‘ಹಕ್ಕಿ ಕಥೆ’ ನಾಟಕ ಪ್ರದರ್ಶನ




ಶಿವಮೊಗ್ಗ ರಂಗಾಯಣದವರು ಪ್ರಸ್ತುತಪಡಿಸುವ ಪೊಪೆಟ್ ಮಾದರಿಯ ನಾಟಕ ‘ಹಕ್ಕಿ ಕಥೆ’. ಫ್ಯಾಂಟಸಿಯ ಈ ಮಕ್ಕಳ ನಾಟಕ ಮಂತ್ರಮುಗ್ದಗೊಳಿಸುತ್ತದೆ. ತುಮಕೂರು ಹಾಗು ಬೆಂಗಳೂರಿನಲ್ಲಿ ಈ ನಾಟಕವನ್ನು ಆಯೋಜಿಸಲಾಗಿದೆ. ದಯವಿಟ್ಟು ಎಲ್ಲರೂ ಬನ್ನಿ…

ಹಿರಿಯ ಸಾಹಿತಿ ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಹಕ್ಕಿಕಥೆ ಮಕ್ಕಳ ನಾಟಕವನ್ನು ಶಿವಮೊಗ್ಗ ರಂಗಾಯಣದ ಕಲಾವಿದರು ನವೆಂಬರ್ ೧೨ರಂದು ಶಿವಮೊಗ್ಗದಲ್ಲಿ ಪ್ರದರ್ಶನ ಕಾಣಲಿದೆ. ಎಸ್.ಮಾಲತಿಯವರು ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸಿದ್ದಾರೆ. ಈ ನಾಟಕವನ್ನು ಗಣೇಶ ಮಂದಾರ್ತಿ ಹಾಗೂ ಶ್ರವಣ್ ಹೆಗ್ಗೋಡು ಅವರು ನಿರ್ದೇಶಿಸಿದ್ದಾರೆ.

ಪ್ರಕೃತಿಯ ಇತರೆ ಜೀವಿಗಳ ಸಹಜ ಬದುಕಿನ ಮೇಲೆ ಮನುಷ್ಯನ ಹಸ್ತಕ್ಷೇಪ ಎಂಥದ್ದು ಮತ್ತು ಅದಕ್ಕೆ ಪ್ರಕೃತಿ ಕೊಡುವ ತಿರುಗೇಟು ಏನು ಎಂಬುದು ನಾಟಕದ ಸಾರಾಂಶ. ಮನುಷ್ಯನ ಸ್ವಾರ್ಥ ಬುದ್ದಿಗೆ ಪ್ರಕೃತಿಯೇ ತನ್ನದೇ ಶೈಲಿಯಲ್ಲಿ ಉತ್ತರಿಸುತ್ತದೆ ಎನ್ನುವುದನ್ನು ನಾಟಕ ಮೂಲಕ ಜನರಿಗೆ ಒಂದು ಪಾಠ ಮಾಡುತ್ತದೆ. ಈ ನಾಟಕವು ಶಿವಮೊಗ್ಗ, ಬೆಂಗಳೂರಿನಲ್ಲಿ ಪ್ರದರ್ಶನ ನಡೆಯಲಿದೆ.

ನಾಟಕ– ಹಕ್ಕಿಕಥೆ,

ಬರೆದವರು– ನಾಡಿಸೋಜ,

ನಾಟಕಕ್ಕೆ ರೂಪಾಂತರ – ಎಸ್.ಮಾಲತಿ

ಪ್ರಸ್ತುತಿ– ಶಿವಮೊಗ್ಗ ರಂಗಾಯಣ,

ಆಯೋಜನೆ– ಝೆನ್ ಟೀಮ್.

This slideshow requires JavaScript.

ಪ್ರದರ್ಶನದ ದಿನಾಂಕ – ನವೆಂಬರ್ 12,

ಸ್ಥಳ– ತುಮಕೂರು ಗುಬ್ಬಿ ವೀರಣ್ಣ ರಂಗಮಂದಿರ,

ಸಮಯ– 6.45 ಕ್ಕೆ,

ಟಿಕೆಟ್ ದರ– ₹೩೦

ಬೆಂಗಳೂರು

ಪ್ರದರ್ಶನದ ದಿನಾಂಕ : ನವೆಂಬರ್ 13, ಮತ್ತು  14 ಕ್ಕೆ

ಸ್ಥಳ – ರಂಗಶಂಕರ


  • ಉಗಮ ಶ್ರೀನಿವಾಸ್ (ಪ್ರಧಾನ ವರದಿಗಾರ, ಕನ್ನಡಪ್ರಭ,ಲೇಖಕರು) ಶಿವಮೊಗ್ಗ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading