ಡಾ. ಸಂಗಮೇಶ ತಮ್ಮನಗೌಡ್ರರವರ 103 ನೇ ಪುಸ್ತಕ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಾಹಿತ್ಯ ಅಭಿಮಾನಿಗಳು ಸದರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ.
ಕಾಯಕಯೋಗಿ ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ಗುರುವಂದನೆ ಮತ್ತು ಪೂಜ್ಯಶ್ರೀ ಮುಪ್ಪಿನ ಬಸವಲಿಂಗದೇವರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವವು 2021 ನವ್ಹಂಬರ್ 8, 9 ಮತ್ತು 10 ರಂದು ಗಜೇಂದ್ರಗಡ ತಾಲೂಕಿನ ಹಾಲಕೇರಿಯಲ್ಲಿ ನಡೆಯುತ್ತಿದೆ.
8 ರಂದು ಲಕ್ಷ್ಮೇಶ್ವರದ ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಅವರು ಬರೆದಿರುವ 103 ನೇ ಪುಸ್ತಕ “ಕಾಯಕ ನಿಷ್ಠೆಯ ದತ್ತಣ್ಣ” ಗ್ರಂಥವನ್ನು ಶಿರವಾಳ ಭದ್ರೇಶ್ವರ ಮಠದ ಪೂಜ್ಯಶ್ರೀ ಮಾತೋಶ್ರೀ ಜಯದೇವಿ ತಾಯಿಯವರು ಬಿಡುಗಡೆಗೊಳಿಸುವರು.

ಅಂದು ಸಾಯಂಕಾಲ 7 ಘಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಸಚಿವರಾದ ಸನ್ಮಾನ್ಯ ಶ್ರೀ ಹಾಲಪ್ಪ ಆಚಾರ್, ಸನ್ಮಾನ್ಯ ಶ್ರೀ ಆನಂದ ಸಿಂಗ್, ಸಂಸದರಾದ ಶಿವಕುಮಾರ ಉದಾಸಿ, ಮಾಜಿ ಸಂಸದರಾದ ಸನ್ಮಾನ್ಯ ಶ್ರೀ ಬಸವರಾಜ ಪಾಟೀಲ ಸೇಡಂ, ವಿಧಾನಪರಿಷತ್ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ, ಸಿಂಧನೂರ ಶಾಸಕರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ್ರ, ಸಿಂಧನೂರಿನ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಹಂಪನಗೌಡ್ರು ಬಾದರ್ಲಿ, ಬಾಗಲಕೋಟೆಯ ಮಾಜಿ ಸಂಸದರಾದ ಆರ್.ಎಸ್.ಪಾಟೀಲ, ಗದಗ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ.ಆರ್.ಪಾಟೀಲ ಉಪಸ್ಥಿತರಿರುವರು.
ನಾಡಿನ ಪ್ರತಿಷ್ಠಿತ ಮಠದ ಪೂಜ್ಯಶ್ರೀ ಮ.ನಿ.ಪ್ರಣವ ಸ್ವರೂಪಿ ಡಾ. ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ದಿವ್ಯ ನೇತೃತ್ವವನ್ನು ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಗಳು ಶಿರಹಟ್ಟಿ ಮುಂತಾದ 20 ಕ್ಕೂ ಹೆಚ್ಚು ನಾಡಿನ ಪ್ರತಿಷ್ಠಿತ ಮಠದ ಸ್ವಾಮೀಜಿಗಳವರು ಭಾಗವಹಿಸುರು.
ಹಾಲಕೆರೆಯ ಮಠದ ಪಟ್ಟಾಧಿಕಾರ ಮಹೋತ್ಸವದಲ್ಲಿ ನವ್ಹಂಬರ್ 9ರಂದು ಬೆಳಿಗ್ಗೆ 11 ಗಂಟೆಗೆ ವಿವಿಧ ಸಾಧಕರಿಗೆ ಸನ್ಮಾನ್ ಕಾರ್ಯಕ್ರಮ ನಡೆಯಲಿದ್ದು, ಸಾಹಿತ್ಯ ಕ್ಷೇತ್ರದ ಸಾಧನೆಗೆ 85 ಜನ ಸಾಧಕರಲ್ಲಿ ಲಕ್ಷ್ಮೇಶ್ವರದ ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಅವರು ಸನ್ಮಾನಗೊಳ್ಳಲಿದ್ದಾರೆ.
ಸದರಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶೈಲಪೀಠದ ಪರಮಪೂಜ್ಯ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದ ಸ್ವಾಮಿಗಳು ದಿವ್ಯ ನೇತೃತ್ವ ಪೂಜ್ಯ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗರಾಜ ದೇಸಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಉಜ್ಜಯಿನಿಪೀಠ ವಹಿಸಿಕೊಳ್ಳುವರು.

ಸದರಿ ಕಾರ್ಯಕ್ರಮದ ನೇತೃತ್ವವನ್ನು ಜಗದ್ಗುರು ಅನ್ನಾದಾನೀಶ್ವರ ಸಂಸ್ಥಾನಮಠದ ಪೂಜ್ಯಶ್ರೀ ನಾಡೋಜ ಜಗದ್ಗುರು ಡಾ. ಅನ್ನದಾನ ಮಹಾಸ್ವಾಮಿಗಳು ವಹಿಸಲಿದ್ದು, ದಿವ್ಯ ಅಧ್ಯಕ್ಷತೆಯನ್ನು ಕಲ್ಬುರ್ಗಿಯ ಸಮಾಧಾನ ಮಠದ ಪೂಜ್ಯಶ್ರೀ ಮ.ನಿ.ಪ್ರ. ಜಡೆಶಾಂತಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಮ್ಮುಖವನ್ನು ಪೂಜ್ಯಶ್ರೀ ಎ.ಪಿ.ಪಾಟೀಲ. ಗುರೂಜಿ ಹ್ಯಾಪಿ ಲೀವಿಂಗ್ ಫೌಂಡೇಶನ್ ಧಾರವಾಡ ಇವರು ಪಾಲ್ಗೊಳ್ಳಲಿದ್ದು ಸನ್ಮಾನ ಸಮಾರಂಭವು ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಆನಂದಪುರಂ ಬೆಕ್ಕಿನಕಲ್ಮಠ ಇವರು ಉಪಸ್ಥಿತರಿರುವರು ಸಾಹಿತ್ಯ ಅಭಿಮಾನಿಗಳು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ.
- ಆಕೃತಿಕನ್ನಡ ನ್ಯೂಸ್