‘ಛೇ… ದೇಶ ಸರಿ ಇಲ್ಲ ಕಣ್ರೀ’ ಕವನ

ಆದ್ರೂ ಈ ದೇಶ ಸರಿ ಇಲ್ಲ ಬಿಡ್ರಿ, ರಾಜಕಾರಣಿಗಳು ಎಲ್ಲಾ ಹಾಳು ಮಾಡಿದ್ರು…ಕವಿ ಮನಃ ತಪಸ್ವಿ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಶಾಲೆ ಪೀಸು ಹೆಚ್ಚಾಯ್ತು
ಎಲ್ಲಿಂದ ತರೋದು ದುಡ್ಡು?
ಲೋನ್ ಇಂಟ್ರಸ್ಟ್ ಜಾಸ್ತಿ ಆಗಿದೆ

ರೋಡ್ ಸರಿ ಇಲ್ಲ ಸಿಸ್ಟಮ್ ಸರಿ ಇಲ್ಲ
ಏನಾದ್ರೂ ತಗೋಳ್ಳೋಣ ಅಂದ್ರೆ
ಅದಕ್ಕಿಂತ ಟ್ಯಾಕ್ಸ್ ಜಾಸ್ತಿ ಆಗಿದೆ

ಮಕ್ಕಳ ಮದ್ವೆ ಮಾಡಣ ಅಂದ್ರೆ
ಗೋಲ್ಡ್ ರೇಟ್ ಕೈಗೆ ಗಿಟ್ಟಕಿಲ್ಲ
ಪೆನ್ಷನ್ ದುಡ್ಡು ಮನೆಗಾಯ್ತು

ಐಟಿ/ಬಿಟಿ ಯಿಂದ ಹಾಳಾಯ್ತು ಊರು
ಸರಿಯಾದ ವ್ಯವಸ್ಥೆ ಇಲ್ಲವಲ್ಲ ರೀ…
ರಾಜಕಾರಣಿಗಳು ಸರಿ ಇಲ್ಲ ಎಲ್ಲ ಅವ್ರದ್ದೇ

ನಂದು ಸರ್ಕಾರಿ ಜಾಬ್ ಚನ್ನಾಗಿದೆ ಕೆಲ್ಸ
ಪರ್ಮನೆಂಟು ಜಾಸ್ತಿ ಮಾಡೋದೇನಿಲ್ಲ
ಗಿಂಬಳ ಬೇರೆ ಸಿಗುತ್ತೆ – ನೋಡ್ಕೋಬೇಕು ಅಷ್ಟೆ

ಮಕ್ಳು ಓದಿದ್ದು ಕಾನ್ವೆಂಟು ಗೊತ್ತಾ?
ಜಾಬ್ ಈಗ ಗರ್ವನ್ಮೆಂಟ್ ನೋಡ್ತಿದಾರೆ
ಇಬ್ಬರಲ್ಲಿ ಒಬ್ಬರದ್ದಾದ್ರು ಸಾಕು, ನಡೆಯುತ್ತೆ

ಛೇ ಈ ಸರ್ಕಾರದ ವ್ಯವಸ್ಥೆ ಹೇಳ್ಬೇಡ್ರಿ
ಎಲ್ಲಾ ಕಡೆ ನಾಲಾಯಕರೇ ತುಂಬಿದಾರೆ
ನಾನ್ ಅಷ್ಟು ತಿಂದಿಲ್ಲಪ್ಪ ಸ್ವಲ್ಪ ಅಷ್ಟೆ

ಆದ್ರೂ ಈ ದೇಶ ಸರಿ ಇಲ್ಲ ಬಿಡ್ರಿ
ರಾಜಕಾರಣಿಗಳು ಎಲ್ಲಾ ಹಾಳು ಮಾಡಿದ್ರು
ಸಂಬಳ ನನಗೆ ಅವ್ರು ಹೇಳಿದ್ರೆ ನಾವು ಕೆಲ್ಸ ಮಾಡೋದು…

ಛೇ…. ಸರ್ಕಾರ ಕೆಲಸನೇ ಮಾಡಲ್ಲ
ಏನ್ಮಾಡೋದು…. ಈ ದೇಶ ?


  •  ಮನಃ ತಪಸ್ವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading