‘ಚಿಲಿಪಿಲಿಯೊಂದಿಗೆ ಪೂಚಂತೆ’ ಕವನ

ಹಕ್ಕಿಯ ಚಿತ್ರದ ಛಾಯಾಲೋಕಕೆ ನೀವೇ ಮುನ್ನುಡಿ….ಕವಿಯತ್ರಿ ಚೇತನ ಭಾರ್ಗವ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಚಿವ್ ಚಿವ್ ಎಂದು ಕೂಗುತಿತ್ತು ಹಕ್ಕಿ
ಗುಟುಕು ನೀಡುತ್ತಾ ತನ್ನ ಕೊಕ್ಕಿನಿಂದ ಹೆಕ್ಕಿ

ಸುಶ್ಮಿತೆ ಜತೆ ಆಡಿತು ಪುಟ್ಟ ಹಕ್ಕಿಮರಿ
ನಿಮ್ಮ ಬರಹದಲೊಂದು ಇದು ಅರಳಿದ ನವಿಲುಗರಿ

ಬಣ್ಣ ಬಣ್ಣದ ಪುಟ್ಟ ಹಕ್ಕಿಗಳ ವಿಸ್ಮಯ
ನೋಡುತ ಕುಳಿತರೆ ಮನಕೆ ಆಗುವುದು ತನ್ಮಯ

ವಿಸ್ಮಯದ ಜಗತ್ತಿಗೆ ನಿಮ್ಮ ಬರಹವೇ ಕೈಪಿಡಿ
ಹಕ್ಕಿಯ ಚಿತ್ರದ ಛಾಯಾಲೋಕಕೆ ನೀವೇ ಮುನ್ನುಡಿ

ಹಕ್ಕಿಗಳು ನಮ್ಮ ನೆರೆಹೊರೆ ಎಂದಿಗೂ ಜತೆಗಿರಲಿ
ಪ್ರಕೃತಿಯ ಹಿರಿಮೆಗೆ ತಲೆಬಾಗುವ ಭಾವವು ನಮಗಿರಲಿ

ನಿಮ್ಮಯ ಬರಹವು ತೆರೆವುದು ಬಗೆಬಗೆ ಮಾಯಾಲೋಕ
ಅಕ್ಷರ ಚಿಲಿಪಿಲಿ ಉಲಿಗೆ ನಿಮ್ಮ ಬರವಣಿಗೆಯೇ ನಾಕ


  • ಚೇತನ ಭಾರ್ಗವ – ಅರಮನೆತೋಟ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading