ಸುವರ್ಣಗೆಡ್ಡೆ ಗಿಡದ ದಂಟಿನ ರುಚಿಕರವಾದ ಕಾಯಿ ಹುಳಿ ರೆಸಿಪಿ ಮಾಡುವ ವಿಧಾನವನ್ನು ಹೋಟೆಲ್ ಉದ್ಯಮಿ ಅರುಣ್ ಪ್ರಸಾದ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಬೇಕಾಗುವ ಸಾಮಗ್ರಿಗಳು:
- ಸುವರ್ಣಗೆಡ್ಡೆ ಕಾಂಡ
- ತೆಂಗಿನ ಕಾಯಿ – ಸ್ವಲ್ಪ
- ಹಸಿಮೆಣಸು – ಸ್ವಲ್ಪ
- ಜೀರಿಗೆ- ಸ್ವಲ್ಪ
- ಸಾಸಿವೆ – ಸ್ವಲ್ಪ
- ಇಂಗು – ಸ್ವಲ್ಪ
- ಕರಿಬೇವು
- ಮಜ್ಜಿಗೆ – ಸ್ವಲ್ಪ
- ಉಪ್ಪು – ಸ್ವಲ್ಪ
- ಹುಳಿ – ಸ್ವಲ್ಪ
ಮಾಡುವ ವಿಧಾನ : ಸುವರ್ಣಗೆಡ್ಡೆ ಗಿಡದ ಎಳೆ ಕಾಂಡ (ದಂಟು) ಕತ್ತರಿಸಿ ಅದರಲ್ಲಿನ ಮೇಲಿನ ಸಿಪ್ಪೆ ನಿವಾರಿಸಿ ತೊಳೆದು ಉಪ್ಪು, ಸ್ವಲ್ಪ ಹುಳಿ ಸೇರಿಸಿ ಬೇಯಿಸಿ ಬೆಂದ ನಂತರ ಬೇಯಿಸಿದ ನೀರು ತೆಗೆದು ಚೆಲ್ಲಿಬಿಡಿ.
ತೆಂಗಿನ ಕಾಯಿ, ಹಸಿಮೆಣಸು ಮತ್ತು ಜೀರಿಗೆ ನುಣ್ಣಗೆ ರುಬ್ಬಿ ಅದರ ಜೊತೆ ಸುವರ್ಣಗೆಡ್ಡೆ ದಂಟಿನ ಬೇಯಿಸಿದ ಹೊಳು, ಸ್ವಲ್ಪ ಬೆಲ್ಲ ಸೇರಿಸಿ ಕುದಿಸಿ (5 ನಿಮಿಷ) ಇಳಿಸಿದ ನಂತರ ಸ್ವಲ್ಪ ಮಜ್ಜಿಗೆ ಸೇರಿಸಿ, ಉಪ್ಪು ರುಚಿ ನೋಡಿ ನಂತರ ಸಾಸಿವೆ – ಇಂಗು – ಕರಿಬೇವು ಒಗ್ಗರಣೆ ನೀಡಿದರೆ ದಿಡೀರ್ ರುಚಿಕರ ಸುವರ್ಣಗೆಡ್ಡೆ ದಂಟಿನ ಕಾಯಿ ಹುಳಿ ರೆಡಿ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು
