ನಿವೃತ್ತ ಡಿಜಿಪಿ ಡಾ.ಡಿವಿ ಗುರುಪ್ರಸಾದ್ ಅವರ ‘ಪ್ರತೀಕಾರ’ ಮೊಸಾದ್ ಗೂಢಚಾರರ ರೋಚಕ ಕಾರ್ಯಾಚರಣೆ ರೋಚಕ ಕೃತಿಯ ಕುರಿತು ರತ್ನಾಕರ ಗಡಿಗೇಶ್ವರ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ….
ಪುಸ್ತಕ : ಪ್ರತೀಕಾರ
ಲೇಖಕರು : ಡಿವಿ ಗುರುಪ್ರಸಾದ್
ಪ್ರಕಾಶನ : ಸಪ್ನ
ಬೆಲೆ : 220/
ಬಹಳ ದಿನದ ಒತ್ತಡದ ಬದುಕಿನ ನಡುವೆ ಸಿಕ್ಕ ಸಮಯದಲ್ಲಿ ಓದಿದ ಅದ್ಬುತ ಪುಸ್ತಕ “ಪ್ರತೀಕಾರ” ಹಿರಿಯರೊಬ್ಬರ ಸಲಹೆ ಮೇರೆಗೆ ಅಸ್ಥೆಯಿಂದ ತರಿಸಿ ಓದಿದೆ . ಇತ್ತೀಚಿನ ವರ್ಷಗಳಲ್ಲಿ ರಾಜತಾಂತ್ರಿಕ ವಿಷಯಕ್ಕೆ ಸಂಬಂಧಿಸಿದಂತೆ ಓದಿದ ಅತ್ಯಮೂಲ್ಯ ಪುಸ್ತಕ ಇದು. ಸಹಜವಾಗಿ ವಿಶ್ವದಲ್ಲಿ ಇಸ್ರೇಲ್ ಬಗ್ಗೆ ಒಂದು ಕುತೂಹಲ ಇದ್ದೆ ಇದೆ. ಶತ್ರು ರಾಷ್ಟ್ರಗಳ ನಡುವೆ ಎದೆ ಉಬ್ಬಿಸಿ ನಿಂತ ದೇಶದಲ್ಲಿ ಇಸ್ರೇಲ್ ಅಗ್ರಮಾನ್ಯ.
ಇಸ್ರೇಲ್ ಗೆ ಸಂಬಂಧಿಸಿದಂತೆ ಅದರ ಶಕ್ತಿ ಇರುವುದು ಅದು ನಂಬಿದ ಬೇಹುಗಾರಿಕಾ ಸಂಸ್ಥೆ “ಮೊಸಾದ್ ” ಹಾಗೂ ತನ್ನ ಸೈನಿಕ ಸಾಮರ್ಥ್ಯದ ಮೇಲೆ. ಅಲ್ಲಿ ಪ್ರತಿಯೊಬ್ಬ ಪ್ರಜೆಯೂ ದೇಶಭಕ್ತ ಸೈನಿಕನೆ. ರಾಷ್ಟ್ರದ ಬಗ್ಗೆ ಕೊಂಚಿತ್ ಕೂಡ ಅವರಲ್ಲಿ ಅನುಮಾನ ಇಲ್ಲಾ.
ಹಿರಿಯ ಪೊಲೀಸ್ ಅಧಿಕಾರಿ ಗುರುಪ್ರಸಾದ್ ಸರ್ ತಮ್ಮ ವೃತ್ತಿ ಹಾಗೂ ಬರವಣಿಗೆಯ ವಿಶಿಷ್ಟ ಶೈಲಿಯ ಮೂಲಕ ಕನ್ನಡ ಸಾಹಿತ್ಯ ರಂಗದಲ್ಲಿ ಹೆಸರಾದವರು. ಮೊಸಾದ್ ನಡೆಸಿದ ಕಾರ್ಯವನ್ನು ಕಣ್ಣಿಗೆ ಕಟ್ಟುವಂತೆ ಬರೆದು, ಕುತೂಹಲವನ್ನು ಹೆಚ್ಚು ಮಾಡಿದ್ದಾರೆ. ಇಸ್ರೇಲಿನ ಜನರ ದೇಶ ಭಕ್ತಿ,ಬೇಹುಗಾರಿಕೆ ಸಂಸ್ಥೆಯ ಬದ್ಧತೆ, ಶತ್ರುಗಳ ಮಟ್ಟ ಹಾಕಲು ಅವರು ತೆಗೆದುಕೊಳ್ಳುವ ನಿರ್ಧಾರಗಳು. ಒಬ್ಬೊಬ್ಬ ಕಮಂಡೋ ನ ಧೀ ಶಕ್ತಿ ,ತಂತ್ರಗಳು ಯೋಜನೆಗಳು ನಿಬ್ಬೆರಗು ಮಾಡುತ್ತವೆ. ಶತ್ರು ಒಬ್ಬನನ್ನು ಬಲಿ ತೆಗೆದು ಕೊಳ್ಳುವಾಗ ಸಾಮಾನ್ಯ ನಾಗರಿಕನಿಗೆ ತೊಂದರೆ ಆಗದಂತೆ ನೋಡಿಕೊಂಡ ಹೆಜ್ಜೆಗಳು ನಿಜಕ್ಕೂ ಅಭಿನಂದನಾರ್ಹ.
ಇಡೀ ಪುಸ್ತಕ ಓದಿದ ಬಳಿಕ, ಇಸ್ರೇಲ್ ಬೇಹುಗಾರಿಕೆ ಹಾಗೂ ಸೈನ್ಯ ಬಲಿ ತೆಗೆದುಕೊಂಡ ಆತಂಕವಾದಿಗಳ ಪಟ್ಟಿಯಲ್ಲಿ ಒಬ್ಬನನ್ನು ಹೊರತು ಪಡಿಸಿ ಉಳಿದವರು ಅತ್ಯುನ್ನತ ಪದವಿ ಪಡೆದವರೇ ವೈದ್ಯ, ಎಂಜಿನಿಯರ್, ವಿಜ್ಞಾನಿ,ವಕೀಲ ಹೀಗೆ ಆಗುಂತಕರ ಪಟ್ಟಿ ಬೆಳೆಯುತ್ತದೆ. ಆಗುತಂಕರಿಗೆ ಉನ್ನತ ಶಿಕ್ಷಣ ಸಿಕ್ಕಿಯು ಅವರು ತೆಗೆದುಕೊಂಡ ನಿರ್ಧಾರಗಳು ಬೇಸರ ಮೂಡಿಸುತ್ತದೆ.
ನಿವೃತ್ತ ಡಿಜಿಪಿ ಡಾ.ಡಿವಿ ಗುರುಪ್ರಸಾದ್
ಶಾಸ್ತ್ರೀಜಿ ಹತ್ಯೆಯಾಗಿ ಆರು ದಶಕ ಕಳೆದರೂ ಸಾಕ್ಷಿ ಸಿಕ್ಕದ ಭಾರತೀಯರು ಒಮ್ಮೆ ಪುಟ್ಟ ರಾಷ್ಟ್ರ ಇಸ್ರೇಲ್ ಬಗ್ಗೆ ತಿಳಿದುಕೊಳ್ಳಬೇಕು. ರಾಷ್ಟ್ರೀಯತೆ ಬಗ್ಗೆ ನಮಗೆ ಸದಾ ಶ್ರೇಷ್ಟ ನಿದರ್ಶನ ಇಸ್ರೇಲ್. ಯುದ್ದ ಸಹ್ಯ ಸಮಾಜದ ಲಕ್ಷಣ ಅಲ್ಲದೆ ಇರಬಹುದು ಆದರೆ ತನ್ನ ತನ ಉಳಿಸಿಕೊಳ್ಳುವ ಮಾರ್ಗ ಕೂಡ ಹೌದು. ಚಂದ್ರಯಾನ ದ ಯಶಸ್ಸಿನ ಬಗ್ಗೆ ಮೂಗು ಮುರಿಯುವ,,ಸಂಶಯ ವ್ಯಕ್ತ ಪಡಿಸುವ ಭಾರತೀಯರು ಒಮ್ಮೆ ಇಸ್ರೇಲ್ ಆಪರೇಶನ್ ಎಂಟಬೇ ಸಮಯದಲ್ಲಿ ತೆಗೆದು ಕೊಂಡ ನಿರ್ಧಾರಗಳನ್ನು ಒಮ್ಮೆ ನೋಡಬೇಕು….
ಓದಿದ ಬಳಿಕ ಮತ್ತು ಓದಬೇಕು ಎನ್ನಿಸಿದ ಪುಸ್ತಕ ಪ್ರತೀಕಾರ
- ರತ್ನಾಕರ ಗಡಿಗೇಶ್ವರ