‘ದ್ವಾರ ಪಾಲಕ’ ಕವನ – ಸುನಿಲ್ ಎಸ್

‘ಮನೋ ಮಂದಿರ ಮುಟ್ಟಿದೆ, ನೋಡಿದೆ…ಆದರೆ’….ತಪ್ಪದೆ ಓದಿ ಕವಿ ಸುನಿಲ್ ಎಸ್ ಅವರ ಲೇಖನಿಯಲ್ಲಿ ಅರಳಿದ ಕವನ….

ಅವಳ
ಮನೋ ಮಂದಿರಕ್ಕೆ
ನಾನೆ
ಪೂಜಾರಿಯಾಗಬೇಕೆಂದು
ಹೊರಟೆ !

ಹೊರಗೆ ಕಾರಗತ್ತಲು
ನೀರವ ಮೌನ, ನಿಶಬ್ದ,
ಎದೆಯೊಳಗೆ
ಕದಡಿದ ತುಮುಲಗಳು
ಅಡಿಗಡಿಗೆ
ಅವಳ ಸೌಂದರ್ಯದ
ಸಾಂಕೇತಿಕ ಬಿಂಬ
ಪ್ರತಿಬಿಂಬಗಳು !

ಅವಳ ರೂಪ ಪ್ರತಿರೂಪಗಳ
ಹಪಾಹಪಿ !

ಭಾರವಾದ ಹೆಜ್ಜೆಗಳೊಂದಿಗೆ
ವೇಗದ ನಡಿಗೆ !

ಮತ್ತದೆ ಕಾಡು ಕತ್ತಲೆ
ಒಮ್ಮೊಮ್ಮೆ ಉತ್ಸಾಹ
ನಿರುತ್ಸಾಹ ಭೇಟಿಯಾದಂತೆ !

ಇನ್ನೇನು ಅವಳ ಮನೋ
ಮಂದಿರ ಮುಟ್ಟಿದೆ, ನೋಡಿದೆ,
ಅವಳು ಬೆಚ್ಚನೆ ಮಲಗಿದಳು.

ಅವಳ ಮನೋ ಮಂದಿರದ ದ್ವಾರ ಪಾಲಕ ಈಗಾಗಲೇ ನೇಮಕವಾಗಿದ್ದ….


  • ಸುನಿಲ್ ಎಸ್ – ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಕವಿಗಳು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW