‘ದೇಶಭ್ರಷ್ಟರು’ ಕವನ – ಕು.ಸ.ಮಧುಸೂದನ್ ರಂಗೇನಹಳ್ಳಿ

ಕವಿ ಕು.ಸ.ಮಧುಸೂದನ್ ರಂಗೇನಹಳ್ಳಿ ಅವರು ಬರೆದಿರುವ ಕವನವು ಭ್ರಷ್ಟ ರಾಜಕಾರಣಕ್ಕೆ ಕೈಗನ್ನಡಿಯಂತಿದೆ.ತಪ್ಪದೆ ಓದಿ…

ಶತಮಾನಗಳ ಕಾಲ
ದೇಶಭ್ರಷ್ಟನಾಗಿದ್ದ ರಾಜ
ಮತ್ತೆ ಸಿಂಹಾಸನವೇರಿದ್ದಾನೆ

ಸುದೀರ್ಘ ನಿದ್ರೆಯಲ್ಲಿದ್ದವನ
ಕಾಲಾಳುಗಳು
ಎಚ್ಚರಗೊಂಡು ಭರ್ಜಿಗಳ
ಹುಡುಕಾಡಿ ಹಿಡಿದು ನಿಂತಿದ್ದಾರೆ.

ರಾಜನಿಗೆ ಕೇಳದಂತೆ
ಯಾವ ನಕ್ಷತ್ರಗಳೂ
ಮಿನುಗುವಂತಿಲ್ಲ

ಯಾವ ಹೂಗಳೂ
ಅರಳುವಂತಿಲ್ಲ

ಯಾವ ತಾಯಿಯೂ ಹಾಲುಣಿಸುವಂತಿಲ್ಲ
ಯಾವ ಮಕ್ಕಳೂ ಹಸಿದು ಅಳುವಂತಿಲ್ಲ
ರಾಜಾಜ್ಞೆಯಾಗಿದೆ!

ಹಾಗಾಗಿ ಈಗ
ನಕ್ಷತ್ರಗಳು ಮೋಡದೊಳಗೆ ಸೇರಿವೆ
ಹೂಗಳು ಮೊಗ್ಗಿನಲೇ ಬಾಡುತಿವೆ

ತಾಯಂದಿರು ಹೆರುವುದನೇ ನಿಲ್ಲಿಸಿದ್ದಾರೆ
ಹಸಿದ ಮಕ್ಕಳು ಅಳಲು ಹೆದರಿ
ಉಸಿರುಗಟ್ಟಿ ಸಾಯುತಿವೆ!


  • ಕು.ಸ.ಮಧುಸೂದನ್ ರಂಗೇನಹಳ್ಳಿ  (ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ರಂಗೇನಹಳ್ಳಿ ಎನ್ನುವ ಹಳ್ಳಿಯಲ್ಲ ನೆಲೆಸಿರುವ ಇವರು ‘ಸಂಗಾತಿ’ ಸಾಹಿತ್ಯದ ವೆಬ್ ಪತ್ರಿಕೆಯ ಸಂಸ್ಥಾಪಕರ, ಪ್ರಧಾನ ಸಂಪಾದಕರಾಗಿರುವ ಇವರು ಇದುವರೆಗು ನಾಲ್ಕು ಕವನ ಸಂಕಲನಗಳನ್ನು, ಎರಡು ಕಥಾ ಸಂಕಲನಗಳನ್ನು,ಎರಡು ರಾಜಕೀಯ ಬರಹಗಳ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ).

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading