ಶ್ರೀದೇವಿ ಭುಜಂಗಪ್ಪ ಅವರ ‘ಇವನೇ’ ಕವನ ಸಂಕಲನದ ಕುರಿತು ಪದ್ಮಶ್ರೀ ಗೋವಿಂದರಾಜ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ : ಇವನೇ
ಲೇಖಕರು : ಶ್ರೀದೇವಿ ಭುಜಂಗಪ್ಪ
ಪ್ರಕಾರ : ಕವನ ಸಂಕಲನ
ಶ್ರೀದೇವಿ ಭುಜಂಗಪ್ಪ ಅವರ ಕಾವ್ಯ ಕೃತಿ. “ನನ್ ಸಮುದ್ರ ನೀನು”, ಎನ್ನುತ್ತಲೇ ಕಡಲ ಒಳಗಿನ ನಿಗೂಢ ಪ್ರಪಂಚದoತೆ ಅವನ ಪೂರ್ತಿಯಾಗಿ ಅರಿಯಲಾಗದೇ ಒತ್ತರಿಸಿ ಬರುವ ಪ್ರೇಮ ಆತಂಕ ದುಗುಡ ಅಲೆಗಳ ಹಿಡಿದಿಲಾಗದೇ ಒಟ್ಟಾರೆಯಾಗಿ ಪ್ರೀತಿಯ ಸಮೀಕರಣ ಈ ಕವನ ಸಂಕಲನ.
ಬರಹಗಾರ್ತಿಗೆ ಅವಂನೆಂದರೆ ಆದ್ಯಾತ್ಮ,ಪ್ರೇಮ,ಕಡು ತಾಪದ ವಿರಹ. ಅವನ ಸುತ್ತ ಹಾಗೂ ಬದುಕಿನ ಒಂದೊಂದೂ ಸತ್ಯದ ಸುತ್ತ ಗಿರಕಿ ಹೊಡೆಯುತ್ತಲೇ ಇದೆಲ್ಲವನೂ ಅತೀ ಸರಳವಾಗಿ ಸುಂದರವಾಗಿ ಓದುಗರ ಮುಂದಿಟ್ಟಿದ್ದಾರೆ.

ಇಲ್ಲಿ ಅಧ್ಯಾತ್ಮ, ಪ್ರೇಮ, ಒಂಟಿತನ ಮತ್ತು ಬದುಕಿನ ಸಣ್ಣಪುಟ್ಟ ಹೊನಲುಗಳನ್ನು ಅತ್ಯಂತ ಸರಳವಾಗಿ, ನೇರವಾಗಿ ಓದುಗರ ಮುಂದಿಡುತ್ತದೆ. ಸಂಕಲನದ ಶೀರ್ಷಿಕೆಯೇ ಸೂಚಿಸುವಂತೆ, ಇಲ್ಲಿನ ಬಹುತೇಕ ಕವಿತೆಗಳು ‘ಅವನ’ ಸುತ್ತ ಹಾಗೂ ಬದುಕಿನ ಒಂದೊಂದು ಸತ್ಯದ ಸುತ್ತ ಗಿರಕಿ ಹೊಡೆಯುತ್ತವೆ. ಕವನವೆಂದರೆ ಅರ್ಥವಾಗದ ಭಾಷೆ ಅನ್ನುವ ಓದುಗರಿಗೆ ಸರಳವಾಗಿ ಸುಂದರವಾಗಿದೆ.
“ನೀನು ಅಲ್ಲಿ ದೇವರ ಮುಂದೆ ಕೂತು ಮಂತ್ರಗಳ ಪಠಿಸುತ್ತೀಯಾ… ನಾನು ಅದೇ ದೇವರ ಮುಂದೆ ಕೂತು ನಿನ್ನದೇ ಹೆಸರು ನೆನೆಯುತ್ತೇನೆ” ಆಹ್ ! ಈ ಪ್ರೀತಿಯೇ ಹಾಗೇ ಆದ್ಯಾತ್ಮದ ಅನುಭವ. ದೇವರ ಎದುರು ಕುಳಿತ ನಾವು ದೇವರನೇ ನೆನೆಯಲಾರೆವು. ನಮ್ಮ ಸುತ್ತಲಿನ ನಾವು ಪ್ರೀತಿಸುವ ಜನರ ಮುಖಗಳು ಮನದಲ್ಲಿ ಹಾದು ಹೋಗುತ್ತವೆ. ಪ್ರೀತಿಯೇದರೆ ಪರಮಾತ್ಮ ಅವಂನೆಂದರೆ ಜಪ ತಪಗಳ ನಡುವೆಯೂ ತಪನೆಯಲಿ ತಪಿಸಿದರೂ ತಪಸ್ಸಿಗೂ ಒಲಿಯದವನು.

ಈ ಸಂಕಲನದ ಕವಿತೆಗಳಲ್ಲಿ ಹೆಣ್ಣೊಬ್ಬಳ ನಿರೀಕ್ಷೆಗಳು, ಮೌನ ಮತ್ತು ಅವಳು ಅನುಭವಿಸುವ ಭಾವ ತೀವ್ರತೆಗಳು ಎದ್ದು ಕಾಣುತ್ತವೆ. ಪ್ರೀತಿಯಲ್ಲಿನ ತುಡಿತ ಮತ್ತು ವಿರಹ ಎರೆಡೂ ಒಂದೇ ಪುಸ್ತಕದ ಕೊನೆ ಮತ್ತು ಮೊದಲಿನ ಹಾಳೆಗಳಂತೆ. ಕೆಲವು ಕವಿತೆಗಳು ಹೆಚ್ಚು ಸಂಕ್ಷಿಪ್ತವಾಗಿದ್ದು, ಓದುಗರನ್ನು ಇನ್ನೂ ಕಾಡಿಸುತ್ತಲೇ ಮುಗಿದುಹೋದಂತೆ ಅನ್ನಿಸುತ್ತದೆ. ಭಾವನೆಗಳನ್ನು ಗಂಭೀರವಾದ ರೂಪಕಗಳ ಮೂಲಕ ಕಟ್ಟಿಕೊಟ್ಟಿರುವ ಶ್ರೀ ಅವರು ಮೊದಲ ಸಂಕಲನವನ್ನು ಅಚ್ಚುಕಟ್ಟಾಗಿ ಹೊರ ತಂದಿದ್ದಾರೆ.
ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದಿರುವುದು ಈ ಕೃತಿಯ ಗುಣಮಟ್ಟಕ್ಕೆ ಸಾಕ್ಷಿ. ಸರಳ ಪ್ರೇಮ ಕವಿತೆಗಳನ್ನು ಹಾಗೂ ಭಾವನಾತ್ಮಕ ಬರಹಗಳನ್ನು ಇಷ್ಟಪಡುವವರಿಗೆ ಇದು ಖಂಡಿತವಾಗಿಯೂ ಇಷ್ಟವಾಗುವ ಕೃತಿ. ಶ್ರೀದೇವಿ ಭುಜಂಗಪ್ಪ ಅವರ ಈ ಕಾವ್ಯದ ಹಾದಿ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಗಟ್ಟಿತನವನ್ನು ಪಡೆಯಲಿ…
ಒಳ್ಳೆಯದಾಗಲಿ… ಶ್ರೀ ನಿಮ್ಮಿಂದ ಮತ್ತಷ್ಟು ಕಾವ್ಯಗಳು ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬರೆಯುವಂತಾಗ
- ಪದ್ಮಶ್ರೀ ಗೋವಿಂದರಾಜ್
