ಡಾ.ಯುವರಾಜ್ ಹೆಗಡೆ ಮೇಗರವಳ್ಳಿ ಅವರು ಸೀತಾಳೆ ದಂಡೆ ಕುರಿತು ಸಣ್ಣ ಮಾಹಿತಿ ಹಾಗು ಸುಂದರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ , ನೋಡಿ ಆನಂದಿಸಿ…
ಸೀತಾಳೆ ಹೆಚ್ಚಾಗಿ ಪಶ್ಚಿಮ ಘಟ್ಟ, ಕರಾವಳಿಯಲ್ಲಿ ಕಂಡುಬರುವ ಇದು ನೈಸರ್ಗಿಕವಾಗಿ ಬೆಳೆಯುವ ಆರ್ಕಿಡ್. ಬೇರುಗಳನ್ನು ಮರದ ತೊಗಟೆಗೆ ಅಂಟಿಸಿಕೊಂಡು ವಾತಾವರಣದ ತೇವಾಂಶವನ್ನು ಉಪಯೋಗಿಸಿ ಬೆಳೆಯುತ್ತದೆ.. ಬೇಸಿಗೆಯಲ್ಲಿ ಬಾಡಿದಂತಿದ್ದು ಮಳೆಗಾಲದಲ್ಲಿ ಚಿಗುರುತ್ತದೆ. ಹಿಂದೆಲ್ಲಾ ಮಲೆನಾಡಿನ ಮಹಿಳೆಯರು ಇದನ್ನು ತುರುಬಿನಲ್ಲಿ ಮುಡಿಯುತ್ತಿದ್ದರು. ಒಂದು ರೀತಿಯಲ್ಲಿ ಇದು ಮಲೆನಾಡಿನ ಆಭರಣ, ಪೃಕೃತಿಯಲ್ಲಿನ ಸೊಬಗು ಎನ್ನಬಹುದು. ಮರದ ತೊಗಟೆಯಲ್ಲಿ ಬಿರುಕು ಹೆಚ್ಚಿರುವಲ್ಲಿ ಚೆನ್ನಾಗಿ ಬೆಳೆಯುತ್ತದೆ.

- ಕ್ಯಾಮರಾ ಕಣ್ಣು : ಯುವರಾಜ್ ಹೆಗಡೆ ಮೇಗರವಳ್ಳಿ
