ಬಿಸಿ ನೀರಿಗೆ ಜೇನುತುಪ್ಪ ಸೇರಿಸಿದಾಗ ಆಗುವ ಅನಾಹುತ…



ಬೊಜ್ಜು ಕರಗಿಸಲು ಬಿಸಿನೀರಿಗೆ ಜೇನುತುಪ್ಪ ಸೇರಿಸಿ ಕುಡಿದರೆ. ಹಂತ ಹಂತವಾಗಿ ಬೊಜ್ಜು ಕರಗುವುದಿಲ್ಲ ಬದಲಾಗಿ ಕಿಡ್ನಿಗೆ ಮಾರಕವಾಗುತ್ತದೆ ಎನ್ನುತ್ತಾರೆ ಡಾ.ಪ್ರಕಾಶ ಬಾರ್ಕಿ ಕಾಗಿನೆಲೆಯವರು. ನಿಮ್ಮ ಆರೋಗ್ಯ ನಿಮ್ಮ ಕೈಯಲಿರಲಿ…

ಯಥೇಚ್ಚ ಜಂಕ್ ಫುಡ್ ತಿನ್ನೋದು, ಮೈ ಮುರಿದು ದುಡಿಯದೆ ಇರೋದು, ಅನಾರೋಗ್ಯಕರ ಜೀವನ ಶೈಲಿಯಿಂದ “ಬೊಜ್ಜು” ಬೆಳೆಯುವುದು ಸಹಜ.

ಸ್ವಲ್ಪ ದೂರ ನಡೆಯಲು ಬೈಕ್, ಕುಂತಲ್ಲೇ ಆಹಾರ ತರಿಸಲು “ಸ್ವಿಗ್ಗಿ” , “ಜೋಮ್ಯಾಟೋ” ಸೇವೆಗಳು, ಅಂಗೈಯಲ್ಲಿ ಜಗತ್ತನಾಡಿಸುವ ಮಾಯಾವಿ ಮೋಬೈಲ್ನ್ ಅಡ್ಡಪರಿಣಾಮವೆ “ಬೊಜ್ಜು”.

ಫೋಟೋ ಕೃಪೆ : UAS Today

ಈ ಅತೀಯಾದ ಬೊಜ್ಜಿನಿಂದ ಅದ್ಯಾವಾಗ ಮೊಣಕಾಲು ನೋವು, ರಕ್ತದೊತ್ತಡ, ಡಯಾಬಿಟಿಸ್, ಹೃದಯ ರೋಗ ಕಾಣಿಸಿಕೊಂಡವೋ,ನಮ್ಮ ಮೆದುಳಿನಲ್ಲಿ “ಕಣ್ಮುಚ್ಚಿ ಕುಳಿತ ಬುದ್ಧ”ನಂತಿದ್ದ ಜ್ಞಾನ ಮತ್ತು ಆರೋಗ್ಯ ಕಾಳಜಿ ತಕ್ಷಣ ಜಾಗೃತವಾಗತ್ತೆ.

ಮೈ ಭಾರ ಇಳಿಸಿಕೊಳ್ಳಲು ವಾಕಿಂಗು, ರನ್ನಿಂಗು, ಜಿಮ್, ಯೋಗ, ಆಯುರ್ವೇದ ಹೆಸರಿನ ಒಂದಿಷ್ಟು ಕಂಪನಿಯ ಔಷಧಗಳು ಅಂತ ಓಡಾಡಲು ಶುರು.
ಆವಾಗಲೇ ನೋಡಿ “ಆಯುರ್ವೇದ ಪಂಡಿತ”ರಂತೆ ವರ್ತಿಸುವ ಕೆಲವರಿಂದ ಬರುವ ಸಲಹೆ..
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ೨ ಚಮಚ ಜೇನು ಹಾಕಿ ಕುಡಿಯಿರಿ. ಕೆಲವೇ ದಿನ ತೆಗೊಂಡ್ರೇ ಬೊಜ್ಜು ಪಕ್ಕಾ ಕರಗತ್ತೆ.

ಈ ಪದ್ಧತಿಯನ್ನ ಎಲ್ಲರೂ ಬಳಸುವುದನ್ನು ನಾನು ನೋಡಿದಿನಿ. ಇದರಿಂದ ಒಂದಿಂಚು “ಬೊಜ್ಜು” ಮಿಸುಗಾಡಲ್ಲ. ಹೀಗೆ ಬೊಜ್ಜು ಕರಗಿಸಿಕೊಂಡವರು ಇಲ್ಲ.
ಈ ವಿಷಯ ನಿಮಗೂ ಗೊತ್ತಿರಲಿಕ್ಕೆ ಸಾಕು. ಅದು ಶುದ್ಧ ಸುಳ್ಳು ಮತ್ತು ಅಪಾಯಕಾರಿ.

ಬಿಸಿ ನೀರಿಗೆ ಜೇನು ಸೇರಿಸಿ ಕುಡಿಯೋದು ಪ್ರತಿದಿನ ಸ್ವಲ್ಪ ಸ್ವಲ್ಪ ವಿಷ ಕುಡಿದಂತೆ. ಹೇಗೆಂದು ತಿಳಿದುಕೊಳ್ಳೋಕೆ ಮುಂದೇ ಓದಿ ಅರ್ಥ ಆಗತ್ತೆ.

ಫೋಟೋ ಕೃಪೆ : Fortis

ಜೇನು ನೈಸರ್ಗಿಕವಾಗಿ ದೊರೆಯುವ ಅದ್ಭುತ ಔಷಧಿ. ನಮ್ಮ ತಪ್ಪು ಬಳಕೆಯಿಂದ ಲಿವರ್ ಕಾಯಿಲೆ(Liver cirrhosis), ಕಿಡ್ನಿ ಕಾಯಿಲೆ (Nephritis) ರೋಗಗಳನ್ನು ತಂದುಕೊಳ್ಳುತ್ತಿದ್ದೇವೆ.

ಆಯುರ್ವೇದದ ಪ್ರಮುಖ ಗ್ರಂಥವಾದ “ಅಷ್ಟಾಂಗ ಹೃದಯ” ದಲ್ಲಿ, ಜೇನುತುಪ್ಪ ಹೇಗೆ ಬಳಸಿದರೆ ಗರವಿಷ(Slow poison)ವಾಗುತ್ತೆ ಅಂತ ಕೂಲಂಕುಷವಾಗಿ ಸೂಚಿಸಿದ್ದಾರೆ.

ಉಷ್ಣ ಕಾಲದಲ್ಲಿ, ಬಿಸಿಲಿನಲ್ಲಿ ಕೆಲಸಮಾಡಿ ಉಷ್ಣ ಪೀಡಿತನಾದವನಿಗೆ ಬಿಸಿ ಆಹಾರದೊಂದಿಗೆ ಬಿಸಿ ಮಾಡಿದ ಜೇನನ್ನು ತಿನ್ನಿಸಿದರೆ ತಕ್ಷಣ ಮರಣ ಸಂಭವಿಸುತ್ತದೆ!!! ಅಂದರೆ ಜೇನು ಇಲ್ಲಿ ಸದ್ಯೋಮರಣಕಾರಕ. ಹಾಗಾಗಿ ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು. ಜೇನನ್ನು ಬಿಸಿಮಾಡಿದರೆ ಅದು ನಿಧಾನಗತಿಯ ವಿಷವಾಗುತ್ತದೆ. ಜ್ವರದಿಂದ ಬಳಲುತ್ತಿರುವ ವ್ಯಕ್ತಿ ಸೇವಿಸಿದರೆ ಮಾರಣಾಂತಿಕ ಕಾಯಿಲೆಗಳು ಬರುವವು.

ಜೇನುತುಪ್ಪವನ್ನು ಬಿಸಿನೀರಿನ ಜೊತೆ, ಬೇಸಿಗೆ ಕಾಲದಲ್ಲಿ, ಉಷ್ಣಪೀಡಿತ ಅವಸ್ಥೆಯಲ್ಲಿ ಕೊಟ್ಟರೆ ಶೀಘ್ರ ವಿಷಕಾರಿ ಆಗುತ್ತದೆ.

ಫೋಟೋ ಕೃಪೆ : cookpad

“ಕುದಿಸಿದ ಜೇನನ್ನು ಕೊಟ್ಟರೆ, ಯಕೃತ್- ಕಿಡ್ನಿಯನ್ನೂ ಮೀರಿ ಹೃದಯದ ಅಥವಾ ಪುಪ್ಪುಸದ ರಕ್ತನಾಳಗಳನ್ನು ಒಣಗಿಸಿ ತಕ್ಷಣವೆ ಸಂಕೋಚನ ಮಾಡಿ “ಹೃದಯ ಸ್ಥಂಭನ” ಮಾಡಿ ಕೊಲ್ಲುತ್ತದೆ. ಅಥವಾ ಮೆದುಳು, ನರಗಳ ಲಿಪಿಡ್ ವಿಭಜನೆ ಮಾಡಿ ಒಣಗಿಸಿ ವಿದ್ಯುತ್ ಸಂವೇದನೆ ನಿಲ್ಲಿಸಿ ತತ್ಕಷಣವೆ ಕೊಂದು ಹಾಕುತ್ತದೆ.

ಜೇನುತುಪ್ಪವನ್ನು ಬಿಸಿ ಮಾಡುವುದು ಅಥವಾ ಬಿಸಿ ಪದಾರ್ಥದೊಂದಿಗೆ ಸೇವಿಸುವುದು ಅಪಾಯಕಾರಿ. ಬಿಸಿ ನೀರಿಗೆ ಜೇನು ಸೇರಿಸಿದಾಗ ಅದು ಮಂದಗತಿಯ ವಿಷವಾಗುತ್ತದೆ. ಇದರಿಂದ ಮೊದಲು ಹಾನಿಯಾಗುವ ಅಂಗವೆಂದರೆ ಯಕೃತ್ (Liver). ಯಕೃತ್ ನಮ್ಮ ದೇಹದ ಅತಿ ದೊಡ್ಡ ಗ್ರಂಥಿ. ಲಿವರ್ ಹಾನಿಗೊಳಗಾಗಿ ಕಾರ್ಯಗಳು ಜಖಂಗೊಂಡರೆ ನಮಗೆ ಕಾಯಿಲೆಗಳು ಬಿಟ್ಟು ಬಿಡದೆ ಕಾಡುವುದು ನಿಶ್ಚಿತ. ನಾವು ಸದಾ ರೋಗಿಗಳಾಗಿಯೆ ಇರುತ್ತೇವೆ.

ಬಿಸಿನೀರಿನ ಜೊತೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿಯುವುದರಿಂದ. ಬಿಸಿಯಾದ ಜೇನುತುಪ್ಪ ಶರೀರದ ಅಂಗಗಳು ಬದುಕಲು ಅತ್ಯಗತ್ಯವಾಗಿ ಬೇಕಾಗುವ ಕೊಬ್ಬನ್ನು (Lipid) ವಿಭಜನೆ ಮಾಡುತ್ತದೆ. ಆಗ ಲಿವರ್ ಆ ವಿಭಜನೆಯನ್ನು ತಡೆಯಲು ಪ್ರಯತ್ನಿಸಿ ತನ್ನಲ್ಲಿನ ಸ್ನಿಗ್ಧತೆಯ ಸತ್ವವನ್ನೆ ಕಳೆದುಕೊಂಡು ಸಿರೋಸಿಸ್ (Cirrhosis) ಎಂಬ ತಾನೇ ಒಣಗಿ ಹೋಗುವ “ಲಿವರ್ ಸಿರೋಸಿಸ್” ಎನ್ನುವ ಕಾಯಿಲೆಗೆ ಬಲಿಯಾಗುತ್ತೆ.
ನಂತರ ತನ್ನೊಳಗಿನ ವಿಷವನ್ನು ನೇರವಾಗಿ ರಕ್ತಕ್ಕೆ ಹರಿಬಿಡುತ್ತೆ. ತತ್ಪರಿಣಾಮವಾಗಿ ಎರಡೂ ಕಿಡ್ನಿಗಳು ರಕ್ತದೊಳಗಿನ ವಿಷ ಸೋಸಲು ಪ್ರಯತ್ನಿಸಿ ಶಕ್ತಿಹೀನವಾಗಿ “ನೆಫ್ರೈಟಿಸ್”(Nephritis) ಆಗಿ “ಕಿಡ್ನಿ ವೈಫಲ್ಯ”(Kidney Failure) ದಲ್ಲಿ ಅಂತ್ಯವಾಗುತ್ತದೆ.

ಬಿಸಿ ಜೇನಿಗೆ ಕೊಬ್ಬು ಕರಗಿಸುವ ಪ್ರಬಲ ಶಕ್ತಿ ಇದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಆದರೆ ಜೀವ ಉಳಿಯಲು ಅಗತ್ಯವಾದ “ಕೊಬ್ಬನ್ನೆ” ಕರಗಿಸುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಫೋಟೋ ಕೃಪೆ : The indian express

ತೂಕ ಕಳೆದುಕೊಳ್ಳಲು ಜೇನುತುಪ್ಪವನ್ನು ಬಿಸಿ ನೀರಿನೊಂದಿಗೆ ಎಂದಿಗೂ ಸೇವಿಸಲೆಬೇಡಿ. ಯಾರಾದರೂ ನಿಮಗೆ ಸಲಹೆ ಮಾಡಿದರೆ “ಆಯುರ್ವೇದದ ಯಾವ ಗ್ರಂಥದಲ್ಲಿ ತಿಳಿಸಿದ್ದಾರೆ ಎಂದು ಅಥವಾ ವೈಜ್ಞಾನಿಕವಾಗಿ ಹೇಗೆ ಕೆಲಸ ಮಾಡುತ್ತದೆ, ಆಗುವ ಅಪಾಯಗಳ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳಿ.
ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ.



ಹಿಮಾಚಲ ಪ್ರದೇಶದ, ಕಾಂಗ್ರಾದ “ಅಥರ್ವ ಆಯುರ್ಧಾಮದ” ಶಾಖೆಗೆ ಇತ್ತೀಚೆಗೆ ದಂಪತಿಗಳಿಬ್ಬರೂ “ಲಿವರ್ ಸಿರೋಸಿಸ್” ಸಮಸ್ಯೆಯಿಂದ ಬಂದಿದ್ದರು.
ಅವರ ಕಾಯಿಲೆಗೆ ಕಾರಣ ಹುಡುಕುತ್ತಾ ಹೋದಾಗ ಕಂಡ ಸತ್ಯ ನಮ್ಮನ್ನೊಮ್ಮೆ ದಿಗ್ಭ್ರಾಂತರನ್ನಾಗಿಸಿತು.
ಜೇನು ಮತ್ತು ಬಿಸಿನೀರನ್ನು ನಿತ್ಯವೂ ಆರು ತಿಂಗಳಿನಿಂದ ಸೇವಿಸುತ್ತಿದ್ದರು. ಹಾಗಾಗಿಯೇ ಅವರ ಕೊಬ್ಬಿನ ಮೂಲಸ್ಥಾನ ಯಕೃತ್ ಒಣಗಿಹೋಗಿತ್ತು. “ಲಿವರ್ ಸಿರೋಸಿಸ್” ಕಾಯಿಲೆ ವಕ್ಕರಿಸಿತ್ತು ಎಂದು ಆಯುರ್ವೇದ ವೈದ್ಯ ಡಾ.ಮಲ್ಲಿಕಾರ್ಜುನ ಡಂಬಳ ತಿಳಿಸಿದ್ದಾರೆ.

ಆದ್ದರಿಂದ ಮೊದಲು ಈ ಅಪಾಯಕಾರಿ ಬೊಜ್ಜು ಕರಗಿಸುವ ಪದ್ದತಿಯನ್ನು ಸಂಪೂರ್ಣವಾಗಿ ತ್ಯಜಿಸಬಿಡಿ.
ಕೇವಲ ಶುದ್ಧ ಜೇನುತುಪ್ಪವನ್ನ ಸೇವಿಸಿ ಅಥವಾ “ಆಯುರ್ವೇದ ವೈದ್ಯರ” ಸಲಹೆ, ಚಿಕಿತ್ಸೆ ಮೂಲಕ ಬೊಜ್ಜು ಕರಗಿಸಿಕೊಳ್ಳಿ.

ದೇಹದ ಬೊಜ್ಜು ಕರಗಿಸಿಕೊಳ್ಳಲು ತ್ವರಿತ ಉಪಾಯಗಳನ್ನು ಬಳಸುವುದು ಅಪಾಯಕಾರಿ.


  • ಡಾ.ಪ್ರಕಾಶ ಬಾರ್ಕಿ, ಕಾಗಿನೆಲೆ (ವೃತ್ತಿಯಲ್ಲಿ ವೈದ್ಯರು. ಲೇಖನ, ಕಥೆ, ಕವನ ಬರೆಯುವುದು ಅವರ ಹವ್ಯಾಸ)

5 1 vote
Article Rating

Leave a Reply

2 Comments
Inline Feedbacks
View all comments
ರಘುರಾಂ

ಈ ವಿಷಯ ಎಲ್ಲರಿಗೂ ತಲುಪುವಂತೆ ಆಗಲಿ.

Swetha patil

Superb… It’s a routine everone does, everybody should know the CORRECT use of honey… Thank u .

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

2
0
Would love your thoughts, please comment.x
()
x
Aakruti Kannada

FREE
VIEW