ನುರುಕಲು ಹಣ್ಣಿನ ಮಹತ್ವ (ಚಿರೋಂಜಿ)

ಚಿರೋಂಜಿ ಹಣ್ಣಿನ ಬೀಜದ ಎಣ್ಣೆ ಬಾದಾಮಿ ಎಣ್ಣೆಯ ಮೌಲ್ಯಕ್ಕಿಂತ ಹೆಚ್ಚು ಮೌಲ್ಯವಾದದ್ದು ಎನ್ನುತ್ತಾರೆ ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು, ಚಿರೋಂಜಿ ಹಣ್ಣಿನ ಮಹತ್ವವನ್ನು ತಪ್ಪದೆ ಮುಂದೆ ಓದಿ….

ಶಾಲಾ ದಿನಗಳಲ್ಲಿ ಮೇ ತಿಂಗಳು ರಜಾ ಬಂತೆಂದರೆ ನಮಗೆಲ್ಲಾ ಮಜವೋ ಮಜಾ. ಕಾಡುಮೆಡುಗಳೆ ನಮ್ಮ ಕಾಂದಾರ್. ಕಾಡಿನ ಹಣ್ಣುಗಳನ್ನು ಒಂದು ರುಚಿ ನೋಡದೆ ಬಿಡುತ್ತಿರಲಿಲ್ಲ.
ಕೆಂಪು ಕಪ್ಪು ಮಿಶ್ರಿತ ಹಣ್ಣು ಕಾಯಿ ಹಸಿರು ಹಣ್ಣಾದಾಗ ತಿನ್ನಲು ರುಚಿ. ಹುಳಿ ಮಿಶ್ರಿತ ಸಿಹಿ. ಬೀಜವನ್ನು ಗಟ್ಟಿಯಾದ ಮೇಲು ತೊಗಟೆ ಒಡೆದು ತಿಂದರೆ ಶಕ್ತಿಗೆ ಬಾದಾಮಿ ತಿಂದಂತೆ. ರುಚಿಯಲ್ಲಿ ಪಿಸ್ತಾ ಸವಿಯನ್ನು ಕೊಡುತ್ತದೆ. ಸ್ವಲ್ಪ ಹುರಿದು ತಿಂದರಂತೂ ತುಂಬಾ ರುಚಿ. ಆಗ ಆರೋಗ್ಯಕ್ಕೆ ಇದು ಒಳ್ಳೆಯದು ಎಂದು ತಿಳಿದಿರದಿದ್ದರೂ ರುಚಿಗಾಗಿಯಾದರೂ ತಿನ್ನುತ್ತಿದ್ದೆವು.

ಫೋಟೋ ಕೃಪೆ : google

1) ಮರದ ತೊಗಟೆಗೆ ಸ್ವಲ್ಪ ಗಾಯ ಮಾಡಿ ಬಂದರೆ ಮಾರನೇ ದಿನ ಇದರಲ್ಲಿ ಅಂಟು ಬರುತ್ತದೆ. ಇದು ಕುಷ್ಟರೋಗಕ್ಕೆ ಹಚ್ಚಲು ಔಷಧಿ ತಯಾರಿಕೆಯಲ್ಲಿ ಮುಖ್ಯವಸ್ತು ಆಗಿದೆ.

2) ಅತಿಯಾದ ಭೇದಿಯಾದಾಗ ಇದರ ಎಲೆಯ ಕಷಾಯ ಕುಡಿಯುವುದರಿಂದ ಭೇದಿ ನಿಲ್ಲುತ್ತದೆ.

3) ಇದರ ಎಲೆಯ ಕಷಾಯವನ್ನು ಕುಡಿಯುವುದರಿಂದ ಚರ್ಮರೋಗಕ್ಕೆ ಒಳ್ಳೆಯದು.

4) ಇದರ ಬೇರನ್ನು ಹಾವು ಕಚ್ಚಿದ ಜಾಗಕ್ಕೆ ಹಚ್ಚುವುದರಿಂದ ವಿಷ ಏರುವುದಿಲ್ಲ.

5) ಇದರ ಬೀಜದ ಎಣ್ಣೆ ಬಾದಾಮಿ ಎಣ್ಣೆಯ ಮೌಲ್ಯಕ್ಕಿಂತ ಹೆಚ್ಚು ಮೌಲ್ಯವಾದದ್ದು.

6) ಚಕ್ಕೆಯ ಕಷಾಯಕ್ಕೆ ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಕೆಮ್ಮು ಗುಣವಾಗುತ್ತದೆ.

7) ಹಣ್ಣಿನ ರಸ ತೆಗೆದು ಜ್ಯೂಸ್ ಮಾಡಿ ಕುಡಿದರೆ ತಕ್ಷಣ ದಾಹ ನಿವಾರಣೆ ಆಗುತ್ತದೆ.

8) ಹಸಿ ಸೋಪ್ಪನ್ನು ನೀರಿನೊಂದಿಗೆ ಕಿವುಚಿ ಲೋಳೆ ತೆಗೆದು ತಲೆಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

ತುಂಬಾ ಒಳ್ಳೆಯ ಔಷಧೀಯ ಮರವಾದ ನುರುಕಲು ಸಣ್ಣವರಿದ್ದಾಗ ಸಾಕಷ್ಟು ಮಲೆನಾಡಿನಲ್ಲಿ ಕಾಣಸಿಗುತ್ತಿದ್ದ ಈಗ ಮಾಯವಾಗುತ್ತಿರುವ ಒಂದು ಮರ ಇದು ಬೇಸರದ ಸಂಗತಿ.


  • ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW