ತಾನು ಒಳ್ಳೆಯವನಾದರೆ ಊರು ಒಳ್ಳೆಯದು

ಉತ್ತಮ ಸಮಾಜದ ಸೃಷ್ಟಿಗೆ ತಿದ್ದುಪಡಿ ಆಗಬೇಕಿರುವುದು ಮೊದಲು ಮನೆಯಿಂದ, ವ್ಯಕ್ತಿತ್ವದಲ್ಲಿ, ಅದನ್ನು ಬಿಟ್ಟು ಸಾಯುವ ವಯಸ್ಸಿನಲ್ಲಿ ಸತ್ಯ ಅರಿತರೆ ಅರ್ಥವಿಲ್ಲ, ಒಂದು ಸುದೀರ್ಘ ಚಿಂತನಾ ಲೇಖನ ಲೇಖಕ ರೂಪೇಶ್ ಪುತ್ತೂರು ಅವರ ಲೇಖನಿಯಲ್ಲಿ ತಪ್ಪದೆ ಓದಿ …

ಒಬ್ಬ ವಿದ್ಯಾವಂತ, ಬಿಸಿರಕ್ತದ ನವ ತರುಣ ಯುವಕ,
20ರ ಹರೆಯ ತಲುಪಿದಾಗ…

“ಈ ಲೋಕವೆಲ್ಲಾ ಸರಿಯಾಗಿಲ್ಲ….
ಶಿಸ್ತುಬದ್ಧ-ಕೃಮವಿಲ್ಲದಾಗಿದೆ.
ನಾನು ಈ ಲೋಕವನ್ನು ಸರಿಪಡಿಸಿ
ಸುವ್ಯವಸ್ಥೆಗೆ ತರುತ್ತೇನೆ” ಎಂದು….

ಸುಮಾರು ಹತ್ತು ವರುಷ ಅವನು ಲೋಕೊದ್ದಾರಕ್ಕಾಗಿ ಕಠಿಣ ಪರಿಶ್ರಮ ಮಾಡಿದ….

ಈಗ ಅವನು ವಯಸ್ಸು [20+10=] 30ಆಗಿತ್ತು!

“ಛೇ!!!.. ಈ ಲೋಕ ನಾನು ಮನಸ್ಸು ಮಾಡಿ, ಪರಿಶ್ರಮಿಸಿ, ಏನೂ ಸರಿ ಮಾಡಲು ಆಗಿಲ್ಲ. ನನ್ನಿಂದ ಇದು ಸಾಧ್ಯವಿಲ್ಲ ಯಾಕೆಂದರೆ, ಸರಿ ಇಲ್ಲದಿರುವುದು ನನ್ನ ದೇಶ, ಮೊದಲು ನನ್ನ
ದೇಶವನ್ನು ಸರಿ ದಾರಿಗೆ ತರಬೇಕು” ಎಂದು….ಸುಮಾರು ಹತ್ತು ವರುಷ ಅವನು ದೇಶೋದ್ದಾರಕ್ಕಾಗಿ ಕಠಿಣ ಪರಿಶ್ರಮ ಮಾಡಿದ.

ಈಗ ಅವನು ವಯಸ್ಸು [20+10+10=] 40ಆಗಿತ್ತು!

“ಛೇ!!!.. ಈ ದೇಶ ನಾನು ಮನಸ್ಸು ಮಾಡಿ, ಪರಿಶ್ರಮಿಸಿ, ಏನೂ ಸರಿ ಮಾಡಲು ಆಗಿಲ್ಲ. ನನ್ನಿಂದ ಇದು ಸಾಧ್ಯವಿಲ್ಲ ಯಾಕೆಂದರೆ, ಸರಿ ಇಲ್ಲದಿರುವುದು ನನ್ನ ರಾಜ್ಯ, ಮೊದಲು ನನ್ನ ರಾಜ್ಯವನ್ನು ಸರಿ ದಾರಿಗೆ ತರಬೇಕು” ಎಂದು. ಸುಮಾರು ಹತ್ತು ವರುಷ ಅವನು ರಾಜ್ಯೋದ್ದಾರಕ್ಕಾಗಿ ಕಠಿಣ ಪರಿಶ್ರಮ ಮಾಡಿದ….

ಈಗ ಅವನು ವಯಸ್ಸು [20+10+10+10=]50 ಆಗಿತ್ತು!!!

ಅಂದು ಅವನಿಗೆನಿಸಿತು “ರಾಜ್ಯವಲ್ಲ ಸರಿ ಇಲ್ಲದಿರುವುದು, ನನ್ನ ಜಿಲ್ಲೆ ಸರಿ ಇಲ್ಲ. , ಮೊದಲು ನನ್ನ ಜಿಲ್ಲೆಯನ್ನು ಸರಿಪಡಿಸಬೇಕು” ಎಂದು….
ಸುಮಾರು ಹತ್ತು ವರುಷ

ಅವನು ಜಿಲ್ಲೋದ್ದಾರಕ್ಕಾಗಿ ಕಠಿಣ ಪರಿಶ್ರಮ ಮಾಡಿದ….
ಈಗ ಅವನು ವಯಸ್ಸು [20+10+10+10+10=] 60ಆಗಿತ್ತು!!!!

“ಅಯ್ಯೋ ನಾನು ಜಿಲ್ಲೆಯನ್ನಲ್ಲ , ನನ್ನ ತಾಲೂಕು ಸರಿಪಡಿಸಬೇಕು” ಎಂದು…..
ಸುಮಾರು ಹತ್ತು ವರುಷ ಅವನು ತಾಲೂಕುದ್ದಾರಕ್ಕಾಗಿ ಕಠಿಣ ಪರಿಶ್ರಮ ಮಾಡಿದ….

ಈಗ ಅವನು ವಯಸ್ಸು [20+10+10+10+10+10=] 70ಆಗಿತ್ತು!!!!!

“ಅಯ್ಯಯ್ಯೋ ……ನಾನು ಮೊದಲು ನನ್ನ ಊರನ್ನು ಸರಿಪಡಿಸಬೇಕು, ತಾಲೂಕನಲ್ಲಾ”ಎಂದು….
ಸುಮಾರು ಹತ್ತು ವರುಷ ಅವನು ಊರುದ್ದಾರಕ್ಕಾಗಿ ಕಠಿಣ ಪರಿಶ್ರಮ ಮಾಡಿದ…. ಈಗ ಅವನು ವಯಸ್ಸು [20+10+10+10+10+10+10=] 80ಆಗಿತ್ತು!!!!!!
“ಛೇ..ಛೇ…ಸರಿ ಪಡಿಸಬೇಕಾದುದು ಗ್ರಾಮವನ್ನಾಗಿತ್ತು” ಎಂದು…..

ಸುಮಾರು ಐದು ವರುಷ
ಅವನು ಗ್ರಾಮೋದ್ದಾರಕ್ಕಾಗಿ ಕಠಿಣ ಪರಿಶ್ರಮ ಮಾಡಿದ….

ಈಗ ಅವನು ವಯಸ್ಸು [20+10+10+10+10+10+10+5=] 85 ಆಗಿತ್ತು!
“ಅಯ್ಯೋ ಏನ್ ಕೆಲ್ಸ ಮಾಡಿದೆ, ಸರಿಪಡಿಸಬೇಕಾದುದು ನನ್ನ ಮನೆ ತಾನೇ?” ಎಂದು

ಸುಮಾರು ಐದು ವರುಷ
ಅವನು ತನ್ನ ಮನೆಯ ಲೋಪ-ದೋಷ ನಿವಾರಣೆ ಮಾಡುತ್ತಿರುವಾಗ,

ಅವನ ವಯಸ್ಸು [20+10+10+10+10+10+10+5+5=] 90ಆಗಿತ್ತು!
“ಅಯ್ಯೋ ಎಷ್ಟು ಪೆದ್ದು ನಾನು…ನನ್ನೊಳಗೆ ಇಷ್ಟೋಂದು ಕೆಟ್ಟತನಗಳಿದ್ದು ಅದನ್ನು ಮೊದಲು ಸರಿ ಪಡಿಸಬೇಕು”
ಎಂದು ಸುಮಾರು ಎರಡು ವರುಷ ತನ್ನನ್ನು ಸರಿಯಾದ ಮಾನವನಾಗಿ , ಪರಿಶ್ರಮ ಪಡುತ್ತಿರುವಾಗ ಅವನು ಮಡಿದ !!!!!!!!!!!….

ಸಾಯುವಾಗ ಅವನ ವಯಸ್ಸು [20+10+10+10+10+10+10+5+5+2=] 92ಆಗಿತ್ತು!!!!!!!!!

******

ಮೊದಲು ಈ 92ರಲ್ಲಿ ಮಡಿದ ವ್ಯಕ್ತಿ,

ಕೊನೆಗೆ ಮಾಡಿದ ಕೆಲಸ ಆರಂಭದಲ್ಲಿ ಮಾಡಬೇಕಿತ್ತು!!!!! ಆದ್ದರಿಂದ ಮೊದಲು ನಮ್ಮನ್ನು ನಾವು ಸರಿಪಡಿಸಿ, ನಂತರ ಮುಂದುವರಿದು … ನಮ್ಮ ಮನೆಯಿಂದ-ಊರು,
ಊರಿಂದ-ಗ್ರಾಮ, ಗ್ರಾಮದಿಂದ-ತಾಲೂಕುದಿಂದ -ಲೋಕದ ಕಡೆ ಹೆಜ್ಜೆ ಇಡುವುದೇ ಸೂಕ್ತ.

ಅದಕ್ಕೆ ಹಿರಿಯರು ಹೇಳಿರುವುದು
“ತಾನು ಒಳ್ಳೆಯವನಾದರೆ
ಊರು ಒಳ್ಳೆಯದು”
ತುಂಬಾ ಜನಗಳು ಸೇರಿದರೆ ಅದು #ಸಮಾಜವಾದರೆ,

ತುಂಬಾ ಸ್ವಪ್ರಭುದ್ದ ಜನಗಳು ಸೇರಿದರೆ ಅದು ಆರೋಗ್ಯಕರ ಸಮಾಜವಾಗಬಹುದು.
ಏನಾದರೂ ಸರಿ….

ಆರೋಗ್ಯ ಸಮಾಜಕ್ಕಾಗಿ
ಮೂಡಲಿ ಮಂಗಳ
ಮತಿ ಮತಿಯಲ್ಲಿ.

ಸರ್ವೋದಯವಾಗಲಿ
ಸರ್ವರಲಿ.

ನಿಮ್ಮವ ನಲ್ಲ
*ರೂಪು*


  • ರೂಪೇಶ್ ಪುತ್ತೂರು – ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು, ಬೆಂಗಳೂರು, 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW