2008-09 Gauhati Asian Championship.
- Altogether she won the National women’s boxing championship six times in succession starting from 2001.
She was among the four gold medallists that won the World Championship in 2006 for India. She won the gold in the 75 kg category. - She had won gold in the 2005 Asian championship and silver in the 2008 Asian championship.(ಕೃಪೆ wikipedia)
Falicitation - 2005 National Best Boxer
- 2007 Kerala State Highness Award for sports- G V Raja Award
ಹೀಗೆ ಕಾಲಿಟ್ಟಲ್ಲಿ ಪದಕಗಳ ಸರಮಾಲೆ ತಂದಿಟ್ಟಳು. ಆ ಸಮಯದಲ್ಲಿ ಕರ್ನಾಟಕ ಸೇರಿದಂತೆ ಹೆಚ್ಚಿನ ದಕ್ಷಿಣ ಭಾರತದ ರಾಜ್ಯದವರು ತಮ್ಮ ರಾಜ್ಯದ ಪೋಲಿಸ್ ಇಲಾಖೆಗೆ ಅವಳನ್ನು ಬರಮಾಡಿದಾಗ, ಕೇರಳ ಸರಕಾರ ಕೊಟ್ಟ ಚಿಕ್ಕ ಹುದ್ದೆಗೆ ” ನನ್ನ ಬೆಳೆಸಿದ ರಾಜ್ಯ ಕೊಟ್ಟಲ್ಲೇ ನಾನು ಕೆಲಸ ನಿರ್ವಹಿಸುತ್ತೇನೆ” ಎಂದು ಹೇಳಿದಳು. ಅವಳು ಮದುವೆಯಾದ ನಂತರವೂ ಬಾಕ್ಸಿಂಗ್ ನಲ್ಲಿ ಪದಕ ಪಡೆದಿದ್ದಳು.

(ಗಂಡ ,ಮಕ್ಕಳೊಂದಿಗೆ ಲೇಖಾ ಕೆ ಸಿ ಅವರು) ಫೋಟೋ ಕೃಪೆ : google
2012ರಲ್ಲಿ ಮಹಿಳಾ ಬಾಕ್ಸಿಂಗ್ ಒಲಿಂಪಿಕ್ ನಲ್ಲಿ ಸೇರಿಸಿದರು. ನಂತರ ಏಷಿಯನ್ ಗೇಮ್ಸ್ ನಲ್ಲೂ. ಲೇಖ ಅದಕ್ಕಾಗಿ ತುಂಬಾ ಶ್ರಮಿಸಿದಳು. ಆದರೆ ಅವಳ ದುರ್ದೈವ ಅವಳ ಅರ್ಹತೆಯಾಯಿತು. ಅಂದಿನಿಂದ ಅವಳು ತೆರೆಮರೆಯಾದಳು ಎನ್ನಬಹುದು.
ಈ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರ ತನ್ನಿಂದ ಕಿರಿಯರಿಗೆ, ತನ್ನಷ್ಟೂ ಸಾಧನೆ ಮಾಡದವರಿಗೆ ಅಂಗೀಕಾರ, ಅವಾರ್ಡ್ ಗಳು ಕೊಡುತ್ತಿದ್ದಾಗ, ತನ್ನನ್ನು ತಾನು ಸಮಾಧಾನಿಸಲು ಕೇರಳದ ಮೂಲೆ ಮೂಲೆಯ ಬಡಜನರ ವಿದ್ಯಾಭ್ಯಾಸ, ಅವರ ಕಾಳಜಿ, ಅವರನ್ನು ಮುಖ್ಯವಾಹಿನಿಗೆ ತರುವುದರಲ್ಲಿ ತಲ್ಲೀನಳಾದಳು. ಅದಕ್ಕಾಗಿ ಕಣ್ಣನ್ನೂರಿನಲ್ಲಿ ಒಂದು ಕ್ರೀಡಾ KG to PG ವಿದ್ಯಾಲಯ ಸ್ಥಾಪಿಸಲು ಹರಸಾಹಸ ಪಡತೊಡಗಿದಳು. ಅದು ಜಗತ್ತಿನ ಪರಮೊಚ್ಚ ಕ್ರೀಡಾ ವಿದ್ಯಾಲಯ ಮಾಡಬೇಕೆಂಬ ಒಂದು ಹುರುಪು ಅವಳೊಳಗೆ ಉದ್ಭವಿಸಿದೆ ಎನ್ನ ಬಹುದು.
ಭಾರತದಲ್ಲಿ ಅವಳು ಒಬ್ಬಳು ಸಿನೆಮಾ ನಟಿ,ರಾಜಕೀಯ ವ್ಯಕ್ತಿ ಆಗಿದ್ದರೆ ಅದು ಅವಳ ಸುದೈವವಾಗುತ್ತಿತ್ತು. ದುರ್ದೇವದ ಅರ್ಹತೆ ಏನೆಂದು ನೀವು ಚಿಂತಿಸಬಹುದು ಅದೇನೆಂದರೆ ಒಂದು ದಕ್ಷಿಣ ಭಾರತದವಳು, ಎರಡನೆಯದು ಹೆಣ್ಣು, ಮೂರನೆಯದು ಒಬ್ಬ ಕಾಡಿನ ಕುಟುಂಬದ ಕೂಲಿ ಕಾರ್ಮಿಕನ ಮಗಳು ಮುಂತಾದ ಆಭರಣಗಳಿಂದ ಇವಳನ್ನು ನಂತರ ರಾಜ್ಯ- ಕೇಂದ್ರ ಸರ್ಕಾರ ಕಡೆಗಣಿಸಿ ಗುರುತಿಸದೇ ಇದ್ದುದು.
ತಿರುವನಂತಪುರದಲ್ಲಿ #ಕರುಣಾಕರ DYSP ,( State Crime Record Beuro) ಯ ಪತ್ನಿಯಾಗಿ, ಮಗ ಕರುಣ್ ಜಿತ್ ಹಾಗೂ ಮಗಳು ಕೀರ್ತನನ ಆರೈಕೆ ಮಾಡುತ್ತಾ , ತನ್ನ ಕನಸನ್ನು ನನಸು ಮಾಡುವುದರಲ್ಲಿ ಶ್ರಮಿಸುತ್ತಾ ಇರುವಾಗ……
ಇಂದು ಅವಳನ್ನು ಭಾರತದ ಸರ್ವೋತ್ತಮ #ಧ್ಯಾನಚಂದ್_ಕ್ರೀಡಾ_ಪಶಸ್ತಿ ಹುಡುಕಿ ಬಂದಿದೆ.
ಕನ್ನಡ ಭಾಷಾ ಜನರ ಪರವಾಗಿ ಅವಳಿಗೊಂದು
ಅಭಿನಂದನೆ ಸಲ್ಲಿಸಬಹುದು ಅಲ್ಲವೇ?
ಒಬ್ಬ ಅಣ್ಣನಾಗಿ ನಾನು ಅವಳಿಗೆ ಇನ್ನು ಏನೆಂದು ಹೇಳಲಿ?
ಆಕಾಶಮೌನದೊಂದಿಗೆ……
ಧನ್ಯವಾದಗಳು ಓದುಗ ಮಹಾಮನಸ್ಸುಗಳಿಗೆ.
ನಿಮ್ಮವ ನಲ್ಲ
*ರೂಪು*
- ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
