ಜೀರಿಗೆ ಮಹತ್ವ – ಸುಮನಾ ಮಳಲಗದ್ದೆ

ಜೀರಿಗೆ, ಕರಿಎಳ್ಳು, ಸಾಸಿವೆ ಇವುಗಳನ್ನು ಸಮಭಾಗ ಸೇರಿಸಿ ಪೇಸ್ಟ್ ಮಾಡಿ ಲೇಪಿಸಿದರೆ ಮುಖದ ಕಪ್ಪು ಕಲೆಗಳು ಗುಣವಾಗುತ್ತದೆ ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರ ಜೀರಿಗೆ ಮಹತ್ವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಜೀರಿಗೆ ಪ್ರತಿ ಅಡಿಗೆ ಮನೆಯಲ್ಲಿ ಇರಲೇಬೇಕಾದ ಸಾಂಬಾರು ಪದಾರ್ಥ ಜೀರಿಗೆ :

  •  ಜೀರಿಗೆ ಕಷಾಯವನ್ನು ಮಾಡಿ ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಜ್ವರದ ನಂತರದ ಅಶಕ್ತತೆ (ವಿಕ್ನೇಸ್)ಗುಣವಾಗುತ್ತದೆ.
  • ಎರಡು ಚಮಚದಷ್ಟು ಪುಡಿಯನ್ನು ಬೆಳಿಗ್ಗೆ ಹಾಗಲಕಾಯಿ ರಸದಲ್ಲಿ ಮತ್ತು ಸಂಜೆ ಕಬ್ಬಿನ ಬೆಲ್ಲದಲ್ಲಿ ಸೇವಿಸಿದರೆ ಶೀತ ಜ್ವರ ಎರಡೂ ಗುಣವಾಗುತ್ತದೆ.
  • ಊಟದ ನಂತರ ಸ್ವಲ್ಪ ಜೀರಿಗೆ ಪುಡಿ, ಕಾಳುಮೆಣಸು, ಸೈಂಧವ ಲವಣ ಸೇರಿಸಿ ಮಜ್ಜಿಗೆ ಹದಮಾಡಿ ಕುಡಿಯುವುದರಿಂದ ಮೂಲವ್ಯಾಧಿ ಮತ್ತು ಅತಿಸಾರ ಗುಣವಾಗುತ್ತದೆ.
  •  ಜೀರಿಗೆ, ಕರಿಎಳ್ಳು, ಸಾಸಿವೆ ಇವುಗಳನ್ನು ಸಮಭಾಗ ಸೇರಿಸಿ ಪೇಸ್ಟ್ ಮಾಡಿ ಲೇಪಿಸಿದರೆ ಮುಖದ ಕಪ್ಪು ಕಲೆಗಳು ಗುಣವಾಗುತ್ತದೆ.
  • ಜೀರಿಗೆ, ಸೈಂಧವ ಲವಣ ಸಮಪ್ರಮಾಣದಲ್ಲಿ ಸೇರಿಸಿ ನುಣ್ಣಗೆ ಅರೆದು ತುಪ್ಪವನ್ನು ಸೇರಿಸಿ ಬೆಚ್ಚಗೆ ಮಾಡಿ ಚೇಳು, ನಾಯಿ, ಸಾಲಿಂಗ, ಪಲ್ಲಿ, ಇಲಿ ಇವುಗಳ ಕಡಿತದಿಂದ ಆದ ಗಾಯಕ್ಕೆ ಹಚ್ಚಿದರೆ ನೋವು ನಿವಾರಕ ಮತ್ತು ವಿಷ ಏರುವುದಿಲ್ಲ.
  • ಜೀರಿಗೆ ಬೆಟ್ಟದ ನೆಲ್ಲಿಕಾಯಿ ಹತ್ತಿ ಎಲೆ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿ ತಲೆಗೆ ಪ್ಯಾಕ್ ಹಾಕಿದರೆ ಇರುಳುಗಣ್ಣು ಗುಣವಾಗುತ್ತದೆ.
  • ಜೀರಿಗೆ, ಏಲಕ್ಕಿ, ಪಟಿಗಾರದ ಅರಳು ಇವುಗಳನ್ನು ಚನ್ನಾಗಿ ಅರೆದು ನೀರಿನಲ್ಲಿ ಹಾಕಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.
  • ಗರ್ಭಿಣಿ ಸ್ತ್ರೀಯರು ಏಳು ತಿಂಗಳ ನಂತರ ಜೀರಿಗೆ ಕಷಾಯದಲ್ಲಿ ಹಾಲು ಸ್ವಲ್ಪ ಬೆಲ್ಲ ಸೇರಿಸಿ ಊಟದ ನಂತರ ಕುಡಿದರೆ ಗರ್ಭದ ನೀರು ಕಡಿಮೆ ಆಗುವುದಿಲ್ಲ ಮತ್ತು ಸುಲಭದ ಹೆರಿಗೆ ಆಗುತ್ತದೆ.
  • ಜೀರಿಗೆ ಪುಡಿ, ಹುಣಸೆ ಹಣ್ಣಿನ ರಸ, ಬೆಲ್ಲ ಸೇರಿಸಿ ಜ್ಯೂಸ್ ಮಾಡಿ ಕುಡಿದರೆ ಪಿತ್ತವಿಕಾರ (ವರ್ಟಿಗೊ)ಗುಣವಾಗುತ್ತದೆ.
  • ಜೀರಿಗೆ ಸ್ವಲ್ಪ ಹುರಿದು ಕಾಳುಮೆಣಸು, ಓಮಂಕಾಳು, ಸೈಂಧವ ಲವಣ, ಅಳಲೆಕಾಯಿ ಸೇರಿಸಿ ನೀರು ಅಥವಾ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ವಾತ ವಿಕಾರ ಗುಣವಾಗುತ್ತದೆ.
  • ಜೀರಿಗೆಯನ್ನು ದಿನವೂ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣ ಕ್ರಿಯೆ ಸರಿಯಾಗುತ್ತದೆ.
  • ಊಟದ ನಂತರ ಜೀರಿಗೆ ಜಗಿದು ತಿಂದರೆ ಬಾಯಿ ವಾಸನೆ ನಿವಾರಣೆ ಆಗಿ ಹಲ್ಲು ಗಟ್ಟಿಯಾಗುತ್ತದೆ.
  • ಜೀರಿಗೆ ಕಷಾಯ ಕುಡಿದು ಹೊಕ್ಕಳಿಗೆ ಆಕಳು ತುಪ್ಪವನ್ನು ಹಚ್ಚಿ ಮಸಾಜ್ ಮಾಡುವುದರಿಂದ ಅತಿಯಾದ ಕೆಮ್ಮು ಗುಣವಾಗುತ್ತದೆ. ಇದು ನನಗೆ ತಿಳಿದದ್ದು ಅಡಿಗೆ ಮನೆಯ ಜೀರಿಗೆ ಕರಾಮತ್ತು ಇನ್ನೂ ಎಷ್ಟೋ.

  • ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading