ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಕಳಂಗಟ್ಟಳೆ ಗಿಡದಿಂದ ಆಗುವ ಉಪಯೋಗದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ…
ಮಲೆನಾಡಿನ ಮಳೆಗಾಲದ ಮತ್ತೊಂದು ಔಷಧಿಯುಕ್ತ ಆಹಾರ ಕಳಂಗಟ್ಟಳೆ, ಕಳಂಗಳ್ಳೆ, ಕಾಡು ಕಡಲೆ. ಹಳ್ಳಿಯ ರೈತರು ಬರಲು ಗಿಡ ಎಂದು ಕರೆಯುಲು ಕಾರಣ ಇದು ಬೆಳೆದ ನಂತರ ಕಡಿದು ಒಣಗಿಸಿ ಅಂಗಳದಲ್ಲಿ ಬಿದ್ದ ಒಣಗಿದ ಎಲೆ ಎತ್ತಿ ಹೊರಗೆ ಹಾಕಲು ಹೊಲದಲ್ಲಿ ಬೆಳೆದ ಕಾಳು ಕಡಿ ಭತ್ತ.
ಒಟ್ಟಾಗಿಸಿ ಸೇರಿಸಲು ಬಳಸುತ್ತಾರೆ.ಎಲ್ಲರಿಗೂ ರಸ್ತೆ ಬದಿಯಲ್ಲಿ ಚಿರಪರಿಚಿತ. ಇದರ ಪಂಚಾಂಗ ಎಂದರೆ ಎಲೆ, ಕಾಂಡ, ಹೂವು, ಕಾಯಿ, ಬೇರು ಎಲ್ಲವೂ ಮೆಡಿಸಿನ್ ಗೆ ಬರುತ್ತಾರೆ.
ತಂಬುಳಿ , ಸಾರು, ಸಾಂಬಾರು, ಚಟ್ಣಿ, ಜೀರಿಗೆ ಕಾಳುಮೆಣಸು ಹಾಕಿ ಕಷಾಯ ಮಾಡಿ ಆಹಾರವಾಗಿ ಬಳಸಬಹುದು. ಇದರ ಮೆಡಿಸಿನ್ ಗುಣ ಅಪಾರ. ಮೂತ್ರಪಿಂಡದ ಅನೇಕ ಕಾಯಿಲೆಗೆ ರಾಮಬಾಣ.
ಲಾಭಗಳು :
ಕೆಮ್ಮು, ಕಫ ನಿವಾರಕ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾಗ ಶಕ್ತಿ ವರ್ಧಕ, ವಾತರೋಗ ನಿವಾರಕ, ವೀರ್ಯ ವರ್ಧಕ, ಟಿಬಿ ಕಾಯಿಲೆ ಗುಣಪಡಿಸಲೂ ಸಾಮರ್ಥ್ಯ ಹೊಂದಿದೆ.ಈ ಗಿಡ ನೋಡಿದಾಗ ಅನ್ನಿಸದಿರದು ನೀನಾರಿಗಾದೆಯೋ ಏಲೆ ಮಾನವ.
- ಸುಮನಾ ಮಳಲಗದ್ದೆ