ಕವಿ ಚನ್ನಕೇಶವ ಜಿ ಲಾಳನಕಟ್ಟೆ ಕಿರು ಪರಿಚಯ

ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದ ಬರಹಗಳ ಒಟ್ಟು ಸಂಖ್ಯೆ ೪,೦೦೦ ಕ್ಕೂ ಅಧಿಕ. ಕವಿಯ ಕಿರು ಪರಿಚಯವನ್ನು ತಪ್ಪದೆ ಮುಂದೆ ಓದಿ…

  • ಚನ್ನಕೇಶವ ಜಿ ಲಾಳನಕಟ್ಟೆ – ಛಂದೋಬದ್ಧ ಬರಹಗಾರ.

ಹೆಸರು : ಚನ್ನಕೇಶವ ಜಿ ಲಾಳನಕಟ್ಟೆ (ಕನ್ನಡಮ್ಮನ ತೇರು ಬಳಗದ ನಿರ್ವಾಹಕ)
ತಂದೆ ತಾಯಿ : ಗಂಗಾಧರಯ್ಯ/ಗೌರಮ್ಮ
ಹುಟ್ಟಿದ ಊರು : ಲಾಳನಕಟ್ಟೆ, ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕು
ಈಗ ವಾಸಿಸುವ ಊರು : ಬೆಂಗಳೂರು
ಉದ್ಯೋಗ :  ಮ್ಯಾನೇಜರ್ ಪ್ರಕ್ರಿಯ ಹಾಸ್ಪಿಟಲ್ಸ್, ಬೆಂಗಳೂರು.

ಕುಟುಂಬದ ಸಣ್ಣ ಪರಿಚಯ:
ಮೂಲತಃ ರೈತ ಕುಟುಂಬ, ನನ್ನ ತಾತ,ಅಪ್ಪ ಎಲ್ಲರೂ ಕೃಷಿಕರೆ. ರಾಗಿ, ತೆಂಗು, ಅಡಿಕೆ ಬಾಳೆ ವರ್ಷದ ಎಲ್ಲ ಕಾಲದಲ್ಲೂ ನೆರವಿಗಿರುವ ಬೆಳೆಗಳು.

ಸಾಮಾಜಿಕ ಜಾಲತಾಣದಲ್ಲಿ ಬರೆದ ಬರಹಗಳ ಅಂದಾಜು ಸಂಖ್ಯೆ:
4000 ಕ್ಕೂ ಅಧಿಕ

ಪುಸ್ತಕಗಳ ಮುದ್ರಣ /ಸಂಕಲನದಲ್ಲಿ ಪ್ರಕಟಗೊಂಡ ಕಥೆ/ಕವನಗಳ ಸಂಖ್ಯೆ:
ಮೂರು ಕವನ ಸಂಕಲನಗಳು, ಎರಡು ಕವನ ಸಂಕಲನಗಳು ಬಿಡುಗಡೆಗೆ ಸಿದ್ದವಾಗಿವೆ.

ಕೃತಿಗಳು:
ಮಡಿಲು, ಯುಗಾದಿ, ಭಾವಾಂಬುಧಿ, ನಳಚರಿತೆ, ಕಾವ್ಯಾಂಬುಧಿ.

ಪ್ರಶಸ್ತಿಗಳು:
ಕಥಾಗುಚ್ಚ ಬಳಗದಿಂದ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿ, ಷಟ್ಪದಿ ರತ್ನ ಇತ್ಯಾದಿ

ಪರಿಚಯ ಬರಹ :

ಈವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದ್ದು ಅವುಗಳಲ್ಲಿ ಭಾವಗೀತೆಗಳು, ಷಟ್ಪದಿಗಳು, ರಗಳೆ, ವೃತ್ತಗಳು, ಮುಕ್ತಕಗಳು, ಸಾಂಗತ್ಯ, ತ್ರಿಪದಿ, ಏಳೆ ಪದ್ಯಗಳು, ಛಂದೋವತಂಸ ಮಾತ್ರಗಣ ಆಧಾರಿತ ಲಯಗಳು, ಕಂದಪದ್ಯ, ಚುಟುಕುಗಳು ಹಾಗು ಇನ್ನೂ ಹಲವು ಪ್ರಕಾರದ ಕವಿತೆಗಳಿದ್ದು, ಸುಮಾರು ೧೦೦ ಕ್ಕೂ ಹೆಚ್ಚು ಕವಿತೆಗಳು ಭಾವಗೀತೆಗಳಾಗಿ ವಿವಿಧ ಯುಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿರುತ್ತವೆ.

ಮಡಿಲು ಕವನ ಸಂಕಲನ, ಯುಗಾದಿ ಕವನ ಸಂಕಲನ ಹಾಗು ಭಾವಾಂಬುಧಿ ಷಟ್ಪದಿ ಸಂಕಲನಗಳು ಬಿಡುಗಡೆಯಾಗಿದ್ದು ಈಗಾಗಲೇ ೨೦೨೧ರಲ್ಲಿ ಮಡಿಲು ಕವನ ಸಂಕಲನವು ರಾಜ್ಯಸರ್ಕಾರದ ಗ್ರಂಥಾಲಯಕ್ಕೆ ಆಯ್ಕೆಯಾಗಿದ್ದು, ಯುಗಾದಿ ಕವನ ಸಂಕಲನವು ೨೦೨೨ ರಲ್ಲಿ ಹಾಗು ಭಾವಾಂಬುಧಿ ಷಟ್ಪದಿ ಸಂಕಲನವು ಮೇರು ಸಾಹಿತಿಯಾದ ಪದ್ಮಶ್ರಿ ಪುರಸ್ಕೃತ ಡಾ. ದೊಡ್ಡರಂಗೇಗೌಡರ ಅಮೃತ ಹಸ್ತದಲ್ಲಿ ೨೦೨೩ ರಲ್ಲಿ ಲೋಕಾರ್ಪಣೆಯಾಗಿರುತ್ತದೆ. ನಳ ಚರಿತೆ (ಶರ ಷಟ್ಪದಿಯಲ್ಲಿ) ಹಾಗು ಕಾವ್ಯಾಂಬುಧಿ ಕವನ ಸಂಕಲನ ಬಿಡುಗಡೆಗೆ ಸಿದ್ದವಾಗಿವೆ.

ಸಪ್ತಗಿರಿ ಆಸ್ಪತ್ರೆಯಲ್ಲಿ ಕೋವಿಡ್ ವಾರಿಯರ್ ಆಗಿ ಕೋವಿಡ್ ರೋಗಿಗಳ ಸೇವೆ ಸಲ್ಲಿಸಿ ಯಶಸ್ವಿಯಾಗಿ ಅತ್ಯುತ್ತಮ ಕೋವಿಡ್ ವಾರಿಯರ್ ಪ್ರಶಸ್ತಿ ಸ್ವೀಕರಿಸಿರುತ್ತೇನೆ. ಛಂದಸ್ಸಿನಲ್ಲಿ ಕಲಿಕೆಯಲ್ಲಿ ಆಸಕ್ತರಿಗೆ ಉಚಿತ ಛಂದಸ್ಸನ್ನು ಈಗಾಗಲೇ ೧೦೦೦ ಕ್ಕೂ ಹೆಚ್ಚು ಕಲಿಕಾರ್ಥಿಗಳಿಗೆ ಕನ್ನಡಮ್ಮನ ತೇರು ಫೇಸ್ಬುಕ್ ಬಳಗದ ಮೂಲಕ ಹೇಳಿಕೊಡುತ್ತಿರುತ್ತೇನೆ.

ಶ್ರೀಶಂಕರ ವಾಹಿನಿಯಲ್ಲಿ ದೇಶಿ ಗೋವಿನ ಮಹತ್ವ ಸಾರುವ ಹಾಗು ನೆಲದ ಗೋವುಗಳನ್ನು ಉಳಿಸಲು ಗೋಸಂರಕ್ಷಣ ಕಾರ್ಯಕ್ರಮದಲ್ಲಿ ನಾಲ್ಕು ಎಪಿಸೋಡ್ ಗಳನ್ನು ನಡೆಸಿಕೊಟ್ಟಿರುತ್ತೇನೆ.

ಪ್ರಶಸ್ತಿ /ಸನ್ಮಾನಗಳು:ಸ್ನೇಹಜೀವಿ ಬಳಗದ ವತಿಯಿಂದ ಷಟ್ಪದಿ ರತ್ನ, ಕಥಾಗುಚ್ಚ ಬಳಗದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗು ಹಲವಾರು ಬಳಗಗಳಲ್ಲಿ ಪ್ರಶಸ್ತಿಗಳು ಲಭಿಸಿರುತ್ತವೆ. ವಿಶ್ವವಾಣಿ ವಿಜಯವಾಣಿ ಸೇರಿದಂತೆ ಸಾಕಷ್ಟು ಪತ್ರಿಕೆಯಲ್ಲಿ ಕವಿತೆಗಳು ಪ್ರಕಟವಾಗಿರುತ್ತವೆ.

ನಮಸ್ಕಾರಗಳೊಂದಿಗೆ


  • ಆಕೃತಿ ನ್ಯೂಸ್

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW