ಎಂದಾದರೊಂದೊಮ್ಮೆ ನೀ ಮರಳಬಹುದೆ

ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಜನ್ಮದಿನಕ್ಕೆ ಅವರ ರಚನೆಯ ಸುಂದರ ಕವನವನ್ನು ಪ್ರಕಟಿಸುವುದರ ಮೂಲಕ ಚನ್ನಕೇಶವ ಜಿ ಲಾಳನಕಟ್ಟೆ ಅವರಿಗೆ ಆಕೃತಿಕನ್ನಡ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತದೆ…

ಎಂದಾದರೊಂದೊಮ್ಮೆ ನೀ ಮರಳಬಹುದೆ
ಬೆಂದ ಮರುಭೂಮಿಯೊಳು ನೀರಾಡಬಹುದೆ
ಸಂಧಿಸಿದ ದಿನಗಳನು ನೀ ಮರೆಯಬಹುದೆ
ನೊಂದು ಬೆಂದಿಹ ಜೀವ ನೀನೊಲಿಯಬಹುದೆ?

ಜನುಮ ಜನುಮವನೆತ್ತಿ ಹಿಂಬರುವೆನೆಂದೆ
ತನುಮನವನರ್ಪಿಸುತ ಜೊತೆಗಿರುವೆನೆಂದೆ
ಕಣಕಣವು ನಿನ್ನೊಳಗೆ ಬೆರೆತಿರುವೆನೆಂದೆ
ಜನನವನೆ ಮಗಿಸುತಲಿ ನೀನೆಲ್ಲಿ ಹೋದೆ||

ನೀ ಬರೆದೆ ನನ್ನೊಳಗೆ ಭಾವನೆಗಳೊರತೆ
ನೀ ಬರುವ ಹಾದಿಯನು ಕಾಯುತಲಿ ಸೋತೆ
ನೀ ಬರದೆ ಬದುಕೀಗ ಚಿಂತೆಗಳ ಸಂತೆ
ನೀ ಬರದ ಲೋಕವಿದು ನನಗೇತಕಂತೆ||


  • ಚನ್ನಕೇಶವ ಜಿ ಲಾಳನಕಟ್ಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading