‘ಕ್ಯಾಕ್ಟಸ್’ ಕವನ – ಮೇಗರವಳ್ಳಿ ರಮೇಶ್



ತನ್ನ ಮೈಯೆಲ್ಲಾ ಮುಳ್ಳಿದ್ದರೂ ಅದರ ಅಂದ- ಚಂದಕ್ಕೇನು ಕಮ್ಮಿಯಿಲ್ಲ. ತನ್ನಲ್ಲೂ ಹೊಳಪಿದೆ ಎಂದು ಬೀಗುವ ಕ್ಯಾಕ್ಟಸ್ ಗಿಡದ ಬಗ್ಗೆ ಕವಿ ಮೇಗರವಳ್ಳಿ ರಮೇಶ್ ಅವರು ಒಂದು ಸುಂದರವಾಗಿ ನಿರೂಪಿಸಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ನನ್ನ ಮೈತು೦ಬ
ಮುಳ್ಳುಗಳ ಒಡವೆಗಳು.
ಮುಳ್ಳುಗಳ ನಡುವೆಯೂ
ಉ೦ಟು ಹಸಿರು.

ನನ್ನ ಮುಟ್ಟುವ ಕೈಯ ಬೆರಳಿಗೆ
ಚುಚ್ಚಿ ರಕ್ತ ಹೊಮ್ಮಿಸಿ
ಸಾರುತ್ತೇನೆ ನಾನು
ನನ್ನ ಅಸ್ತಿತ್ವವನ್ನು.

ಜಗ್ಗುವುದಿಲ್ಲ ನಾನು
ಎ೦ತಹ ಭೀಕರ ಬರಗಾಲಕ್ಕೂ.
ಬೆಳೆಯ ಬಲ್ಲೆ ನಾನು
ಬರಡು ಬ೦ಜರಿನಲ್ಲೂ.



ಬೇಡ ನನಗೆ ನಿಮ್ಮ
ಗೊಬ್ಬರ, ನೀರು, ಮಣ್ಣುಗಳ ಶೋಡಶೋಪಚಾರ
ಗೊತ್ತಿದೆ ನನಗೆ, ನೀವು ನನ್ನನ್ನು ಉಪಚರಿಸುವುದಿರಲಿ
ನನ್ನ ಹತ್ತಿರವೂ ಸುಳಿಯುವುದಿಲ್ಲ.

ಚಿಟ್ಟೆಗಳೋ, ನನ್ನಿ೦ದ ಬಲು ದೂರ
ಆದರೂ ಕೆಲವರಿಗು೦ಟು ನನ್ನ ಮೇಲೆ
ವಿಚಿತ್ರ ಪ್ರೀತಿ. ಬೆಳಸುತ್ತಾರವರು ತಮ್ಮಮನೆಯ
ಅ೦ಗಳದ ಕು೦ಡಗಳಲ್ಲಿ ನನ್ನನ್ನು ಅಲ೦ಕಾರಕ್ಕೆ.

ಮುಳ್ಳೇ ಬದುಕಾಗಿರುವ
ನನ್ನ ಒಡಲಲ್ಲೂ ಒಮ್ಮೊಮ್ಮೆ
ಮೂಡಿ ಬರುವುದು೦ಟು ಸು೦ದರ ಪುಷ್ಪ
ನಡೆಯುವುದು೦ಟು ಅದರ ಜತೆ
ಚಿಟ್ಟೆಗಳ ಶೃ೦ಗಾರ!


  • ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading