ಮೇದರದೊಡ್ಡಿ ಹನುಮಂತ ಅವರ ‘ಫಕೀರನ ಪ್ರೇಮ ಗೀತೆಗಳು’ ಕೃತಿಯಲ್ಲಿ ಬರೆದಿರುವಂತಹ ಪ್ರೇಮಗೀತೆಗಳ ಕವನ ಸಂಕಲನವಾಗಿದ್ದು. ಇದು ಹನುಮಂತರವರ ಮೂರನೆಯ ಕೃತಿಯಾಗಿದೆ. ಅವರ ಈ ಕವನ ಸಂಕಲನದ ಕುರಿತು ನಾರಾಯಣಸ್ವಾಮಿ .ವಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಫಕೀರನ ಪ್ರೇಮ ಕವಿತೆಗಳು
ಲೇಖಕರು : ಮೇದರದೊಡ್ಡಿ ಹನುಮಂತ
ಪ್ರಕಾರ : ಕವನ ಸಂಕಲನ
ಕಾವ್ಯ ಗುಡಿಸಲಿನೊಳಗೆ ಹುಟ್ಟುತ್ತದೆ. ಗುಡಿಸಲಿನಲ್ಲಿ ಹುಟ್ಟಿದ ಕಾವ್ಯದಲ್ಲಿ ನೋವಿನ ಅರಿವಿದೆ, ಬಡತನದಲ್ಲಿ ನೊಂದ ಜೀವಗಳ ಕುರುಹುಗಳಿರುತ್ತವೆ. ಹೋರಾಟದ ಪ್ರತೀಕಗಳಿರುತ್ತವೆ. ಹಸಿವಿನಿಂದ ಸತ್ತು ಮಣ್ಣಾದ ದೇಹಗಳ ಮೂಳೆಗಳು ತನ್ನವರ ಇತಿಹಾಸವನ್ನು ಮತ್ತೆ ಮತ್ತೆ ನೆನಪಿಸಿ ಒಂದಷ್ಟು ಮನಸ್ಸುಗಳನ್ನು ಜಾಗೃತಿಗೊಳಿಸುವ ಸಾಲುಗಳು ಕಾವ್ಯವಾಗಿ ಹುಟ್ಟಿ ಹೊರಹೊಮ್ಮುತ್ತವೆ. ಬಡತನದಲ್ಲಿ ನೊಂದು ಬೆಂದು ಮನದೊಳಗಿನ ಅವೇದನೆಗಳನ್ನು ಹೊರಹಾಕುತ್ತಿರುವ ಕಾವ್ಯವೇ ಒಡಲಾಳದ ನೋವಿನ ಕಾವ್ಯ…
ಕನ್ನಡ ಸಾಹಿತ್ಯಲೋಕದಲ್ಲಿ ಹಲವಾರು ಜನ ಕವಿತೆ ಕಾವ್ಯವನ್ನು ಬರೆಯುತ್ತಿದ್ದು, ಇತ್ತೀಚಿನ ದಿನಮಾನಗಳಲ್ಲಿ ಜನರ ಮನಸ್ಸುಗಳನ್ನು ಒಂದಷ್ಟು ಜಾಗೃತಿಗೊಳಿಸುವ, ಸಮಾಜಕ್ಕೆ ಒಂದಷ್ಟು ಸಂದೇಶಗಳನ್ನು ಸಾರುತ್ತಾ, ಜಾತಿ ಧಮಾ೯ಂಧರನ್ನು ಬಯಲಿಗೆಳೆಯುತ್ತಾ, ಹೆಣ್ಣಿನ ಶೋಷಣೆಯನ್ನು ಖಂಡಿಸುತ್ತಾ, ಒಂದಷ್ಟು ಉತ್ಕೃಷ್ಟವಾದ ಕಾವ್ಯದ ರಚನೆಯಲ್ಲಿ ತೊಡಗಿರುವ ಪ್ರಬುದ್ದತೆಯ ಕವಿಯೇ ಮೇದರದೊಡ್ಡಿ ಹನುಮಂತ…
ಯಾರದೋ ಹೊಲದಲ್ಲಿ ಗೇಯುತ್ತಾ, ಮತ್ಯಾರದೋ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಲೆ ಬದುಕಿನ ಬಂಡಿಯನ್ನು ನೂಕುತ್ತಾ, ತನ್ನನ್ನು ಅವರಿಸಿರುವ ಬಡತನವನ್ನು ಶಪಿಸಿಕೊಳ್ಳದೇ, ಎದೆಯಲಿ ಭಾವನೆಗಳು ಉಕ್ಕಿ ಹರಿಯುತ್ತಿವೆ, ತನ್ನೊಳಗೂ ಒಬ್ಬ ಕವಿಯಿದ್ದಾನೆ ಕವಿತೆಯ ಮೂಲಕ ಕನ್ನಡ ಸಾಹಿತ್ಯದ ಬರಹದೊಳಗೆ ಶ್ರೀಮಂತನಾಗುವ ಕನಸುಗಳನ್ನು ಕಾಣುತ್ತಿರುವ ಹೃದಯವಂತ ಕವಿಯೇ ಕಾವ್ಯ ಜಂಗಮಯೆಂಬ ಕಾವ್ಯನಾಮದಿಂದ ಕವಿತೆ ವಚನಗಳನ್ನು ಬರೆಯುತ್ತಾ ಕನ್ನಡ ಕಾವ್ಯಲೋಕದಲ್ಲಿ ಚಿರಪರಿಚಿತರಾಗಿರುವ ಹೆಸರು ಮೇದರದೊಡ್ಡಿ ಹನುಮಂತ.
ನಾನು ಬೆಂಗಳೂರಿನ ಒಂದು ಕವಿಗೋಷ್ಠಿಯಲ್ಲಿ ಇವರು ಓದಿದ ಕವಿತೆಯಲ್ಲಿರುವ ತಾತ್ಪರ್ಯವನ್ನು ಕಂಡು ಮೂಕನಾಗಿ ಇವರನ್ನು ಪರಿಚಯ ಮಾಡಿಕೊಂಡೆ. ಅಂದು ಅವರು ನೀಡಿದ ಜಂಗಮನ ವಚನಾಮೃವೆಂಬ ಪುಸ್ತಕವನ್ನು ಓದಿ ನಾನು ಹನುಮಂತರವರ ಕಾವ್ಯದ ಅಭಿಮಾನಿಯಾದೆ. ನಮ್ಮೊಳಗೆ ಒಂದಷ್ಟು ಸ್ನೇಹವೂ ಕೂಡ ಬೆಳೆದಾಗ, ಅವರ ಜೊತೆಯಲ್ಲಿ ಮಾತನಾಡುವಾಗ ನನಗನಿಸಿದ್ದು ವಿದ್ಯಾವಂತರೆಂದು ಹೇಳಿಕೊಂಡು, ಶ್ರೀಮಂತರೆಂದು ಭಾವಿಸಿಕೊಂಡು ಸಾಗುತ್ತಿರುವ ನಾವು, ಇವರ ಹೃದಯ ಶ್ರೀಮಂತ ಮನಸ್ಸುಗಳ ಮುಂದೆ ನಾವುಗಳು ಕುಬ್ಜರಾಗುತ್ತಿದ್ದೇವೆ. ಕೂಲಿ ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರೂ ಎಷ್ಟೊಂದು ಲೋಕಜ್ಙಾನವನ್ನು ಪಡೆದಿದ್ದಾರೆ. ಎಷ್ಟೊಂದು ವಿಚಾರಧಾರೆಗಳನ್ನು ತಿಳಿದಿದ್ದಾರೆ. ನಯ ವಿನಯ ಪ್ರಜ್ಞಾವಂತಿಕೆಯಿದೆ. ಮೂರು ಉತ್ಕೃಷ್ಟವಾದ ಕೃತಿಗಳನ್ನು ಹೊರತಂದು ಹೆಸರು ಗಳಿಸಿದ್ದರೂ ನಾನು ಇನ್ನೂ ಕಲಿಯಬೇಕಿದೆ ಎಂದು ಹೇಳುವ ಇವರ ಮನಸ್ಥಿತಿಗೆ ನಾನು ಸಲಾಂ ಹೊಡೆಯಲೇಬೇಕು.
ಮೇದರದೊಡ್ಡಿ ಹನುಮಂತ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇದರಗೊಡ್ಡಿ ಗ್ರಾಮದವರು. ಪದವಿಯವರಗೆ ಓದಿರುವ ಇವರು ಕಾವ್ಯವನ್ನೆ ಆರಾಧಿಸುತ್ತಾ, ತನ್ನ ಸುತ್ತಣ ಸಮಾಜವನ್ನು ಕಾವ್ಯಪ್ರಪಂಚನ್ನಾಗಿ ಮಾಡಿಕೊಂಡು ಕನ್ನಡ ಕಾವ್ಯಲೋಕದಲ್ಲಿ ವಿಹರಿಸುತ್ತಿದ್ದಾರೆ. “ಸಾಂಬಾರದೊಳಗಣ ಸೌಟು” ಎಂಬ ಚೊಚ್ಚಲ ಕವನಸಂಕಲನವನ್ನು ಲೋಕಾರ್ಪಣೆ ಮಾಡಿ ಯಶಸ್ವಿಯಾದರು. 2022 ರಲ್ಲಿ ಜಂಗಮ ವಚನಾಮೃತ ಎಂಬ ಅಧುನಿಕ ವಚನಗಳ ಕೃತಿಯನ್ನು ಮತ್ತು “ಫಕೀರನ ಪ್ರೇಮಗೀತೆಗಳು ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿ ಜನ ಮನ್ನಣೆಯನ್ನು ಪಡೆದು ರಾಜ್ಯೋತ್ಸವ ಮತ್ತು ಕಾವ್ಯಶ್ರೀ ಪುರಸ್ಕಾರವನ್ನು ಪಡೆದಿದ್ದಾರೆ.

ಫಕೀರ ಎಂದರೆ ಎಲ್ಲಾ ಸಂಬಂಧಗಳನ್ನು ಸ್ವತ್ತುಗಳನ್ನು ತ್ಯಜಿಸಿ, ಬಡತನವನ್ನು ಪ್ರೀತಿಸುವ ಮತ್ತು ಪ್ರತಿಜ್ಞೆ ಮಾಡುವ ವಿರಾಗಿ.. ಪ್ರೇಮಿಯು ಪ್ರೀತಿಯನೇ ತನ್ನ ಉಸಿರಾಗಿಸಿಕೊಂಡು, ಪ್ರೀತಿಗಾಗಿಯೇ ಸಕಲವನ್ನು ಪರಿತ್ಯಾಗ ಮಾಡುವ ವಿರಾಗಿಯ ಸಾಲುಗಳು ಈ ಫಕೀರನ ಪ್ರೇಮಗೀತೆಗಳು….
ಈ ಕೃತಿಯು ಮೇದರದೊಡ್ಡಿ ಹನುಮಂತ ಬರೆದಿರುವಂತಹ ಪ್ರೇಮಗೀತೆಗಳ ಕವನಸಂಕಲನವಾಗಿದ್ದು. ಇದು ಹನುಮಂತರವರ ಮೂರನೆಯ ಕೃತಿಯಾಗಿದೆ. ಬರಿ ಪ್ರೇಮ, ವಿರಹ, ಶೃಂಗಾರಲೀಲೆಯ ರಸಕಾವ್ಯ ಈ ಕೃತಿಯ ಸಾಲುಗಳಲ್ಲಿ ಅಡಕವಾಗಿವೆ. ಸುಮಾರು ಎಪ್ಪತ್ತಾರು ಪ್ರೇಮ ಕವಿತೆಗಳಿರುವ ಈ ಕವನಸಂಕಲನಕ್ಕೆ ಡಾ. ಎಂ ಬೈರೇಗೌಡ ಇವರು ಸುಧೀರ್ಘವಾದ ಮುನ್ನುಡಿಯನ್ನು ಬರೆದು, ಮೊದಲು ಪಂಡಿತರ ಸ್ವತ್ತಾಗಿದ್ದ ಸಾಹಿತ್ಯ, ವಸಾಹತುಶಾಹಿ ಪ್ರಭುತ್ವ ನೀಡಿದ ಶಿಕ್ಷಣದಿಂದ, ನವೋದಯ ಸಾಹಿತ್ಯ, ಸಾಂಸ್ಕೃತಿಕ ಚಿಂತನೆಗಳು ರೂಪಗೊಂಡಿದ್ದು ಎಂದರೆ ತಪ್ಪಾಗಲಾರದು. ಕಾವ್ಯವೆಂದರೆ ಕಟ್ಟಿಕೊಂಡಿದ್ದ ಎಲ್ಲಾ ಸಂಕೋಲೆಗಳನ್ನು ತೆಗೆದೊಗೆದು ಮುಕ್ತವಾಗಿ ಬರೆಯಬಹುದಾದ ಸಾಧ್ಯತೆಗಳನ್ನು ತೆರೆದು ತೋರಿತೆನ್ನಬಹುದು. ಕವಿ ಹನುಮಂತು ಒಂದಷ್ಟು ಕಾವ್ಯದ ಗಮಲುಗಳನ್ನು ಸವಿಸಿದರೆ, ಪದ ಸಂಪತ್ತನ್ನು ಎದೆಗೆ ತುಂಬಿಕೊಂಡರೇ ವಿಷಯ ವೈಶಾಲ್ಯತೆಯ ಅರಿವಿನ ಕಡೆಗೆ ಸಾಗಿದರೆ ಮೇದರದೊಡ್ಧಿಯ ಕಾಡು ಹುಡುಗನಿಂದ ಮತ್ತಷ್ಟು ಕಾಡುವ ಕವಿತೆಗಳನ್ನು ನಿರೀಕ್ಷಿಸಬಹುದು..ಎಂದು ಹೇಳಿ ಶುಭ ಹಾರೈಸಿದ್ದಾರೆ.
ಫಕೀರನ ಪ್ರೇಮ ಕವಿತೆಗಳ ಕೃತಿಯ ಪುಟವನ್ನು ತೆರೆದಾಗ ಪ್ರೇಮ ಪ್ರೀತಿ ನಮ್ಮ ಮನಸ್ಸನ್ನು ಅವರಿಸಿಕೊಳ್ಳುತ್ತದೆ, ವಿರಹವೇದನೆಯೊಳಗೆ ಮನಸ್ಸು ಮೂಕವಾಗುತ್ತದೆ. ರಸಿಕತೆಯ ಶೃಂಗಾರವು ಮತ್ತೆ ನಮ್ಮನ್ನು ರಂಜಿಸುತ್ತಾ ಮತ್ತೊಂದು ಕವಿತೆಯ ಕಡೆಗೆ ಮನಸ್ಸನ್ನು ಸೆಳೆಯುತ್ತದೆ.
ಈ ಸಂಕಲನದ ಮೊದಲ ಕವಿತೆ “ಸಾಮ್ರಾಜ್ಯ” ಅದು ರಾಜರು ಆಳಿದ ಸಾಮ್ರಾಜ್ಯವಲ್ಲ ಪಳಿಯುಳಿಕೆಯಲ್ಲ, ಪ್ರೇಮಿಯೊಬ್ಬ ತನ್ನೆದೆಯೊಳಗೆ ಕಟ್ಟಿಕೊಂಡ ಪ್ರಿಯತಮೆಗಾಗಿಯೇ ಕಟ್ಟಿಕೊಂಡ ಒಂದು ಸಾಮ್ರಾಜ್ಯ. ಇಲ್ಲಿ ಪ್ರೇಮಿ ತನ್ನ ಪ್ರಿಯತಮೆಗೆ ಹೇಳುತ್ತಾ ಸಾಗುತ್ತಾನೆ. ನನ್ನೆದೆಯೊಳಗೆ ನಿನಗಾಗಿ ಒಂದು ವಿಶಾಲವಾದ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದೇನೆ. ನನ್ನ ಪ್ರೇಮ ಸಾಮ್ರಾಜ್ಯದ ರಾಜಬೀದಿಗಳಲ್ಲಿ ಪ್ರೇಮದ ಬಾವುಟವನ್ನು ಹಾರಿಸುತ್ತಾ, ನೀನು ಬರುವ ದಾರಿಯನ್ನು ಕಾಯುತ್ತಿದ್ದೇನೆ. ನನ್ನ ಈ ಪ್ರೇಮ ಸಾಮ್ರಾಜ್ಯದ ಪಟ್ಟದರಿಸಿಯು ನೀನಾಗು, ನಿನ್ನನ್ನು ಹೊತ್ತು ಇಡೀ ಪಟ್ಟಣವನ್ನು ಸುತ್ತಿಸುವೆ ಫಕೀರನಾಗಿ, ಈ ಅಂತ:ಪುರದಲ್ಲಿ ನೀನು ದೇವತೆಯಂತೆ ನೆಲೆಸಿಬಿಡು ನಿನ್ನನ್ನು ಪ್ರತಿಕ್ಷಣ ಪೂಜಿಸುವ ಪ್ರೇಮ ಪೂಜಾರಿ ನಾನು ಆಗುತ್ತೇನೆ. ಯಾವುದೇ ಮದ್ದು ಗುಂಡುಗಳಿಗೆ ಹೆದರದ ಈ ನನ್ನೆದೆಯು ನಿನ್ನ ನೆನಪಿನಲ್ಲಿ ಕಳೆಯುತ್ತಿದೆ. ಬಂದು ಸೇರು ನನ್ನನ್ನು, ನೀನು ಬರುವ ಹಾದಿಗೆ ಹೆಜ್ಜೆ ಹೆಜ್ಜೆಗೂ ಗುಲಾಬಿಯ ಹೂಗಳನ್ನು ಚೆಲ್ಲುತ್ತೇನೆ ನಿನ್ನ ಗುಲಾಮನಂತೆ ಎಂದು ಪ್ರೇಮದ ಹೊನಲನ್ನು ಈ ಕವಿತೆಯೊಳಗೆ ಹರಿಸಿದ್ದಾರೆ ಕವಿಗಳು.
ಜೀವಾಮೃತ ಶೀರ್ಷಿಕೆಯಲ್ಲಿ ಬರೆದ ಈ ಕವಿತೆ ಈ ಕವನಸಂಕಲನದಲ್ಲಿ ವಿಶೇಷವಾಗಿ ಕಾಣುತ್ತದೆ. ವಿರಹದಿಂದ ನೊಂದ ಪ್ರೇಮಿ ಕೊನೆಗೆ ತನ್ನ ನೋವನ್ನು ಶಮನ ಮಾಡಿಕೊಳ್ಳಲು ಅಯ್ದುಕೊಳ್ಳುವುದೇ ಸುರಪಾನವನ್ನು ಅದು ನಶೆಯೇರಿಸುವ ಒಂದಷ್ಟು ಕ್ಷಣಗಳಾದರೂ ನೋವು ಮರೆಯಬಹುದು ಎಂದು ಮತ್ತಿನ ಪಾನಿಯವೇ ಈ ಮದ್ಯಪಾನ. ಈ ವಿಷಯದ ಬಗ್ಗೆ ಕವಿಗಳು ಬಹಳಷ್ಟು ಮಾಮಿ೯ಕವಾದ ಅಥ೯ದಲ್ಲಿ ಹೇಳುತ್ತಾ ಹೋಗುತ್ತಾರೆ. ” ಭಗ್ನಗೊಂಡ ಹಾಟಿ೯ಗೆ ಎಣ್ಣೆಯೊಂದೆ ಟಾನಿಕ್” ಎಂದು ಹೇಳುತ್ತಾ ರಿಕಿಕ್ಕು ಮಾಡುವ ಸುಂದರಿಗಿಂತ ನಶೆಯೆರಿಸುವ ಕ್ವಾಟರ್ ನೀನು ಎಷ್ಟು ಸೂಪರ್. ನೀನು ನನ್ನ ದೇಹವನ್ನು ಸೇರುತ್ತಿದ್ದಂತೆಯೇ, ನನ್ನೆದೆಯೊಳಗಿನ ನೋವುಗಳೆಲ್ಲಾ ಒಂದು ಕ್ಷಣ ಮಾಯವಾಗಿ ಬಿಡುತ್ತವೆ. ನೀನು ಬರೀ ಎಣ್ಣೆಯಲ್ಲ ಮಾಯಾವಿ ನನ್ನ ಬದುಕಿಗೆ. ಜೀವನದಲ್ಲಿ ಜಿಗುಪ್ಸೆಯಾದ ಜೀವ ಇನ್ನೊಬ್ಬರ ಕೈಗೊಂಬೆಯಾದರೂ ನಿನ್ನ ಅಮಲಿನೊಳಗೆ ಸಲಹುತಿರುವ ನೀನೇ ನನ್ನ ಸಂಗಾತಿ… ಪ್ರೀತಿಯ ಜೀವ ಕೈಕೊಟ್ಟು ಹೋದಾಗ ಕೈಯಿಡಿದ ನೀನು ನನ್ನಂತಹ ಎಷ್ಟೋ ನತದೃಷ್ಟ ಮನಸ್ಸುಗಳನ್ನು ಹಗುರವಾಗಿಸುವ ನೀನು ಸವ೯ರಿಗೂ ನೀನು ನಮ್ಮೆಲ್ಲರ ಬಾಳಿಗೆ ಜೀವಾಮೃತ ಎಂದು ಮದ್ಯದ ಬಗ್ಗೆ ಸೊಗಸಾದ ಕವಿತೆಯನ್ನು ಬರೆದಿದ್ದಾರೆ.
ಪಾರು ಇಲ್ಲದ ಪರಪಂಚ ಶೀರ್ಷಿಕೆಯ ಕವಿತೆಯಲ್ಲಿ ತನ್ನ ಪ್ರಿಯತಮೆಗಾಗಿ ದೇವದಾಸ ಹೆಂಡದ ದಾಸನಾಗಿ ಪ್ರತಿಕ್ಷಣವೂ ಪಾರುಳನ್ನ ನೆನೆಯುತ್ತಾ, ಅವಳಿಗಾಗಿ ಹಾಡುತ್ತಾ, ತನ್ನ ಪ್ರೇಮದ ದುರಂತ ಕಥೆಯನ್ನು ಹೇಳುತ್ತಾನೆ ಎಂಬ ಕಲ್ಪನೆಯಲ್ಲಿ ಕವಿಗಳು ಈ ಕವಿತೆಯಲ್ಲಿ ಬರೆದಿದ್ದಾರೆ. ಮುಖದೊಳಗೆ ದಾಡಿಯನ್ನು ಬೆಳಸಿಕೊಂಡು ಮನಸ್ಸಿನ ದಾರಿ ತಪ್ಪಿಸಿದಂತಹ ದೇವದಾಸನಿಗೆ ಅವಳ ಪ್ರಿಯತಮೆಯೇ ಒಂದು ಪ್ರಪಂಚ. ಅವನಿಗೆ ಯಾವುದೇ ಪರಮಾತ್ಮನು ಬೇಕಾಗಿಲ್ಲ. ಬಹಳಷ್ಟು ಕುಡಿದು ನಶೆಯೇರಿರುವಾಗ ಸೆಂದೀ ಬಾಟಲೊಳಗೆ ಅವಳ ಮುದ್ದು ಮುಖವೇ ಕಾಣುತ್ತದೆ. ಅವಳ ಪ್ರೀತಿ, ಅವಳೊಂದಿಗೆ ಕೆಳೆದ ನೆನಪುಗಳು ಕನಸುಗಳನ್ನು ಮೂಟೆಯೊತ್ತು ತಿರುಗುತ್ತಿರುವ ನನ್ನನ್ನು ಹುಚ್ಚನೆಂದು ನೀವು ಕರೆಯಬಹುದು. ಅದರೆ ಸದಾ ನಿಶೆಯಲ್ಲಿ ತೇಲಾಡುತ್ತಾ ನನ್ನ ಮನಸ್ಸನ್ನು ಹಗುರವಾಗಿಸಿಕೊಳ್ಳಲು ಹದವಾಗುತ್ತಿದ್ದೇನೆ. ಎಂದು ಈ ಕವಿತೆಯನ್ನು ರಚಿಸಿದ್ದಾರೆ ಕವಿಗಳು.
ತಾರುಣ್ಯದ ತಾರೆ ಕವಿತೆಯಲ್ಲಿ ಪ್ರಿಯತಮ ತಮ್ಮ ಪ್ರೇಮಿಯ ಮುಂದೆ ಭಿನ್ನಹಿಸಿಕೊಳ್ಳುತ್ತಿದ್ದಾನೆ. ನಿನ್ನ ಹುಚ್ಚು ನೆನಪಿನಲ್ಲಿ ನಾನು ಕೊಚ್ಚಿ ಹೋಗುವ ಮುನ್ನ ಮೆಚ್ಚಿ ಬಿಡು ಗೆಳತಿ ಅಂದರೆ ನಿನ್ನ ಪ್ರೀತಿಸಿದ ನಾನು ನಿನ್ನ ನೆನಪುಗಳಲ್ಲೆ ಸತ್ತು ಹೋಗುವೆನೇನೋ ಅನಿಸುತ್ತದೆ ನನಗೆ, ನಾನು ಸತ್ತು ಹೋಗುವ ಮೊದಲು ನನ್ನನ್ನು ಒಮ್ಮೆ ಮೆಚ್ಚಿಕೊಂಡು ಬಿಡು…ನನ್ನ ಮನದೊಳಗೆ ನಿನ್ನನ್ನೆ ದೇವತೆಯನ್ನಾಗಿ ಪೂಜಿಸುತ್ತಿರುವ ಈ ಪ್ರೇಮ ಪೂಜಾರಿಗೆ ಒಮ್ಮೆಯಾದರೂ ನಿನ್ನ ದರುಶನವನ್ನು ನೀಡು ಗೆಳತಿ… ನೀನು ನನಗೆ ದಶ೯ನವನ್ನು ನೀಡಿದೆಯಾದರೆ, ನೀನು ನನ್ನ ಜೊತೆಯಾಗಿ ಬಂದರೆ ಹೆಜ್ಜೆ ಹೆಜ್ಜೆಗೂ ನಿನಗೆ ಅಂಗರಕ್ಷಕನಾಗಿ ಕಾಯುತ್ತೇನೆ. ನನ್ನ ಬದುಕಿನಲ್ಲಿ ಕತ್ತಲು ಕವಿಯುವ ಮುನ್ನ ಆಗಸದಲ್ಲಿ ಬೆಳಗುವ ಚುಕ್ಕಿಯಂತೆ ಬೆಳಗಿಬಿಡು ಗೆಳತಿ ಎಂದು ಸುಂದರ ರಚನೆಯಲ್ಲಿ ಪ್ರೀತಿಯು ತುಳುಕಾಡುತಿದೆ.
ಈ ಫಕೀರನ ಪ್ರೇಮಗೀತೆಗಳು ಕವಿತೆಯಲ್ಲಿ “ಹೆಣ್ಣು ಕೊಡುತ್ತಿಲ್ಲ” ಒಂದು ವಿಶಿಷ್ಟವಾದ ರೀತಿಯಲ್ಲಿ ರಚನೆಯಾಗಿದೆ. ಈ ಕವನದ ತಾತ್ಪರ್ಯ ಇಂದಿನ ಅಧುನಿಕ ಯುಗದಲ್ಲಿ ಇಡೀ ಮನುಕುಲಕ್ಕೆ ಅನ್ನವನ್ನು ನೀಡುತ್ತಿರುವ, ಈ ದೇಶದ ಬೆನ್ನೆಲುಬು ಆಗಿರುವ ರೈತನಿಗೆ ಹೆಣ್ಣು ಕೊಡುತ್ತಿಲ್ಲ. ಒಂದು ಮದುವೆಯಾಗಲು ಪಡುವ ಕಷ್ಟಗಳನ್ನು ಕವಿಯು ಬಹಳಷ್ಟು ನೋವಿನಿಂದ ಬರೆಯುತ್ತಾರೆ.. ಒಂದು ಹೆಣ್ಣನ್ನು ಮದುವೆಯಾಗಲು ಊರೂರು ಅಲೆದೆ, ಪೇಟೆ ಕೋಟೆಗಳನ್ನು ಸುತ್ತುತ್ತಾ ಕಂಡ ಕಂಡವರನ್ನು ವಿಚಾರಿಸಿದೆ. ಯಾರು ಕೂಡ ನನಗೆ ಹೆಣ್ಣನ್ನು ಕೊಡುತ್ತಿಲ್ಲ. ರೂಪವಿದೆ,ಹಣವಿದೆ, ಧೃಢಕಾಯ ಶರೀರವಿದೆ. ಒಳ್ಳೆಯ ಮನಸ್ಸು ಇದೆ, ಮನೆಯೆಯೂ ಇದೆ. ಬಹಳಷ್ಟು ಜಮೀನು ಕೂಡ ಇದೆ. ಮದುವೆಯಾಗಲು ಒಬ್ಬ ಗಂಡಸಿಗೆ ಇರುವಷ್ಟು ಎಲ್ಲಾ ಆಹ೯ತೆಗಳು ಇದ್ದರು ಯಾರು ಕೂಡ ಹೆಣ್ಣು ಕೊಡುತ್ತಿಲ್ಲ. ನನ್ನ ದೇಹದೊಳಗೆ ಯಾವುದೇ ವಿಧವಾದ ರೋಗಗಳಿಲ್ಲ, ಜಾತಕದೊಳಗೆ ಯಾವುದೇ ವಿಧವಾದ ದೋಷಗಳು ಕೂಡ ಇಲ್ಲ. ಸಾಲವಂತು ಇಲ್ಲವೇ ಇಲ್ಲ. ಯಾವುದೇ ಚಟಕ್ಕೂ ನಾನು ಅಂಟಿಕೊಂಡಿಲ್ಲ, ಹೆತ್ತವರಿಗೆ ಬಂಧು ಬಳಗದವರಿಗೆ ನನ್ನ ಮದುವೆಯನ್ನು ನೋಡುವ ಅಸೆಯು ಕೂಡ ತೀರುತಿಲ್ಲ. ಈ ಲೋಕಕ್ಕೆ ಬೆನ್ನೆಲುಬು ರೈತ, ಅನ್ನದಾತನೆಂದು ಹೊಗಳುವ ಈ ಜನ ರೈತನಿಗೆ ಮಾತ್ರ ಹೆಣ್ಣು ಕೊಡಲು ಒಪ್ಪುತ್ತಿಲ್ಲವೆಂದು ರೈತನ ಮದುವೆಯ ವಿಷಯದ ಬಗ್ಗೆ ಈ ಕವಿತೆಯನ್ನು ಬರೆದಿದ್ದಾರೆ.
ನನ್ನ ಸ್ಟೇಟಸ್ ಕವನ ಶೀರ್ಷಿಕೆಯಲ್ಲಿ ಇಂದು ಮಾಯಜಾಲವಾಗಿ ಮನುಷ್ಯರನ್ನು ಆಕ೯ಷಿಸಿರುವ ಮೊಬೈಲ್ ನ ವಾಟ್ಸಪ್ ನ ಸ್ಟೇಟಸ್ ನಾವು ಹಾಕಿಕೊಳ್ಳುವ ಸ್ಟೇಟಸ್ ಬಗ್ಗೆ ಮಾಮಿ೯ಕವಾದ ಅಥ೯ದಲ್ಲಿ ಕವಿತೆಯನ್ನು ಬರೆದಿದ್ದಾರೆ. ನನ್ನ ನೋವುಗಳನ್ನು ಬಿಡಿಸಿ ಹೇಳಿ ಅವಳ ಬಗ್ಗೆ ಪ್ರೀತಿಯ ಬಗ್ಗೆ ಕವಿತೆಯನ್ನು ಬರೆದು ಅವಳ ಮುಂದೆ ಓದಿದೆ. ನನ್ನ ನೋವುಗಳು ನನ್ನ ಕವಿತೆಯಿಂದ ಅವಳು ಕರಗಬಹುದೆಂದು ಬಯಸಲಿಲ್ಲ. ಇವುಗಳಿಂದ ಅವಳು ನನ್ನ ಅಥ೯ಮಾಡಿಕೊಳ್ಳುವಳೆಂದು ಇಷ್ಟೆಲ್ಲಾ ಮಾಡಿದೆ ಅವಳಿಗೆ ಅಥ೯ವಾಗಲಿಲ್ಲ. ಇನ್ನು ನಾನು ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕುವ ಮೂವತ್ತು ಸೆಕೆಂಡ್ ಸ್ಟೇಟಸ್ ನಲ್ಲಿ ಎನು ಅಥ೯ ಮಾಡಿಕೊಳ್ಳುತ್ತಾಳೆ. ಕುಡಿತಕ್ಕೆ ದಾಸನಾಗಿ ಬರಗೆಟ್ಟು ಹೋಗಿದ್ದ ಕುಡುಕನಿಗೆ ಕನಿಷ್ಠ ಥಟಿ೯ ಮಿಲಿ ಎಣ್ಣೆ ಸಿಕ್ಕಿದರೂ ಸಾಕು ಅವನು ಸಂತೋಷ ಪಡುವಂತೆ. ನಾನು ಹಾಕುವ ಮೂವತ್ತು ಸೆಕೆಂಡ್ ನ ಸ್ಟೇಟಸ್ ಆದರೂ ಅವಳನ್ನು ಬದಲಾಯಿಸಲಿ ಎಂಬ ಆಶಾವಾದವನ್ನು ಈ ಕವಿತೆಯಲ್ಲಿ ವ್ಯಕ್ತಪಡಿಸುತ್ತಾರೆ.
ಪ್ರೇಮಿಗಳು ಹೊಸದಾಗಿ ಪರಿಚಯವಾದಾಗ ಪ್ರೀತಿ ಮೂಡಿದಾಗ ನೀನು ನನಗಾಗಿ ನಾನು ನಿನಗಾಗಿ ಅಂತ ಬಹಳಷ್ಟು ಆಣೆ ಪ್ರಮಾಣಗಳನ್ನು ಮಾಡುತ್ತಾರೆ ಇದು ಅಪ್ಪಟ ಸುಳ್ಳು. ಆ ಸಮಯಕ್ಕೆ ಕ್ಷಣಕ್ಕೊಂದು ಸುಳ್ಳು ಹೆಣೆದು ಸುಳ್ಳುಗಳ ಸರಮಾಲೆಯನ್ನು ಧರಿಸುವುದು ಕ್ಷಣಿಕವಾದ ಸುಖಕ್ಕಾಗಿ ಮಾತ್ರ. ಸುಖವೆನ್ನುವುದೇ ಸುಳ್ಳು. ಗೀಚಿದ ಕವಿತೆಯು ಅದು ನಿನ್ನನ್ನು ಹೊಗಳಲು ಅಷ್ಟೇ ನಾನು ಕವಿಯೆಂಬುದೇ ಸುಳ್ಳು. ನಿನ್ನನ್ನು ಹೊಗಳಲು ಬರೆದ ಕವಿತೆಯನ್ನು ನೀನು ನಿಜ ಎಂದು ಭಾವಿಸಬಹುದು ಅಷ್ಟೇ. ಮೇಲಿನ ಮಹಾಕವಿ ಅಂದರೆ ದೇವರೆದರು ನಾನು ಗೆಲ್ಲುತ್ತೇನೆ ಎಂಬುದು ಶಾಶ್ವತವಾದ ಸುಳ್ಳುಯೆಂದು ಅಪ್ಪಟ ಸುಳ್ಳು ಶೀರ್ಷಿಕೆಯ ಕವನದಲ್ಲಿ ಕವಿಗಳು ಹೇಳುತ್ತಾರೆ.
ಹೇಳಿ ಬಿಡು ಒಮ್ಮೆ ಶೀರ್ಷಿಕೆಯ ಕವನದಲ್ಲಿ ಪ್ರೀತಿದ ಪ್ರಿಯತಮೆ ಪ್ರಿಯನ್ನು ಬಿಟ್ಟು ಹೊರಟು ಬಿಡುತ್ತಾಳೆ ಆಗ ಆ ಪ್ರೇಮಿ ನೊಂದು ಹೇಳುತ್ತಾನೆ. ನಿನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರೆನೆಂದು, ನಿನ್ನನ್ನು ಒಂದು ಘಳಿಗೆಯು ಆಗಲಿರಲಾರೆಂದು ಹೇಳುತ್ತಿದ್ದವಳು ನನ್ನನ್ನು ಬಿಟ್ಟು ಎಲ್ಲಿಗೋ ಹೊರಟು ಹೋದಳು ನೀನು ಕನ್ಯೆಯೋ ವಿಷಕಾರುವ ಕನ್ಯೆಯೋ ಎಂದು ಕವಿ ಪ್ರಶ್ನಿಸುತ್ತಾ ಮಾತಿನಲ್ಲಿಯೇ ನನ್ನ ಮನಸ್ಸಿಗೆ ಮತ್ತನು ಎರಿಸಿ, ನಗುತ್ತಲೆ ಮನವನ್ನು ಸೆಳೆದು, ನಿನ್ನ ಬದುಕಿಗೆ ಬಾಳ ಸಂಗಾತಿಯಾಗಿ ಬರುತ್ತೇನೆಂದು ಹುರಿದುಂಬಿಸಿ ನನ್ನನ್ನು ಎದೆಯೊಳಗೆ ಕಿಚ್ಚು ಹತ್ತಿಸಿ, ಅದಕ್ಕೆ ಮತ್ತಷ್ಟು ಉರಿಯಲು ತುಪ್ಪವನ್ನು ಸುರಿದು ಕಾಣದೇ ಮರೆಯಾಗಿ ಹೋದೆಯಲ್ಲಾ ನೀನು ಕನ್ಯೆಯೋ ವಿಷ ಕನ್ಯೆಯೋ ಎಂದು ಪ್ರೀತಿಸಿ ಮೋಸ ಮಾಡುವ ಹೆಣ್ಣನ್ನು ಪದಗಳ ಮೂಲಕ ಜರಿಯುತ್ತಾರೆ ಕವಿಗಳು.
ಪ್ರೀತಿ ಈಗ ಜಗದೊಳಗೆ ಭೂಮಿಯ ಮೇಲೆ ಶಾಶ್ವತವಾಗಿ ಉಳಿದಿದೆ. ಪ್ರೀತಿಯನ್ನು ಉಸಿರಾಗಿಸಿಕೊಂಡ ಪ್ರೇಮಿಗಳು ತನ್ನ ಜೀವವನ್ನೆ ಪ್ರೀತಿಗಾಗಿ ಅಪಿ೯ಸಿದ್ದಾರೆ. ಯುಗಗಳು ಬದಲಾದರೂ ಜಗವೇ ಬದಲಾದರೂ ಕೂಡ ಈ ಪ್ರೀತಿ ಬದಲಾಗುವುದಿಲ್ಲ. ಈ ಭೂಮಿ ಬಾಯ್ತೆರೆದರೂ ಆಕಾಶವೇ ಮೇಲೆ ಬಿದ್ದರೂ ಕೂಡ ಈ ಪ್ರೀತಿ ಮಾತ್ರ ಬರಿದಾಗುವುದಿಲ್ಲ. ಈ ಹೃದಯ ಗುಂಡೇಟಿಗೆ ಬಲಿಯಾದರೂ ಸಾಯುವುದಿಲ್ಲ ನನ್ನೆದೆಯೊಳಗಿನ ಪ್ರೀತಿ ಆಕಾಶದಲ್ಲಿ ಮೂಡುವ ಕಾಮನಬಿಲ್ಲಿನ ಬಣ್ಣ ನಕಲಿಯಾಗಬಹುದೇನೋ, ಕೋಲ್ಮಿಂಚು ಕುರೂಪವಾಗಬಹುದೇನೋ ನನ್ನನ್ನು ನಂಬಿ ಬಾ ಇದು ಹುಚ್ಚು ಪ್ರೀತಿಯಲ್ಲ ನನ್ನೆದೆಯೊಳಗೆ ಆಡಗಿರುವುದು ನೈಜವಾದ ಪ್ರೀತಿ ಎಂದು ಪ್ರೀತಿ ಶಾಶ್ವತ ಎಂಬ ಕವನದ ಶೀರ್ಷಿಕೆಯಲ್ಲಿ ಬರೆಯುತ್ತಾರೆ.
ಈ ಫಕೀರನ ಪ್ರೇಮಗೀತೆಗಳು ಕವನಸಂಕಲನದಲ್ಲಿ ಮೇದರದೊಡ್ಡಿ ಹನುಮಂತ ಬರೆದಿರುವ ಎಲ್ಲಾ ಪ್ರೇಮ ಕವಿತೆ ರಸಪೂಣ೯ ಶೃಂಗಾರ ಕವಿತೆಗಳಾಗಿ ಮೂಡಿಬಂದಿವೆ. ಮತ್ತೆ ಮಧುಚಂದ್ರಕೆ, ಪ್ರೇಮ ಖಯಾಲಿ, ವ್ಯಾಲೆಂಟೈನ್ಸ ದಿನ, ಮತ್ತೆ ಕಲ್ಲಾಗದಿರು ಆಹಲೈ, ಮಿತಿಯಿಲ್ಲದ ಕನಸುಗಳು, ಭಗ್ನ ಪ್ರೇಮಿಯಾ ಮಾಯದ ಗಾಯ’ ಇನ್ನೂ ಮುಂತಾದ ಕವಿತೆಗಳು ಸೊಗಸಾಗಿ ಮೂಡಿ ಬಂದಿದ್ದರೂ ಎಲ್ಲಾ ಕವಿತೆಗಳನ್ನು ಪರಿಚಯ ಮಾಡಿದರೆ ಕೃತಿಯು ತನ್ನ ಘಮಲನ್ನು ಕಳೆದುಕೊಳ್ಳಬಹುದು ಎಂಬ ಭಾವನೆಯಿಂದ ಹೆಚಾಗಿ ಬರೆಯದೇ ಪ್ರತಿಯೊಬ್ಬ ಓದುಗನು, ಬರಹಗಾರನು ಈ ಕೃತಿಯನ್ನು ಒಮ್ಮೆ ಓದಿ ಕವಿಯನ್ನು ಪ್ರೋತ್ಸಾಹಿಸಬೇಕು ಯಾಕೆಂದರೆ ಪ್ರೀತಿಯ ಸಾರ, ಶೃಂಗಾರದ ಘಮಲನ್ನು ಪಸರಿಸುವ ಕೃತಿ

ಈ ಫಕೀರನ ಪ್ರೇಮಗೀತೆಗಳು ಕವನಸಂಕಲನದಲ್ಲಿ ಮೇದರದೊಡ್ಡಿ ಹನುಮಂತ ಬರೆದಿರುವ ಎಲ್ಲಾ ಪ್ರೇಮ ಕವಿತೆ ರಸಪೂಣ೯ ಶೃಂಗಾರ ಕವಿತೆಗಳಾಗಿ ಮೂಡಿಬಂದಿವೆ. ಮತ್ತೆ ಮಧುಚಂದ್ರಕೆ, ಪ್ರೇಮ ಖಯಾಲಿ, ವ್ಯಾಲೆಂಟೈನ್ಸ ದಿನ, ಮತ್ತೆ ಕಲ್ಲಾಗದಿರು ಆಹಲೈ, ಮಿತಿಯಿಲ್ಲದ ಕನಸುಗಳು, ಭಗ್ನ ಪ್ರೇಮಿಯಾ ಮಾಯದ ಗಾಯ’ ಇನ್ನೂ ಮುಂತಾದ ಕವಿತೆಗಳು ಸೊಗಸಾಗಿ ಮೂಡಿ ಬಂದಿದ್ದರೂ ಎಲ್ಲಾ ಕವಿತೆಗಳನ್ನು ಪರಿಚಯ ಮಾಡಿದರೆ ಕೃತಿಯು ತನ್ನ ಘಮಲನ್ನು ಕಳೆದುಕೊಳ್ಳಬಹುದು ಎಂಬ ಭಾವನೆಯಿಂದ ಹೆಚಾಗಿ ಬರೆಯದೇ ಪ್ರತಿಯೊಬ್ಬ ಓದುಗನು, ಬರಹಗಾರನು ಈ ಕೃತಿಯನ್ನು ಒಮ್ಮೆ ಓದಿ ಕವಿಯನ್ನು ಪ್ರೋತ್ಸಾಹಿಸಬೇಕು ಯಾಕೆಂದರೆ ಈ ಕೃತಿಯಲ್ಲಿ ಕವಿತೆಗಳನ್ನು ಓದಿದಾಗ ಮನದೊಳಗೆ ಉಲ್ಲಾಸ ಮೂಡಿಸಿ ಒಂದೊಂದು ಸಂದೇಶವನ್ನು ನೀಡುತ್ತಾ ಸಾಗುತ್ತವೆ.
ಶ್ರೀ ಮೇದರದೊಡ್ಡಿ ಹನುಮಂತ ರವರ ಮೂರನೇಯ ಕೃತಿಯಾಗಿದ್ದು, ಎಲ್ಲಾರೂ ಈ ಕೃತಿಯನ್ನು ಕೊಂಡು ಓದಿ ಸಾಹಿತಿಗಳನ್ನು ಬೆಳೆಸಬೇಕಾಗಿದೆ. ಓದುಗರ ಪ್ರೋತ್ಸಾಹ ಅವರೊಳಗೆ ಮತ್ತಷ್ಟು ಹುರುಪನ್ನು ತುಂಬಿ ಇನ್ನಷ್ಟು ಉತ್ಕೃಷ್ಟವಾದ ಬರಹಗಳನ್ನು ಅವರು ಹೊರತರಬಹುದು.
ತಮ್ಮ ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು ಕವಿಗಳೇ. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.
ನಾರಾಯಣಸ್ವಾಮಿ .ವಿ ಮಾಸ್ತಿ ಕೋಲಾರ ಜಿಲ್ಲೆ .ಈ ಕೃತಿಯಲ್ಲಿ ಕವಿತೆಗಳನ್ನು ಓದಿದಾಗ ಮನದೊಳಗೆ ಉಲ್ಲಾಸ ಮೂಡಿಸಿ ಒಂದೊಂದು ಸಂದೇಶವನ್ನು ನೀಡುತ್ತಾ ಸಾಗುತ್ತವೆ.
ಶ್ರೀ ಮೇದರದೊಡ್ಡಿ ಹನುಮಂತ ರವರ ಮೂರನೇಯ ಕೃತಿಯಾಗಿದ್ದು, ಎಲ್ಲಾರೂ ಈ ಕೃತಿಯನ್ನು ಕೊಂಡು ಓದಿ ಸಾಹಿತಿಗಳನ್ನು ಬೆಳೆಸಬೇಕಾಗಿದೆ. ಓದುಗರ ಪ್ರೋತ್ಸಾಹ ಅವರೊಳಗೆ ಮತ್ತಷ್ಟು ಹುರುಪನ್ನು ತುಂಬಿ ಇನ್ನಷ್ಟು ಉತ್ಕೃಷ್ಟವಾದ ಬರಹಗಳನ್ನು ಅವರು ಹೊರತರಬಹುದು.
ತಮ್ಮ ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು ಕವಿಗಳೇ. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.
- ನಾರಾಯಣಸ್ವಾಮಿ .ವಿ – ಮಾಸ್ತಿ ಕೋಲಾರ ಜಿಲ್ಲೆ .