ಚಂದ್ರ ಕುಮಾರ್ ಸಿಂಗ್ ಅವರಿಗೆ ಎಪ್ಪತ್ತರ ದಶಕ

ಚಂದ್ರ ಕುಮಾರ್ ಸಿಂಗ್ ಅವರಿಗೆ ಎಪ್ಪತ್ತರ ದಶಕ. ಬೆನಕ ರಂಗ ತಂಡದಲ್ಲಿ ರಂಗ ಸಜ್ಜಿಕೆ, ಪ್ರಮುಖವಾಗಿ ಬೆಳಕು ತಜ್ಞನಾಗಿ ಗುರುತಿಸಿಕೊಂಡು ರಂಗ ಚಟುವಟಿಕೆಗಳನ್ನು ಮಾಡುತ್ತಿದ್ದವರು ಚಂಕು ಸಿಂಗ್. ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಬೆನಕ ರಂಗ ತಂಡದ ಹಲವು ಉತ್ಕೃಷ್ಟ ನಾಟಕಗಳಿಗೆ ಬೆಳಕಿನ‌ ವಿನ್ಯಾಸ ಮಾಡಿರುವ ಚಂಕು, ಬೆನಕ ತಂಡಕ್ಕೆ ನಾಟಕಗಳನ್ನು ನಿರ್ದೇಶನ ಮಾಡಿದ ರಾಷ್ಟ್ರಮಟ್ಟದ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿ ಹೆಸರು ಮಾಡಿದವರು.

ಅಂದಿನ ಬೆನಕ ತಂಡದ “ಮುನಿರಂಗಪ್ಪ” ಆಗಿದ್ದ ರಂಗ, ಭರಣ ಮುಂತಾದ ದವರ ಜೊತೆ ಇವರೂ ಮುನಿರಂಗಪ್ಪ ಆಗಿ ಕಾರ್ಯ ನಿರ್ವಹಿಸಿದರು. ಅಂದಿನ ದಿನಗಳಲ್ಲಿ ಎಲ್ಲ ರಂಗ ತಂಡಗಳಿಗೆ , ಅದೇ ತಂಡದ ಖಾಯಂ ಬೆಳಕು ವಿನ್ಯಾಸಕರು ಇರಲಿಲ್ಲ… ಅಂತಹ ಹಲವಾರು ರಂಗ ತಂಡಗಳಿಗೆ, ರಂಗಭೂಮಿ ಬದ್ದತೆಯಿಂದ , ಅವರ ತಾಲೀಮಿಗೆ ಹೋಗಿ, ಬೆಳಕಿನ ವಿನ್ಯಾಸ ಮಾಡಿ, ನಾಟಕದ ಯಶಸ್ಸಿಗೆ ತಮ್ಮ ಕೊಡುಗೆಯನ್ನು ನೀಡುತಿದ್ದವರು ಸಿಂಗ್.

ವಿ ರಾಮಮೂರ್ತಿ, ಪರೇಶ, ನಾಗೇಶ್, ಲೋಕೇಶ್, ಕಪ್ಪಣ್ಣ, ಕಲಾಕ್ಷೇತ್ರ ರಮೇಶ, ಮುದ್ದಣ್ಣ, ಮುಂತಾದ ಪ್ರಮುಖ ಬೆಳಕು ವಿನ್ಯಾಸಕರ ಸಾಲಿನಲ್ಲಿ ಅಷ್ಟೇ ಪ್ರಮುಖವಾಗಿ ಗುರುತಿಸಿಕೊಂಡವರು ಚಂಕು ಸಿಂಗ್…. ಸಿ ಜಿ ಕೆ ಬೆಳಕು ವಿನ್ಯಾಸಕರಾಗಿ ಸ್ವಲ್ಪ ತಡವಾಗಿ ಪ್ರವೇಶ ಪಡೆದರು. ನೋಡ ನೋಡುತಿದ್ದಂತೆ ಚಂಕು ಅವರು, ನಾಟ್ಯ ಕಾರ್ಯಕ್ರಮಗಳಿಗೂ ಬೆಳಕು ತಜ್ಞರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅದು ಎಷ್ಟರ ಮಟ್ಟಿಗೆ ಆಯಿತು ಎಂದರೆ, ಸ್ವಲ್ಪ ವರುಷ ಸಿಂಗ್ ರಂಗಭೂಮಿಯಿಂದ ಗೈರಾಗಿ, ರಾಷ್ಟ್ರೀಯ ಖ್ಯಾತಿಯ ಹಲವು ನೃತ್ಯಗಾರ್ತಿಯರಿಗೆ , ಅವರ ರಾಷ್ಟ್ರೀಯ ಮಟ್ಟದಲ್ಲಿನ ಕಾರ್ಯಕ್ರಮಗಳಿಗೆ ಬೆಳಕು ವಿನ್ಯಾಸಕಾರರಾಗಿ ಇಡೀ ದೇಶ ಸುತ್ತಲು ಪ್ರಾರಂಭಿಸಿದರು…ಅವರ ನೃತ್ಯ ಕಾರ್ಯಕ್ರಮಗಳು ರಂಗ ಸಜ್ಜಿಕೆ ಮತ್ತು ಬೆಳಕಿನ‌ವಿನ್ಯಾಸದಿಂದ ಯಶಸ್ವಿಯಾಗಲು, ಹೆಸರು ಮಾಡಲು ಸಹಕಾರಿಯಾದರು.

ಮತ್ತೆ ರಂಗಭೂಮಿಗೆ ಬಂದು ತಮ್ಮ ಆತ್ಮೀಯರೊಡನೆ, ತಮ್ಮದೇ ಒಂದು ರಂಗಸಂಸ್ಥೆಯನ್ನು ಪ್ರಾರಂಭಿಸಿ, ಸಂಘಟಕ, ನಿರ್ದೇಶಕ, ಬೆಳಕು ತಜ್ಞರಾಗಿ ಕಾರ್ಯ ನಿರ್ವಹಿಸಿದರು…. ಬೆಂಗಳೂರಿನ ಹಲವು ರಂಗ ಶಿಕ್ಷಣ ಕೇಂದ್ರದಲ್ಲಿ ಮುಖ್ಯವಾಗಿ ಬೆಳಕಿನ‌ ವಿನ್ಯಾಸ, ಜೊತೆಗೆ ರಂಗ ವಿನ್ಯಾಸ ಮತ್ತು ಸಂಘಟನೆ ಕುರಿತಾಗಿ ಪಾಠ ಮಾಡಿ, ಯುವ ಸಮುದಾಯ, ರಂಗಭೂಮಿ ಚಟುವಟಿಕೆಗಳನ್ನು ಮಾಡಲು ಪ್ರೇರಕ ಶಕ್ತಿಯಾಗಿದ್ದರು.

ಬೆಂಗಳೂರಿನ ಹವ್ಯಾಸಿ ರಂಗಭೂಮಿಯ ಪ್ರಥಮ ಚಾರಿತ್ರಿಕ ಕಾರ್ಯಕ್ರಮ ಎಂದು ಗುರುತಿಸಲ್ಪಡುವ, ಬಯಲು ನಾಟಕೋತ್ಸವದಿಂದ (1972), ಅಂದಾಜು 2015-20 ರ ವರೆವಿಗೆ ರಂಗಭೂಮಿ ಇತಿಹಾಸದ ದಾಖಲಾತಿ ಸಿಂಗ್ ಅವರ ಬಳಿ ಇದೆ. ಬೆಂಗಳೂರಿನ ಹವ್ಯಾಸಿ ರಂಗಭೂಮಿ ಯ ಎಲ್ಲ ಪ್ರಮುಖ ಕಾರ್ಯಚಟುವಟಿಕೆಗಳಲ್ಲಿ ಇವರು ಗುರುತಿಸಿಕೊಂಡು ಕಾರ್ಯ ನಿರ್ವಹಿಸಿದ್ದಾರೆ; ಎಲ್ಲದರ ಮಾಹಿತಿ, ದಾಖಲಾತಿ ಚಂಕು ಸಿಂಗ್ ಅವರ ಸೃತಿಪಟಲದಲ್ಲಿ ಇದೆ….. ರಂಗಭೂಮಿಯ ಹಿರಿಯರಾದ ಚಂದ್ರಕುಮಾರ್ ಸಿಂಗ್ ಅವರ ಸಮಗ್ರ ರಂಗ ಚಟುವಟಿಕೆಗಳನ್ನು ಗುರುತಿಸಿ, 2023 ನೇ ಸಾಲಿನ ತೊ.ನಂಜುಂಡಸ್ವಾಮಿ ನೆನಪಿನ‌ ರಂಗ ಗೌರವವನ್ನು ನೀಡಿ ಅವರನ್ನು ಸನ್ಮಾನಿಸಲಾಯಿತು.

ಅಭಿನಂದನೆಗಳು ಚಂದ್ರಕುಮಾರ್ ಸಿಂಗ್ ಅವರಿಗೆ…. ಆರೋಗ್ಯ, ನೆಮ್ಮದಿ ಮತ್ತು ಕೀರ್ತಿ ಸದಾಕಾಲವೂ ತಮಗಿರಲಿ ಸಿಂಗ್….


  • ಗುಂಡಣ್ಣ ಚಿಕ್ಕಮಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading