ಮಾವಿನಹಣ್ಣು ತಿನ್ನುವುದರಿಂದ ದೇಹದಲ್ಲಿ ತೂಕ ಹೆಚ್ಚುತ್ತದೆ? ಅಥವಾ ಅದರ ಅಡ್ಡ ಪರಿಣಾಮ ಬೀರುತ್ತದೆಯೇ? ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಉತ್ತರಿಸುತ್ತಾರೆ, ತಪ್ಪದೆ ಮುಂದೆ ಓದಿ…
ಮಾವಿನಹಣ್ಣು ತಿನ್ನುವುದರಿಂದ ದೇಹದಲ್ಲಿ ತೂಕ ಹೆಚ್ಚುತ್ತದೆ? ಅಥವಾ ಅದರ ಅಡ್ಡ ಪರಿಣಾಮ ಬೀರುತ್ತದೆಯೇ? ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಉತ್ತರಿಸುತ್ತಾರೆ, ತಪ್ಪದೆ ಮುಂದೆ ಓದಿ…
ಮಾವಿನಹಣ್ಣು ತಿಂದರೆ ಮಾತ್ರ ತೂಕ ಜಾಸ್ತಿ ಆಗುತ್ತದೆ ಎನ್ನುವುದು ಸರಿಯಲ್ಲ. ಎಷ್ಟು ತಿನ್ನುತ್ತೇವೆ, ಯಾವ ಸಮಯದಲ್ಲಿ ತಿನ್ನುತ್ತೇವೆ, ದೇಹದ ಜೀರ್ಣಶಕ್ತಿ ಹೇಗಿದೆ, ದಿನನಿತ್ಯದ ಚಟುವಟಿಕೆ ಎಷ್ಟು ಇದೆ, ಇವೆಲ್ಲವೂ ಮುಖ್ಯ.

ಮಾವಿನಹಣ್ಣು ಸಹಜವಾಗಿ ಶಕ್ತಿದಾಯಕ ಹಣ್ಣು. ಇದರಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೋರಿ ಸ್ವಲ್ಪ ಹೆಚ್ಚು ಇರುತ್ತದೆ. ದಿನಕ್ಕೆ ಒಂದು ಅಥವಾ ಎರಡು ಮಧ್ಯಮ ಪ್ರಮಾಣದ ಹಣ್ಣನ್ನು ತಿಂದರೆ ಸಾಮಾನ್ಯವಾಗಿ ಬಹುತೇಕರಿಗೆ ಸಮಸ್ಯೆಯಾಗುವುದಿಲ್ಲ.
ಆದರೆ ಹೆಚ್ಚು ಪ್ರಮಾಣದಲ್ಲಿ, ವಿಶೇಷವಾಗಿ ಊಟದ ಜೊತೆ ಅಥವಾ ಸಿಹಿ ಆಹಾರಗಳ ಜೊತೆ ಹೆಚ್ಚಾಗಿ ತಿಂದರೆ ಕೆಲವರಲ್ಲಿ ತೂಕ ಹೆಚ್ಚಲು ಕಾರಣವಾಗಬಹುದು. ದೇಹದಲ್ಲಿ ಈಗಾಗಲೇ ಕಫಪ್ರಕೃತಿ, ಮಧುಮೇಹ ಪ್ರವೃತ್ತಿ, ಕಡಿಮೆ ಚಟುವಟಿಕೆ ಇದ್ದರೆ ಮಿತಿಯಲ್ಲಿ ತಿನ್ನುವುದು ಒಳ್ಳೆಯದು. ಒಂದು ಪಾರಂಪರಿಕ ಗಮನಿಸುವ ವಿಷಯವೇನೆಂದರೆ ಮಾವಿನಹಣ್ಣು ತಿನ್ನುವಾಗ ಅತಿಯಾಗಿ ಹಾಲು, ಸಕ್ಕರೆ, ಐಸ್‌ಕ್ರೀಂ ಸೇರಿಸಿ ಸೇವಿಸುವುದೇ ಕೆಲವೊಮ್ಮೆ ಸಮಸ್ಯೆಗೆ ಕಾರಣವಾಗುತ್ತದೆ; ಹಣ್ಣು ಮಾತ್ರವಲ್ಲ. ಹಣ್ಣಿನ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬೇಡಿ, ಅತಿಯಾದ ಸೇವನೆ ಮಾಡದೇ ,ಮಿತಿಯಲ್ಲಿ ತಿಂದರೆ ಒಳ್ಳೆಯ ಆಹಾರ.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು
