ಮೆಣಸಿನಕಾಯಿ ಬಜ್ಜಿ, ಪಲ್ಯ ತಿಂದಿದ್ದೀರಿ.ಒಮ್ಮೆ ಮೆಣಸಿನಕಾಯಿ ಚಟ್ನಿಯನ್ನೊಮ್ಮೆ ಮಾಡಿ ತಿನ್ನಿ. ನಳಪಾಕ ಪ್ರವೀಣೆ ರತ್ನ ಜಾಧವ್ ಅವರು ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇಕಾಗುವ ಸಾಮಾನು :
- ಮೆಣಸಿನಕಾಯಿ – ನಾಲ್ಕು ಅಥವಾ ಐದು
- ಟೊಮೆಟೊ – ನಾಲ್ಕು ಅಥವಾ ಐದು
- ಬೆಳ್ಳುಳ್ಳಿ – ನಾಲ್ಕು
- ಕೊತ್ತಂಬರಿ – ಸ್ವಲ್ಪ
- ಎಣ್ಣೆ – ಸ್ವಲ್ಪ
- ಉಪ್ಪು – ಸ್ವಲ್ಪ

ಮಾಡುವ ವಿಧಾನ :
ಕಡಾಯಿಗೆ ಎಣ್ಣೆ ಹಾಕಿ ಮೆಣಸಿನಕಾಯಿ, ಟೊಮೆಟೊ ಬಾಡಿಸಿ ಸ್ವಲ್ಪ ಹೊತ್ತು ಹುರಿಯಿರಿ. ಸ್ವಲ್ಪ ಉಪ್ಪು, ಬೆಳ್ಳುಳ್ಳಿ ಹಾಕಿ ಇಳಿಸಿ. ಬೆಳ್ಳುಳ್ಳಿ ಬೇಯಬಾರದು. ಕೊತ್ತಂಬರಿ ಹಾಕಿ. ಕಡಾಯಿಯಲ್ಲಿ ಅಥವಾ ಒರಳು ಕಲ್ಲಿನಲ್ಲಿ ಹಾಕಿ ಅರಿಯಬೇಕು. ನುಣ್ಣಗೆ ಅಲ್ಲ.
- ರತ್ನ ಜಾಧವ್ – ನಳಪಾಕ ಪ್ರವೀಣೆ, ಅಂಬಿಕಾನಗರ.
