‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ಕುರಿತು ಡಾ. ಕೃಷ್ಣವೇಣಿ. ಆರ್. ಗೌಡ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಸಿನಿಮಾ : ಡೇರ್ ಡೆವಿಲ್ ಮುಸ್ತಫಾ
ಕತೆ : ಕೆ ಪಿ ಪೂರ್ಣ ಚಂದ್ರ ತೇಜಸ್ವಿ
ನಿರ್ದೇಶನ : ಶಶಾಂಕ್ ಸೂಗ
ಏಕೋ ಅರಿಯೇ ಬೇರು ಎನ್ನುವ ಇಬ್ಭಾಗದ ಗೋಡೆಗೆ ಒಡಕಿನೊಳು ತಡಕಾಡಿದೆ ಮನ : ಸರಕಾರಿ ಕಚೇರಿಯಲ್ಲಿ ಆಗುವ ಹರತಾಳಕೆ ತಲೆಯ ನರಗಳೆಲ್ಲ ಗಂಟು ಹಾಕಿ ಕೊಂಡಂತಾಗಿದೆ. ವಿಶ್ವ ಕಪ್ ಸೋತಾಗ ಆದ ಬೇಜಾರು ಮತ್ತೆ ಕಣ್ ಮುಂದೆ ಗೋಚರಿಸಿದಂತೆ ಆಯಿತು. ನಿನ್ನೆ ಎಲ್ಲಾ ಅಯೋಧ್ಯೆಯಲ್ಲಿ ನಡೆದ “ಪ್ರಾಣ ಪ್ರತಿಷ್ಠೆ ” ಭವ್ಯ ಬಾರತದ ಸೊಂತೋಷದ ಸಂತೆಗೆ ಎಣಿಕೆನೇ ಇರಲಿಲ್ಲ. ಸ್ಟೇಟಸ್ , ವಾಟ್ಸಪ್ಪ್ ನಲ್ಲಿ ಶ್ರೀರಾಮನ ಜಪ ತಪದ ಭಜನೆ ಅಲ್ಲದೆ ಸಂಜೆ ದೀಪದ ರಂಗೋಲಿ ಎಲ್ಲಾ ಮನೆಗಳಲ್ಲಿ ರಾಮನ ಆಗಮನ.

ಹೀಗೆ ಈ ದಿನ ಏನೋ ಅರಿವ ಪರಿ ನನ್ನ ಯುಟ್ಯೂಬ್ ಚಾನೆಲ್ ನತ್ತ ಸರಿಸುತ್ತಿದ್ದಂತೆ ಕಣ್ಣಿಗೆ ಬಿದ್ದ ಚಲನಶೀಲಯುಕ್ತ ಕೆ ಪಿ ಪೂರ್ಣ ಚಂದ್ರ ತೇಜಸ್ವಿಯವರ ಕಥೆ ಕಣ್ಣಿಗೆ ಬಿದ್ದು ಕೆಲಸ ಬದಿಗಿರಿಸಿ ಹಾಗೇ ಒರಗಿ ನೋಡುತ್ತಾ ಹೋದಂತೆ ಮನವನ್ನು ಕುಲುಕುತ್ತ ಎಬ್ಬಿಸಿತು. ಮನದಲ್ಲಿ ಇಂಟ್ರೆಸ್ಟ್ ಆಗಿ ಬಿಡದೇ ನೋಡಿದೆ. ನಿಜಕ್ಕೂ ಈ ಕಥೆ ಗೆ ರೂಪು ರೇಷೆ ಕೊಟ್ಟ ನಿರ್ದೇಶಕ ಶಶಾಂಕ್ ಸೂಗಲ್ ರವರಿಗೆ ಹಾಟ್ಸ್ ಆಫ್.

ಇದರಲ್ಲಿ ಪಾತ್ರಧಾರಿಗಳು ಎಲ್ಲಾ ರಂಗ ಕಲಾವಿದರು ಚಿತ್ರದ ಹೆಸರು “ಡೇರ್ ಡೆವಿಲ್ ಮುಸ್ತಫಾ ” ಮೇ 19, 2023 ರಲ್ಲಿ ತೆರೆಗೆ ಬಂದಿದೆ. ಎರಡು ತಾಸುಗಳ ಕಥೆಯಾದರೂ ಅಬಚೂರಿನ ಕಾಲೇಜಿನೊಂದಿಗೆ ಶುರುವಾಗುತ್ತೆ. ರಾಮಾನುಜಾ ಮತ್ತು ಮುಸ್ತಫಾ ಇವರಿಗೆ ಒಬ್ಬರನೊಬ್ಬರಿಗೆ ಕಂಡರೆ ಆಗುವುದಿಲ್ಲ. ಒಂದು ತಲೆಯ ಟೊಪ್ಪಿಗೆ ಮಹತ್ವದ ತಾತ್ಪರ್ಯವಿದೆ. ಇಬ್ಬರ ಗೆಳೆತನಕ್ಕೆ ಸಿಟ್ಟಿನ ಕೊಂಡಿಯಾಗಿ ಹೋಗಿರುತ್ತದೆ. ಕಾಲೇಜಿನ ಅಂಗಳದಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ಇಬ್ಬರು ಗೆಳೆಯರ ನಡುವಿನ ವೈಮನಸ್ಸನ್ನು ಸರಿ ಮಾಡುತ್ತದೆ. ಆ ಒಂದು ಕ್ರಿಕೆಟ್ ಮ್ಯಾಚ್ ಇಡೀ ಊರಿನ ಜನರನ್ನು, ಪ್ರಿನ್ಸಿಪಾಲ್ ಹಾಗೂ ಅಧ್ಯಾಪಕರ ಮನ ಗೆಲ್ಲುವುದನ್ನು ನೋಡುವಾಗ ಪ್ರೇಕ್ಷಕರ ಕಣ್ಣಲ್ಲಿ ಆನಂದ ಭಾಷ್ಪ ಹರಿಯುತ್ತದೆ.
ಹೌದು ರಾಜಕೀಯ ಷಡ್ಯಂತ್ರದ ಎಡಪಂಥೀಯ ಮತ್ತು ಬಲಪoಥೀಯ ಧೋರಣೆಗಳೊಡನೆ ಎಷ್ಟೋ ವಿಚಾರಗಳು ಹರಿಬೀಳುವ ಇಂತ ಕಲಿಯುಗದಲ್ಲಿ ಈ ಚಿತ್ರ ತುಂಬಾ ತುಂಬಾ ಇಷ್ಟವಾಯಿತು. ನನ್ನ ಕಾಲೇಜ್ ದಿನಗಳು ಮತ್ತೆ ಮರುಕಳಿಸಿತು. ಮುಸ್ತಫಾ ತನ್ನ ಭಾವನಿಗೆ ಚಿತ್ರದುರ್ಗಕ್ಕೆ ವರ್ಗವಾಗಿ ಕಾಲೇಜ್ ಬಿಟ್ಟು ಹೋಗುವಾಗ ಅವನ ಗೆಳೆಯರೆಲ್ಲ ಓಡಿ ಹೋಗಿ ನಿಲ್ಲಿಸಲು ಯತ್ನಿಸುವ ಸನ್ನಿವೇಶ ಇದೆಲ್ಲಾ ನೆನೆದಾಗ ರಾಜಕಾರಣದ ಗುಂಗಾಡಿ ಬೇಕೇ? ಎನ್ನುವ ಪ್ರಶ್ನೆ ನನ್ನಲ್ಲಿ ಮೂಡಿತು.

ಸಿನಿಮಾ ನೋಡಿ ಎದ್ದು ಬಂದು ಹೊರಗೆ ನೋಡುವೆ ಬಿಸಿಲಿನಲಿ ತಣ್ಣೀರು ಹುಯ್ಯಿಸಿಕೊಂಡಂತೆ ಮನೆ ಕಟ್ಟುವ ಗೋಡೆಗಳು ಸ್ತಬ್ದವಾಗಿ ನಿಂತಿವೆ. ಅದೇನೇ ಇರಲಿ ಮೊದಲು ಮಾನವ, ಆಮೇಲೆ ಸಂಬಂಧ ಎನ್ನುವ ಜಗತ್ತು ಮನುಷ್ಯನನ್ನು ಎಲ್ಲಿಂದ ಎಲ್ಲಿಗೋ ಯಾವುದೋ ದಾರಿಯತ್ತ ಸಾಗಿಸುತ್ತದೆಯಲ್ವಾ.
ಛಾಯಗ್ರಾಹಕರು, ನಿರ್ದೇಶಕರು, ಸಿನಿಮಾವನ್ನು ಬಹಳ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ… ರಸಿಕರ ಕಂಗಳ ಸೆಳೆಯುವ ನೋಟ… ಕುವೆಂಪು ನಾಡಿನ ಬಗ್ಗೆ ಸುಮ್ಮನೆ ತಿಳಿಸಿಲ್ಲ. ನಾವೆಲ್ಲ ಮೇಲಿನ ನಿರ್ದೇಶಕನ ಅಡಿಯಲ್ಲಿ ಈ ಲೋಕಕ್ಕೆ ಕಾಲಿಟ್ಟಿದ್ದೇವೆ. ಜಾತ್ಯತೀತವಾದಾಗ ಲೋಕವೆಲ್ಲಾ ಸುಂದರಮಯ ವಾಗಿ ಕಾಣುತ್ತದೆ ಅಲ್ಲವೇ?
- ಡಾ. ಕೃಷ್ಣವೇಣಿ. ಆರ್. ಗೌಡ
