ಕೆಂಬೂತ, ಕೋಗಿಲೆ ಗಣಕ್ಕೆ ಸೇರಿದೆ. ಕೆಂಬೂತ ತನ್ನ ಕೂಗು, ವರ್ತನೆಗಳಿಂದ ಅನೇಕ ಸಂಸ್ಕೃತಿಗಳಲ್ಲಿ ಶಕುನ ಸೂಚಕ ಎಂದು ಪರಿಗಣಿಸಲಾಗಿದೆ.ಈ ಪಕ್ಷಿಯ ಕುರಿತು ರೇಖಾ ವಿ ಕಂಪ್ಲಿ ಅವರ ಒಂದು ಪುಟ್ಟ ಬರಹವನ್ನು ತಪ್ಪದೆ ಮುಂದೆ ಓದಿ…
ಇಂಗ್ಲೀಷ್ ನಲ್ಲಿ “Crow pheasant” ಎನ್ನುತ್ತಾರೆ. ಕನ್ನಡದಲ್ಲಿ ಕೆಂಬೂತ, ರತ್ನ ಪಕ್ಷಿ, ಉಪಶಕುನದ ಪಕ್ಷಿ, ಅದೃಷ್ಟ ಪಕ್ಷಿ, ಕಂಬಾರ/ಕುಂಬಾರ ಕಾಗೆ, ಕುಪುಲು ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ನಾವು ಯಾವುದಾದರೂ ಕಾರ್ಯಕ್ಕೆ ಹೊರಟಾಗ ಅಡ್ಡ ಅಥವಾ ಎದುರು ಬಂದರೆ ಹೋದ ಕೆಲಸಕ್ಕೆ ಶುಭವಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ಕೆಲವು ಸಲ ಸುಳ್ಳಲ್ಲ ಎನ್ನಿಸುತ್ತದೆ. ಬಯಲು ಸೀಮೆಯ ಬೇಲಿ ಇರುವ ಕಡೆ ಹೆಚ್ಚೆಚ್ಚಾಗಿ ಕಂಡು ಬರುತ್ತವೆ, ವಿಶೇಷವಾಗಿ ಯುಗಾದಿ ಹಬ್ಬದ ದಿನ ಇದನ್ನು ನೋಡಿದರೆ ಒಳಿತು, ಆ ದಿನ ನೋಡಲೆಬೇಕು ಎಂದು ಕೆಲವರು ಹುಡಿಕಿಕೊಂಡು ಈ ಪಕ್ಷಿಯನ್ನು ನೋಡಿ ನಮಸ್ಕರಿಸುತ್ತಾರೆ.

ಆದರೆ ಈ ಪಕ್ಷಿಯನ್ನು ಕೆಲವು ಆದಿವಾಸಿಗಳು ಹಿಡಿದು ಆಹಾರವಾಗಿ ತಿನ್ನುತ್ತಾರೆ. ಮತ್ತೆ ಅವರಿಗೇಕೆ ಅದೃಷ್ಟ ಪಕ್ಷಿ ಎಂದು ಎನ್ನಿಸಲಿಲ್ಲ ಎಂಬ ಪ್ರಶ್ನೆ ನನಗೆ, ಹಾಗೆ ಅವರಿಗೇಕೆ ಅದೃಷ್ಟ ಒಲಿದು ಶ್ರೀಮಂತರಾಗಲಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಇನ್ನೊಂದು ವಿಚಾರಕ್ಕೆ ಬರುವುದಾದರೆ ವಾಯು/ಮೂರ್ಛೆ ರೋಗಕ್ಕೆ (Epilepsy) ಇದು ರಾಮ ಬಾಣ ಎನ್ನುತ್ತಾರೆ.
ಆದರೆ ನಾನು ಒಂದು ವಿನಂತಿಯನ್ನು ಮಾಡುವೆ ನಿಮ್ಮಲ್ಲಿ ದಯವಿಟ್ಟು ಕಾಡು ನಾಶ ಮಾಡಿ ಇದರ ಸಂತತಿಯನ್ನು ನಶಿಸುವಂತೆ ಮಾಡಬೇಡಿ.
- ರೇಖಾ ವಿ ಕಂಪ್ಲಿ
