ಮಕ್ಕಳಿಗಾಗಿ ಒಂದು ದಿನ ಇಲ್ಲಿ ಹೋಗಿ ಬನ್ನಿ…

ಬೆಂಗಳೂರಿನ ‘ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಾಜಿಕಲ್ ಮ್ಯೂಸಿಯಮ್’ ನಲ್ಲಿ ಒಟ್ಟು ನಾಲ್ಕು ಮಹಡಿಗಳಲ್ಲಿ ವಿಜ್ಞಾನದ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ವಿಷಯಗಳನ್ನು ಕಾಣಬಹುದು. ವಾರದ ಕೊನೆಯಲ್ಲಿ ಒಮ್ಮೆ ಇಲ್ಲಿ ಭೇಟಿ ಕೊಡಿ…

ಅಮ್ಮಾ ಎಲ್ಲಾದ್ರೂ ಕರ್ಕೊಂಡು ಹೋಗು.. ಎಂಬ ಬೇಡಿಕೆ ಬರುವ ಮೊದಲೇ ನಾನು onlineನಲ್ಲಿ ಟಿಕೆಟ್ ಖರೀದಿಸಿದ್ದು ‘ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಾಜಿಕಲ್ ಮ್ಯೂಸಿಯಮ್’ಗೆ. ಅಲ್ಲಿ ಹೋಗಿ ಟಿಕೆಟ್ ಖರೀದಿಸಲು ಒಂದು ಗಂಟೆ ಕ್ಯೂ ನಿಲ್ಲಬೇಕಾಗುತ್ತದೆ ಎಂಬ ಮಾಹಿತಿ ಕೊಟ್ಟದ್ದು ಗೂಗಲ್.

ಇಲ್ಲಿ ಪ್ರವೇಶ ದರ ಒಬ್ಬರಿಗೆ ಕೇವಲ ೮೫/- ರೂಪಾಯಿಗಳು. ಶಾಲೆಯಿಂದ ಹೋಗುವುದಾದರೆ ಇನ್ನೂ ಕಡಿಮೆಗೆ ಪ್ರವೇಶ ಸಿಗುತ್ತದೆ. ಈ ಆದಿತ್ಯವಾರ ಬೆಳಗ್ಗೆ ಮನೆಯಲ್ಲಿ ಬೆಣ್ಣೆ ಬೆಲ್ಲ ಮತ್ತು ಚಟ್ನಿ ಸೇರಿಸಿ ರೊಟ್ಟಿ ತಿಂದು, ಕಬ್ಬನ್ ಪಾರ್ಕ್ ಪಕ್ಕದ ಮ್ಯೂಸಿಯಂ ಬಾಗಿಲು ತೆರೆಯುವಷ್ಟರಲ್ಲಿ ನಾವು ಹಾಜರ್. ಇಲ್ಲಿ ಒಟ್ಟು ನಾಲ್ಕು ಮಹಡಿಗಳಲ್ಲಿ ವಿಜ್ಞಾನದ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ವಿಷಯಗಳನ್ನು ಕಾಣಬಹುದು.

ಫೋಟೋ ಕೃಪೆ : GOOGLE

ಮೊದಲನೆಯದು ಯಂತ್ರಗಳದ್ದು. ತೀರಾ ಸರಳವಾದ zip ನಿಂದ ಹಿಡಿದು ಕಾರಿನ ಇಂಜಿನ್ನಿನ ವರೆಗಿನ ಮಾದರಿಗಳನ್ನು ಕಾಣಬಹುದು. ಅಷ್ಟೇ ಅಲ್ಲ, ಇವುಗಳಲ್ಲಿ ಹೆಚ್ಚಿನವುಗಳನ್ನು ನಾವೇ ಸ್ವತಃ ಚಲಾಯಿಸಿ, ಅವು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ತಿಳಿಯಬಹುದು.

ರೈಟ್ ಸಹೋದರರು ಮೊದಲ ಬಾರಿಗೆ ಹಾರಿಸಿದ ವಿಮಾನದ life size model ಇಲ್ಲಿದೆ. ಜೊತೆಗೇ ಅಂತಹ ವಿಮಾನವನನ್ನು ಚಲಾಯಿಸುವುದು ಹೇಗೆ ಎಂಬ ಅನುಭವ ಪಡೆಯಲೂ ಅವಕಾಶವಿದೆ. ಅದಕ್ಕೆ 60 ರುಪಾಯಿಗಳ ಪ್ರತ್ಯೇಕ ಟಿಕೆಟ್.

ಸನ್ನೆ/lever ಹೇಗೆ ಕೆಲಸ ಮಾಡುತ್ತದೆ? ಅದರ ಹಿಂದಿನ ವಿಜ್ಞಾನ ಏನು ಎನ್ನುವದರಿಂದ ಜಲವಿದ್ಯುತ್ ನ ಟರ್ಬೈನ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ವರೆಗೆ ಕಲಿಯಬಹುದು.
೧,೨,೩ನೆಯ ಮಹಡಿಗಳಲ್ಲಿ…

ಫೋಟೋ ಕೃಪೆ : GOOGLE

1) ವಿದ್ಯುತ್ ತಂತ್ರಜ್ಞಾನ. ವಿದ್ಯುತ್ತಿಗೆ ಸಂಬಂಧಿಸಿದ ಹಲವು ಪ್ರಯೋಗಗಳನ್ನು ಇಲ್ಲಿ ನೋಡಬಹುದು. ಹೈಸ್ಕೂಲು ಮತ್ತು ಪಿಯುಸಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದು ಇಷ್ಟವಾದೀತು.

2) Fun Science, ಇಲ್ಲಿ ವಿಜ್ಞಾನದ ಹಲವು ಅಚ್ಚರಿಗಳಿವೆ. ಇಲ್ಲಿ ಆಳ ಸಮುದ್ರದ ಜೀವಿಗಳ ಕುರಿತು ಸಣ್ಣ 3D ಪ್ರದರ್ಶನವೂ ಇದೆ. ಅದಕ್ಕೆ ಒಳಗೇ ಪ್ರತ್ಯೇಕ ಟಿಕೆಟ್ ಪಡೆಯಬೇಕು.

3) Space technology. ಇಲ್ಲಿ ISRO ಇತಿಹಾಸ, ಅಂತರಿಕ್ಷಕ್ಕೆ ಕಳುಹಿಸಿದ ರಾಕೆಟ್ಗಳು, ಉಪಗ್ರಹಗಳ‌ ಮಾದರಿಗಳೂ, ಅವುಗಳ ಹಿಂದಿನ ತಂತ್ರಜ್ಞಾನದ ವಿವರಗಳು ಲಭ್ಯ. Quiz, video ಮಾಹಿತಿ ಇಲ್ಲಿಯೂ ಇದೆ.

4) BioTechnology. ಇಲ್ಲೂ ಕೂಡ ಮಾದರಿಗಳು, quizಗಳು ಲಭ್ಯ.

5) ಭಾರತೀಯ ಜ್ಞಾನ ಭಂಡಾರ ಆಯುರ್ವೇದ, ಮತ್ತು ಭಾರತೀಯ ತಂತ್ರಜ್ಞಾನಗಳಿಗೆ ಸಂಬಂಧಿಸಿದ ವಿಷಯಗಳಿವೆ.

6) ಚಿಣ್ಣರ ಲೋಕ ಇಲ್ಲಿನ attraction! ಇದು 3ನೆಯ ಮಹಡಿಯಲ್ಲಿದೆ‌. ಕೆಳಗಿನ ಎಲ್ಲವನ್ನೂ ನೋಡಿ ಇಲ್ಲಿಗೆ ತಲುಪುವಷ್ಟರಲ್ಲಿ ಸುಸ್ತಾಗಿಬಿಡುತ್ತದೆ. ಆದ್ದರಿಂದ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗುವಿರಾದರೆ ಮೊದಲು ಈ ವಿಭಾಗವನ್ನೇ ನೋಡಿ ಎನ್ನುವುದು ನನ್ನ ಸಲಹೆ! ಇಲ್ಲಿ ಪ್ರಾಣಿಗಳ ಧ್ವನಿಕೇಳಿ ಅವುಗಳನ್ನು ಗುರುತಿಸುವುದು, ಹೂವಿನ ಪರಿಮಳ ನೋಡಿ ಗುರುತಿಸುವುದು, ಪ್ರಾಣಿಗಳ ಕಣ್ಣು-ಕಿವಿಗಳನ್ನು ನೋಡಿ ಗುರುತಿಸುವಂತಹ ಆಟಗಳಿವೆ. ಪುಟ್ಟ ಮಕ್ಕಳಿಗೆ ವಿಜ್ಞಾನದ ಕೆಲವು ಆಟಗಳಿವೆ. ಇಲ್ಲಿನ ಮುಖ್ಯ ಆಕರ್ಷಣೆ ಸುತ್ತಲೂ ಕನ್ನಡಿ ಅಳವಡಿಸಿರುವ mirror maze.

ನಾಲ್ಕನೆ ಮಹಡಿಯಲ್ಲಿ‌ ಕ್ಯಾಂಟೀನ್ ಇದೆ. ನಾವಲ್ಲಿ ಏನೂ ತಿಂದಿಲ್ಲವಾದ್ದರಿಂದ ಆಹಾರ ಹೇಗಿದೆ ಎಂದು ತಿಳಿದಿಲ್ಲ. ಊಟ, fried rice, ಚಪಾತಿ ಪಲ್ಯಗಳಂತಹ ಕೆಲವು ಮಾತ್ರ ಲಭ್ಯ.
ಸಮೀಪದಲ್ಲಿ ಊಟಕ್ಕೆ ತುಂಬಾ ಆಯ್ಕೆಗಳೇನೂ ಕಾಣಲಿಲ್ಲ. ಅದೂ ಅಲ್ಲದೆ ಮ್ಯೂಸಿಯಮ್ಮಿನೊಳಗೆ ಕಡಿಮೆ ಎಂದರೂ ಮೂರರಿಂದ ಮೂರುವರೆ ಗಂಟೆಗಳ ಕಾಲ ಬೇಕಾಗುವುದರಿಂದ ಮಕ್ಕಳನ್ನು ಕರೆದುಕೊಂಡು ಹೋಗುವವರು ಏನಾದರೂ ತಿಂಡಿತಿನಿಸುಗಳನ್ನು ಕೈಚೀಲದಲ್ಲಿ ತೆಗೆದುಕೊಂಡು ಹೋಗುವುದು ಒಳ್ಳೆಯದು.

ಫೋಟೋ ಕೃಪೆ : GOOGLE

ಹೊತ್ತೇರಿದಂತೆ ಜನಸಂದಣಿ ಹೆಚ್ಚು. ಬೇಗ ತಲುಪುವುದು ಉತ್ತಮ. ಎಲ್ಲ ವಿಭಾಗದ ಎಲ್ಲ ವಿಷಯಗಳನ್ನೂ ಸರಿಯಾಗಿ ನೋಡುತ್ತೇನೆ ಎಂದರೆ ಇಡಿಯ ದಿನವೂ ಕಡಿಮೆಯೇ. ನಾವು ಒಂದಷ್ಟನ್ನು ವಿವರವಾಗಿ ನೋಡಿ, ಇನ್ನೊಂದಷ್ಟನ್ನು ಸುಮ್ಮನೇ ನೋಡಿ ಮುಂದುವರಿದೆವು.

ಇದು ಮನೋರಂಜನೆಯೊಂದಿಕೆ ಕಲಿಕೆಯ ತಾಣ. ಶಾಲೆಗಳು ಮಕ್ಕಳನ್ನು ಇಲ್ಲಿನ ಬೇರೆ ಬೇರೆ ವಿಭಾಗಕ್ಕೆ ಪ್ರತ್ಯೇಕವಾಗಿ ಬೇರೆ ಬೇರೆ ದಿನ ಮಕ್ಕಳನ್ನು ಕರೆದುಕೊಂಡು ಹೋದರೆ ಶಾಲೆಯಲ್ಲಿ ಕಲಿಸುವ ಹಲವಾರು ಥಿಯರಿಗಳನ್ನು ಮಕ್ಕಳು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯ. ಇದು ಮಕ್ಕಳಿಗೆ ಮಾತ್ರ ಅಲ್ಲ, ಬದುಕನ್ನು ಆಸ್ವಾದಿಸುವ, ನಿರಂತರ ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲ ವಯಸ್ಸಿನವರಿಗೂ ಒಂದು ಉತ್ತಮ ಸ್ಥಳ.


  • ಡಾ. ಸುವರ್ಣಿನೀ ಕೊಣಲೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW