‘ಶ್ರುತಿ ಆದರ್ಶ’ ಪ್ರಸ್ತುತಿಯ ಏಕವ್ಯಕ್ತಿ ರಂಗಪ್ರಯೋಗ ಸೆಪ್ಟೆಂಬರ್ ೩,೨೦೨೩ ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಸರ್ವರಿಗೂ ಸ್ವಾಗತವಿದ್ದು, ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಂದು ವಿನಂತಿ…
ಕತೆ : ವೀಣಾ ಶಾಂತೇಶ್ವರ
ರಂಗರೂಪ : ಡಾ.ಸಾಸ್ವೇಹಳ್ಳಿ ಸತೀಶ್
ಅಭಿನಯ : ಶ್ರುತಿ ಆದರ್ಶ
ತಂಡ : ಹೊಂಗಿರಣ
ಹೊಂಗಿರಣ ತಂಡದ ಮಾರ್ಗದರ್ಶನದೊಂದಿಗೆ, ಡಾ.ಸಾಸ್ವೆಹಳ್ಳಿ ಸತೀಶ್ ಅವರ ನಿರ್ದೇಶನದಲ್ಲಿ, ರಂಗಭೂಮಿ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯಿಡುತ್ತಿದ್ದಾರೆ ಗೆಳತಿ ಶೃತಿ ಆದರ್ಶ .
“ನಿರಾಕರಣೆ” ಎಂಬ ರಂಗಪ್ರಯೋಗವನ್ನು “ಸೆಪ್ಟೆಂಬರ್ 3” ರಂದು, ಶಿವಮೊಗ್ಗದ “ಸುವರ್ಣ ಸಾಂಸ್ಕೃತಿಕ ಭವನ” ದಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಆ ದಿನ ತಮ್ಮೆಲ್ಲರ ಉಪಸ್ಥಿತಿ ಬಹಳ ಮುಖ್ಯ. ರಂಗಪ್ರಸ್ತುತಿಯ ಕುರಿತಾದ ವಿವರ ಪೋಸ್ಟರ್ ನಲ್ಲಿದೆ. ದಯವಿಟ್ಟು ಎಲ್ಲರೂ ಬನ್ನಿ ನಿಮ್ಮವರನ್ನೂ ಕರೆ ತನ್ನಿ..
- ಆಕೃತಿ ನ್ಯೂಸ್