ಕಡಿಮೆ ಅಂಕ ಎಂದು ಮೂಗು ಮುರಿಯದಿರಿ

ಕಡಿಮೆ ಅಂಕ ಬಂದಾಕ್ಷಣ ಜೀವನದಲ್ಲಿ ವಿಫಲವಾದರೆಂದು ಭಾವಿಸಬೇಡಿ. ಅಂಕದಲ್ಲಿ ಕಮ್ಮಿಯಾದರೂ ಬದುಕಿನಲ್ಲಿ ಮುಂದಿರುತ್ತಾರೆ. ಪಾಲಕರು, ಶಿಕ್ಷಕರು ಆ ಆತ್ಮವಿಶ್ವಾಸ ಇಟ್ಟುಕೊಳ್ಳಬೇಕು. ಉದ್ಯಮಿ ಅರುಣ್ ಪ್ರಸಾದ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಶಿಕ್ಷಕರು ಮತ್ತು ಪೋಷಕರಿಗೆ ವಿನಂತಿ ಏನೆಂದರೆ ದಯವಿಟ್ಟು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರನ್ನ ತೆಗಳ ಬೇಡಿ. ಫೇಲ್ ಆದರೆ ಅವರನ್ನ ಅವಮಾನ ಮಾಡಬೇಡಿ.
ಅನುತ್ತೀರ್ಣರಾದವರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರು ಅಸಮರ್ಥರಲ್ಲ. ಹೆಚ್ಚು ಅಂಕ ಪಡೆದವರನ್ನು ಪ್ರಶಂಸಿವುದು ಕಡಿಮೆ ಅಂಕ ಪಡೆದವರು ಅವಮಾನ ಎಂದು ಭಾವಿಸಬಾರದು.

ಅನುತ್ತೀರ್ಣರಾದವರು, ಕಡಿಮೆ ಅಂಕ ಪಡೆದವರು, ಶಾಲೆ ಬಿಟ್ಟವರು ಏನೇನು ಸಾಧನೆ ಮಾಡಿದ್ದಾರೆ ಗೊತ್ತಾ? ಅವರ ಭವಿಷ್ಯದ ಜೀವನ ಪರೀಕ್ಷೆಯ ಅಂಕಗಳಿಗೆ ಸೀಮಿತವಲ್ಲ ಎಂಬ ವಾಸ್ತವ ತಿಳಿಸಿ.

Man of the Day ಎಂಬಂತೆ ಪರೀಕ್ಷೆ ಪಲಿತಾಂಶ ಬಂದ ದಿನ ಅತಿ ಹೆಚ್ಚು ಅಂಕ ಪಡೆದವರನ್ನ ಎಲ್ಲರೂ ಪ್ರಶಂಸೆ ಮಾಡುತ್ತಾರೆ. ಇದರಿಂದ ಕಡಿಮೆ ಅಂಕ ಪಡೆದ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳು ಇದು ತಮಗಾದ ಅವಮಾನ ಎಂದು ಭಾವಿಸಬೇಕಾಗಿಲ್ಲ.

ಕಡಿಮೆ ಅಂಕ ಪಡೆದವರನ್ನ ಅನುತ್ತೀರ್ಣರಾದವರನ್ನು ಪೋಷಕರಾಗಲಿ, ಅವರ ಶಿಕ್ಷಕರಾಗಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೋಲಿಸಿ ಅವಮಾನ ಗೇಲಿ ಯಾವ ಕಾರಣಕ್ಕೂ ಮಾಡಬಾರದು. ಶಿಕ್ಷಣದ ಅಂಕಗಳು ಜೀವನದ ಭವಿಷ್ಯ ನಿರ್ಧರಿಸುವುದಿಲ್ಲ, ಇವತ್ತಿನ ಪರೀಕ್ಷೆಯೇ ಜೀವನದ ಅಂತಿಮ ಪರೀಕ್ಷೆ ಅಲ್ಲ. ಪ್ರಪಂಚದಲ್ಲಿ ನಾವು ಆರಾಧಿಸುವ ನಮಗೆ ಮಾದರಿ ಆದ ಯಶಸ್ವಿ ವ್ಯಕ್ತಿಗಳು ತಮ್ಮ ತಮ್ಮ ವಿದ್ಯಾರ್ಥಿ ಜೀವನದ ಪರೀಕ್ಷೆಯಲ್ಲಿ ಯಶಸ್ವಿ ಆದವರಲ್ಲ.

ಅವರೆಲ್ಲ ಅನುತ್ತೀರ್ಣರಾದವರು ಶಾಲೆ ಅರ್ದದಲ್ಲೇ ಬಿಟ್ಟ ಡಾಪ್ ಔಟ್ ಆಗಿದ್ದಾರೆ. ಭಾರತೀಯ ಪ್ರಸಿದ್ದ ವ್ಯಕ್ತಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಅಜಿಂ ಪ್ರೇಂಜಿ, ಕಪಿಲ್ ದೇವ್, ಮೇರಿ ಕೊಂ, ಸಚಿನ್ ತೆಂಡೂಲ್ಕರ್, ಸ್ಮೃತಿ ಇರಾನಿ, ಚಿತ್ರ ತಾರೆಗಳಾದ ಅಕ್ಷಯ ಕಪೂರ್, ಸಲ್ಮಾನ್ ಖಾನ್, ಐಶ್ವರ್ಯ ರೈ, ಅಮೀರ್ ಖಾನ್, ಕಮಲ್ ಹಾಸನ್ ಎಲ್ಲಾ ಡ್ರಾಪ್ ಔಟ್ ಆದವರೇ ಆಗಿದ್ದಾರೆ.

ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಆದರೆ ಅವರ ಕ್ಷೇತ್ರಗಳಲ್ಲಿ ಸಾದನೆ ಮಾಡಿ ವಿಶ್ವ ವಿಖ್ಯಾತರಾದ ನ್ಯೂಟನ್, ಅಬ್ರಹಾಂ ಲಿಂಕನ್, ರೈಟ್ ಸಹೋದರರು, ಡಾರ್ವಿನ್, ಚರ್ಚಿಲ್, ವಾಲ್ ಡಿಸ್ನಿ, ಲೂಯಿಸ್ ಮೆ ಆಲ್ಕಟ್, ಜೆ.ಕೆ.ರೋಲಿಂಗ್, ಎಡಿಸನ್, ಓಪ್ರಾ ವಿಸ್ಪ್ರೆ ಹೀಗೆ ಸಾಲು ಸಾಲು ಸಾದಕರ ಪಟ್ಟಿ ಸಾಗುತ್ತದೆ.

ಖ್ಯಾತ ವಿಚಾರವಾದಿ ಸಾಹಿತಿ ಶಿವರಾಮ ಕಾರಂತರು ಅವರ ಮಕ್ಕಳಿಗೆ ಪ್ರಾಥಮಿಕ ಶಾಲೆಗೆ ಕಳಿಸಲೇ ಇಲ್ಲ. ಕನ್ನಡದ ಪ್ರಖ್ಯಾತ ಸಾಹಿತಿ ಬರಹಗಾರ ಹಾಯ್ ಬೆಂಗಳೂರು ರವಿ ಬೆಳಗೆರೆ ಕೂಡ ಎಸ್.ಎಸ್.ಎಲ್.ಸಿ. ಫೇಲ್ ಆದವರು.

ನಾನು 7 ನೇ ತರಗತಿಯಲ್ಲಿ ಮೆರಿಟ್ ವಿದ್ಯಾರ್ಥಿ. ಆದರೆ 8 ನೇ ತರಗತಿಯಿಂದ SSLC ತನಕ ತರಗತಿಗೆ ಸರಿಯಾಗಿ ಹೋಗಲೇ ಇಲ್ಲ. ಇದರಿಂದ SSLC ಯಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ ವಿಷಯದ ಪರೀಕ್ಷೆಗೆ ಮಾತ್ರ ಗೈಡ್ ಓದಿ ಪರೀಕ್ಷೆಯಲ್ಲಿ ಅದನ್ನು ಪಾಸ್ ಮಾಡಿದ್ದೆ. ಉಳಿದ ಗಣಿತ, ವಿಜ್ಞಾನ ಮತ್ತು ಸಮಾಜ ಪರೀಕ್ಷೆ ಬರೆಯದೆ ಫೇಲ್  ಆಗಿದ್ದೆ. ನಂತರ ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸ್ ಮಾಡಿದ್ದೆ.

ಶಿಕ್ಷಕರು ಮತ್ತು ಪೋಷಕರಿಗೆ ವಿನಂತಿ ಏನೆಂದರೆ ದಯವಿಟ್ಟು ಕಡಿಮೆ ಅಂಕ ಪಡೆದವರನ್ನ ತೆಗಳುವುದು ಮತ್ತು ಹೆಚ್ಚು ಅಂಕ ಪಡೆದವರೊಡನೆ ಹೋಲಿಸುವುದು ಮಾಡಬೇಡಿ.
ಹಾಗೂ ಫೇಲ್ ಆದರೆ ಅವಮಾನ ಮಾಡಬೇಡಿ ಈ ಮೇಲಿನ ಲೇಖನ ಅವರಿಗೆ ತೋರಿಸಿ ಅವರ ಭವಿಷ್ಯದ ಜೀವನ ಪರೀಕ್ಷೆಯ ಅಂಕಗಳಿಗೆ ಸೀಮಿತವಲ್ಲ ಎಂಬ ವಾಸ್ತವ ತಿಳಿಸಿ.


  • ಅರುಣ್ ಪ್ರಸಾದ್ – ಆನಂದಪುರಂ ಮಲ್ಲಿಕಾ ವೆಜ್ ಹೋಟೆಲ್ ಮಾಲೀಕರು, ಲೇಖಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading