ಶಾಲೆಗೆ ರೆಡಿ…ಭಯ ಬಿಡಿ… – ಶಾಲಿನಿ ಹೂಲಿ ಪ್ರದೀಪ್



ಕೊರೋನಾ ನೆಪ ಮಾಡಬೇಡಿ… ಕಷ್ಟ ಎದುರಿಸುವ ಧೈರ್ಯ- ಸ್ಥೈರ್ಯ ಮಕ್ಕಳಲ್ಲಿ ತುಂಬಿ…ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ…

ಎಷ್ಟೋ ಪಾಲಕರು ನನಗೆ ಕೇಳಿದ್ರು ನಿಮ್ಮ ಮಕ್ಕಳನ್ನ ಸ್ಕೂಲ್ ಕಳಸ್ತೀರಾ? ಅಂತ. ನಾನು ಅವರಿಗೆಯೇ ಮರು ಪ್ರಶ್ನೆ ಹಾಕಿದೆ ‘ನೀವು ಕಳಸ್ತೀರಾ?’. ಆಗ ಅವರಿಂದ ಬಂದ ಉತ್ತರ ‘ ಅಯ್ಯೋ ಕರೋನ್ ರೀ… ಮಕ್ಕಳಿಗೆ ಹೇಗೆ ಕಳಸೋದು, ನಾನು- ನಮ್ಮ ಯಜಮಾನ್ರು decide ಮಾಡಿದ್ದೀವಿ… ಏನಾದ್ರೂ ಆಗ್ಲಿ,ಮಕ್ಕಳಿಗೆ ವ್ಯಾಕ್ಸಿನ್ ಬರೋವರೆಗೂ  ಕಳಸೋದು ಬೇಡ ಅಂತ’ ಅಂದ್ರು.

ಅವರ ಮಾತು ಕೇಳಿ ನಕ್ಕೆ, ಯಾಕ್ರಿ ನಗ್ತಿದ್ದೀರಾ? ಅಂದ್ರು. ‘ಅಲ್ಲರೀ… ಕೊರೋನಾ ಅಂತ ಮಾಲ್ ಸುತ್ತೋದು ಬಿಟ್ಟಿಲ್ಲ, ಗೃಹಪ್ರವೇಶ, ಮದುವೆ, ಮುಂಜಿ ಕಾರ್ಯಕ್ರಮ attend ಆಗೋದು ಬಿಟ್ಟಿಲ್ಲ. ಹೋಟೆಲ್ ನಲ್ಲಿ ತಿನ್ನೋದು ಬಿಟ್ಟಿಲ್ಲ, ಅಕ್ಕ-ಪಕ್ಕದ ಮಕ್ಕಳ ಜೊತೆ ಆಡಸೋದು ಬಿಟ್ಟಿಲ್ಲ. ಆದ್ರೆ ಸ್ಕೂಲ್ ಅಂತ ಬಂದಾಗ, ಕೊರೋನಾ ಯೋಚ್ನೆ ಯಾಕೆ?. ನಮ್ಮ ಅನುಕೂಲಕ್ಕೆ ತಕ್ಕಂತೆ ಕೊರೋನಾವನ್ನು ಬಳಸಿಕೊಳ್ಳುತ್ತಿದ್ದೇವೆ ಅಂತ ಅನಸೋಲ್ವಾ?’ ಎಂದೆ. ನನ್ನ ಮಾತಿಂದ ಕೆಲವು ಪಾಲಕರಿಗೆ ಸಿಟ್ಟು ಬಂತು, ಇನ್ನು ಕೆಲವರಿಗೆ ಸರಿ ಅನಿಸಿ ತಮ್ಮ ಮಕ್ಕಳನ್ನು ಸ್ಕೂಲ್ ಕಳಿಸಲು ಶುರು ಮಾಡಿದ್ರು.

ಜೀವನದಲ್ಲಿ ಯಾವಾಗಲೂ ಅಷ್ಟೇ ನಿಮ್ಮ ಮಕ್ಕಳನ್ನ ಕೇವಲ ಪುಸ್ತಕದ ಹುಳುವನ್ನಾಗಿ ಮಾಡಬೇಡಿ, ಬದುಕುವ ಕಲೆ ಕಳಿಸಿ… ಕಷ್ಟದಲ್ಲಿ ತಮ್ಮನ್ನು ತಾವು ನಿಭಾಯಿಸಿಕೊಂಡು ಹೋಗುವ ಶಕ್ತಿ ಅವರಲ್ಲಿ ತುಂಬಿ. ಕೊರೋನಾ ಒಂದು ಪಾಠ. ಮಕ್ಕಳನ್ನು ನಿಮ್ಮ ಕಪಿಮುಷ್ಠಿಯಲ್ಲಿ ಹಿಡಿದು ಹಿಂಸಿಸಬೇಡಿ, ಸ್ವತಂತ್ರವಾಗಿ ಬೆಳೆಸಿ…ಅತಿಯಾದರೆ ಅಮೃತವೂ ವಿಷ, ನೆನಪಿರಲಿ…

ಅಂತೂ- ಇಂತೂ ನನ್ನ ಮಕ್ಕಳು ಶಾಲೆಗೆ ಹೊರಟ್ರು…ಸಂತೋಷವಿದೆ. ತಾಯಿಯಾಗಿ ಸ್ವಲ್ಪ ಭಯವೂ ಇದೆ. ಆ ಭಗವಂತನ ಶ್ರೀ ರಕ್ಷೆ ಎಲ್ಲ ಮಕ್ಕಳ ಮೇಲಿರಲಿ ಎಂದು ಆಶೀಸುತ್ತೇನೆ….


  • ಕ್ಯಾಮರಾ ಕಣ್ಣು : ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW