ಉದಯೋನ್ಮುಖ ಕಾದಂಬರಿಗಾರ್ತಿ : ಗಾಯತ್ರಿ ರಾಜ್

ಗಾಯತ್ರಿ ರಾಜ್ ಅವರ “ಆಮ್ರಪಾಲಿ” ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತು “ಶ್ರೀಮತಿ ಕೆ.ಎಸ್ ಭಾರತಿ ರಾಜಾರಾಮ್‌ ಮಧ್ಯಸ್ಥ ದತ್ತಿ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದೆ. ಅವರ ಸಾಹಿತ್ಯ ಸೇವೆಯ ಕುರಿತು ಲೇಖಕ, ಕವಿ ನಾರಾಯಣಸ್ವಾಮಿ.ವಿ ಅವರು ಓದುಗರಿಗೆ ಪರಿಚಯಿಸಿದ್ದಾರೆ, ತಪ್ಪದೆ ಮುಂದೆ ಓದಿ….

ಕನ್ನಡದ ಪದಗಳಿಗೆ ಒಂದು ವಿಶಿಷ್ಟವಾದ ಶಕ್ತಿಯಿದೆ ಆ ಕನ್ನಡದ ಪದಗಳು ಹೇಗೆ? ಮನಸ್ಸಗಳನ್ನು ಆಕಷಿ೯ಸಿ ಬರವಣಿಗೆಯಲ್ಲಿ, ಓದುವಿಕೆಯಲ್ಲಿ ಜನರ ಮನವನ್ನು ತನ್ಮಯಗೊಳಿಸಿ, ತನ್ಮೂಲಕ ಬರಹಗಾರರನ್ನು ಕನ್ನಡ ಸಾಹಿತ್ಯಲೋಕದಲ್ಲಿ ತೊಡಗಿಸಿಕೊಳ್ಳುವಂತೆ ಬರವಣಿಗೆಯನ್ನು ರೂಪಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಆ ಶಕ್ತಿ ಕನ್ನಡದ ಪದಗಳಿವೆ ಎಂಬುದನ್ನು ಸಾಬೀತು ಪಡಿಸಿ, ಸಾಕ್ಷಿಯಾದವರು ಶ್ರೀಮತಿ ಗಾಯತ್ರಿ ರಾಜ್.

ಕಲಿತಿದ್ದು ವಿಜ್ಞಾನದ ವಿಷಯವಾದರೂ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ ಇವರು, ಕನ್ನಡದ ಬರಹದ ಸೆಳೆತಕ್ಕೆ ಒಳಗಾಗಿ ಅಂಕಣಗಾತಿ೯ಯಾಗಿ, ಲೇಖಕಿಯಾಗಿ ಕಾದಂಬರಿಗಾರ್ತಿಯಾಗಿ ಕನ್ನಡದ ಸಾಹಿತ್ಯ ಲೋಕದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ಹೆಸರು ಶ್ರೀಮತಿ ಗಾಯತ್ರಿ ರಾಜ್.

ಶ್ರೀಮತಿ ಗಾಯತ್ರಿ ರಾಜ್ ರವರು ಶ್ರೀ ರಂಗನಾಥ ಅಯ್ಯಂಗಾರ್ ಮತ್ತು ಶ್ರೀಮತಿ ಸೌಭಾಗ್ಯ ಲಕ್ಷ್ಮಿಯವರ ಮಗಳಾಗಿ ದಾವಣಗೆರೆಯಲ್ಲಿ ಜನಿಸಿದರು. ತಂದೆ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ವಿಧ್ಯಾಭ್ಯಾಸವು ದಾವಣಗೆರೆಯ ವಿನಾಯಕ ವಿದ್ಯಾಮಂದಿರದಲ್ಲಿ ನಡೆಯಿತು. ಪದವಿಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಷಯ ವನ್ನು ಆಯ್ದುಕೊಂಡು ಕಮಲಮ್ಮ ಕಾಲೇಜು ದಾವಣಗೆರೆ ಇಲ್ಲಿ ಮುಗಿಸಿ ಆದೇ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು. ನಂತರದಲ್ಲಿ ಎಂ ಎಸ್ಸಿ ಸ್ನಾತಕೋತ್ತರ ಪದವಿಯನ್ನು ಕುವೆಂಪು ಮುಕ್ತ ವಿಶ್ವವಿದ್ಯಾಲಯದಿಂದ ಪಡೆದರು.

ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಇವರು ಬರೆದ ಕಾದಂಬರಿಗಳು ಸದ್ದು ಮಾಡುತ್ತಾ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಪತ್ರಿಕೆಯ ಅವರ ಪರಿಚಯದ ಬರಹಕ್ಕಾಗಿ ಅವರನ್ನು ಒಂದೆರಡು ಪ್ರಶ್ನೆಗಳನ್ನು ಕೇಳಲಾಯಿತು… ಕನ್ನಡ ಸಾಹಿತ್ಯದ ಬಗ್ಗೆ ನಿಮಗೆ ಬಾಲ್ಯದಿಂದಲೂ ಒಲವಿತ್ತೆ? ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು “” ಬಾಲ್ಯದಲ್ಲಿ ಸಾಹಿತ್ಯಕ್ಕಿಂತ ಸಂಗೀತಾ ಮೇಲೆ ಬಹಳ ಒಲವಿತ್ತು. ತಂದೆ ಪೋಲಿಸ್ ಅಫೀಸರ್ ಆಗಿದ್ದರೂ ಕೂಡ ಅವರು ಸಂಗೀತದ ಮೇಷ್ಟ್ರು ಅಂತಲೇ ದಾವಣಗೆರೆಯಲ್ಲಿ ಚಿರಪರಿಚಿತರಾಗಿದ್ದರು. ಅವರಿಂದ ಸಂಗೀತಾ ಕಲಿಯುವ ಅವಕಾಶ ಸಿಕ್ಕಿತು. ಜೊತೆ ಜೊತೆಗೆ ಓದುವ ಗೀಳು ಕೂಡ ನನ್ನನ್ನು ಆವರಿಸಿಕೊಂಡಿತು. ಚಿಕ್ಕವಯಸ್ಸಿನಲ್ಲೇ ಅಪ್ಪ ರೋಟರಿ ಕ್ಲಬ್ ನಲ್ಲಿ ಸದಸ್ಯತ್ವ ಕೊಡಿಸಿದ್ದರಿಂದ ಅಲ್ಲಿ ಪ್ರದಿನ ಸಾಹಿತ್ಯ ಓದುವ ಅವಕಾಶ ಸಿಗುತ್ತಿತ್ತು. ಸಮಯವಾದಗಲೆಲ್ಲಾ ಬಾಲಮಂಗಳ, ಚಂದಮಾಮ, ಹಲವಾರು ಮಾಸಪತ್ರಿಕೆಗಳು, ಕಥೆ ಕಾದಂಬರಿ ಮುಂತಾದ ಸಾಹಿತ್ಯವನ್ನು ಓದುತ್ತಿದ್ದೆ. ಪದವಿಪೂರ್ವ ವಿಧ್ಯಾಭ್ಯಾಸದ ಸಮಯದಲ್ಲಿ ಸಾಹಿತ್ಯವನ್ನು ಓದಿದ್ದು ಕಡಿಮೆಯೇ, ಯಾಕೆಂದರೆ ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡುತ್ತಿದ್ದರಿಂದ ಬಹಳಷ್ಟು ಓದಿನಲ್ಲಿ ತೊಡಗಿಸಿಕೊಂಡಿದ್ದೆ ಎನ್ನುತ್ತಾರೆ ಲೇಖಕಿ ಶ್ರೀಮತಿ ಗಾಯತ್ರಿ ರಾಜ್.

ನಿಮ್ಮ ಬರಹಕ್ಕೆ ಪ್ರೇರಣೆ ಯಾರು? ಎಂಬ ಪ್ರಶ್ನೆಗೆ ‘ನನ್ನ ಮದುವೆ ನಂತರದಲ್ಲಿ ಬಹಳಷ್ಟು ಸಾಹಿತ್ಯವನ್ನು ಓದಲು ತೊಡಗಿಸಿಕೊಂಡೆ. ಎಸ್ ಎಲ್ ಭೈರಪ್ಪನವರ ಕಾದಂಬರಿಗಳು, ತ ರಾ ಸು ರವರ ಸಾಹಿತ್ಯ, ಕುವೆಂಪು ರವರ ಸಮಗ್ರ ಸಾಹಿತ್ಯ ಎಲ್ಲಕ್ಕಿಂತ ಹೆಚ್ಚಾಗಿ ರವಿ ಬೆಳಗೆರೆಯವರ ಸಾಹಿತ್ಯವನ್ನು ಓದಿರುವೆ. ನನಗೆ ಬರೆಯಲು ಪ್ರೇರಣೆಯಾದವರು ರವಿಬೆಳಗೆರೆ ಮತ್ತು ಬರಹಗಳು ಕಾರಣ ಅನ್ನಬಹುದು. ಯಾಕೆಂದರೆ ಸುಲುಭ ವಿಷಯಗಳನ್ನು ತೆಗೆದುಕೊಂಡು ಹೇಗೆ ಬರೆಯಬಹುದು ಎಂಬುದನ್ನು ಅವರ ಸಾಹಿತ್ಯ ಓದಿದ ಮೇಲೆ ನನಗೆ ಅರಿವಾಯಿತು. ನನಗೆ ಪ್ರೇರಣೆ ಮತ್ತು ನನ್ನ ಮಾನಸ ಗುರುಗಳು ರವಿ ಬೆಳಗೆರೆ. ಈ ವಿಷಯವನ್ನು ನನ್ನ ಮೊದಲ ಕೃತಿಯಲ್ಲಿ ಬರೆದುಕೊಂಡಿದ್ದೇನೆ ಎನ್ನುತ್ತಾರೆ ಲೇಖಕಿ ಶ್ರೀಮತಿ ಗಾಯತ್ರಿ ರಾಜ್.

ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಾ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀಮತಿ ಗಾಯತ್ರಿ ರಾಜ್.
ಬರವಣಿಗೆಯನ್ನು ತಮ್ಮ ಹವ್ಯಾಸ ಮತ್ತು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಇವರು ಹಲವಾರು ಕೃತಿಗಳು ರಚಿಸಿದ್ದು, ಅವುಗಳಲ್ಲಿ “ಬಣ್ಣದ ಜೋಳಿಗೆ”, “ಆಮ್ರಪಾಲಿ”, “ಬ್ಯೂಟಿಫುಲ್‌ ಲೈಫ್‌”, “ ೧೫ ಸಣ್ಣಕಥೆಗಳು” (ಕಥಾಸಂಕಲನ), “೩ ನೀಳ್ಗತೆಗಳು” (ಕಥಾಸಂಕಲನ), ಹೊಸಕತೆಗಳು (ಕಥಾಸಂಕಲನ), ಟ್ರಾಯ್‌” (ಐತಿಹಾಸಿಕ ಕಾದಂಬರಿ)
“ಒಲವೇ ವಿಸ್ಮಯ” ( ಪ್ರೇಮ ಬರಹಗಳು) ಎಂಬ ಕೃತಿಗಳು ಈಗಾಗಲೇ ಅಪಾರ ಜನರ ಮೆಚ್ಚುಗೆಯನ್ನು ಪಡೆದು ಬಹುಮಾನ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಇವರ ಬರಹಗಳಾದ ಕಥೆ, ಕವನ ಹಾಗೂ ಪ್ರವಾಸ ಕಥನಗಳು, ಹಲವಾರು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತರಂಗ, ಸುಧಾ, ಕರ್ಮವೀರ, ಓ ಮನಸೇ, ವಿಜಯಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಹೊಸ ದಿಗಂತ, ಕನ್ನಡ ಮಾಣಿಕ್ಯ ಪತ್ರಿಕೆಗಳಲ್ಲೂ ಕೂಡ ಇವರ ಬರಹಗಳು ಪ್ರಕಟಗೊಳ್ಳುತ್ತಿವೆ.

ಶ್ರೀಮತಿ ಗಾಯತ್ರಿ ರಾಜ್ ರವರನ್ನು ಹಲವಾರು ಕನ್ನಡ ಸಂಘಸಂಸ್ಥೆಗಳು ಅವರ ಸಾಹಿತ್ಯದ ಪ್ರತಿಭೆಯನ್ನು ಗುರುತಿಸಿ ಗೌರವಿಸಿ ಸನ್ಮಾಸಿವೆ. ಇವರು ಬರೆದ “ಆಮ್ರಪಾಲಿ” ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತು “ಶ್ರೀಮತಿ ಕೆ.ಎಸ್ ಭಾರತಿ ರಾಜಾರಾಮ್‌ ಮಧ್ಯಸ್ಥ ದತ್ತಿ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದೆ. ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಯಾದ ಅಡ್ವೈಸರ್‌ “ಪುಸ್ತಕ ಸಾಹಿತ್ಯ” ಪ್ರಶಸ್ತಿ,ಯು ಕೂಡ ಇವರಿಗೆ ದೊರಕಿದೆ. ಅವ್ವ ಪುಸ್ತಕಲಾಯದವರು ಕೊಡಮಾಡುವ 2022 ಸಾಲಿನ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಯ ಮೆಚ್ಚುಗೆಯನ್ನು ಪಡೆದಿದೆ. ಇವರ “ಟ್ರಾಯ್‌” ಕಾದಂಬರಿಗೆ ಕರ್ನಾಟಕ ಲೇಖಕಿಯರ ಸಂಘದ ೨೦೨೨ ನೇ ಸಾಲಿನ ತ್ರಿವೇಣಿ ದತ್ತಿ ಪ್ರಶಸ್ತಿ ದೊರಕಿದೆ , 2023 ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಭಾರತೀಸುತ ಸ್ಮಾರಕ (ಕಾದಂಬರಿ) ದತ್ತಿ ಪ್ರಶಸ್ತಿಗಳು ದೊರೆತ್ತಿರುತ್ತವೆ. ಇದರೊಂದಿಗೆ ಲೇಖಕರ ಸಾಹಿತ್ಯ ಕೃಷಿಗೆ ೨೦೨೨ನೇ ಸಾಲಿನ ರಾಜ್ಯಮಟ್ಟದ ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ, ಶಿವಮೊಗ್ಗ ದಸರಾ ಪ್ರಶಸ್ತಿ, ಥಾಯ್‌ ಕನ್ನಡ ಬಳಗ ವರ್ಷದ ಸಾಹಿತಿ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ ಮತ್ತು ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಹಲವು ಪುರಸ್ಕಾರಗಳು ಕೂಡ ದೊರೆತ್ತಿರುತ್ತದೆ.

ಇವರ ಸಾಹಿತ್ಯ ಸೇವೆ ಹೀಗೆ ಸಾಗುತಿರಲಿ, ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ತಮ್ಮ ವೃತಿಯ ಜೊತೆಗೆ ಪ್ರವೃತ್ತಿಯಾದ ಕನ್ನಡದ ಬರವಣಿಗೆಯ ಇನ್ನಷ್ಟು ತೊಡಗಿಸಿಕೊಂಡು ಮತ್ತಷ್ಟು ಕೃತಿಗಳನ್ನು ಹೊರತಂದು ಕನ್ನಡಮ್ಮ ಸೇವೆಯನ್ನು ಮಾಡಲಿ. ಮುಂಬರುವ ಸಾಹಿತ್ಯದ ಬರಹಗಳು ನೊಂದ ಮಹಿಳೆಯರ ಬದುಕಿನ ತಲ್ಲಣಗಳಾಗಲಿ. ಇವರು ಕರುನಾಡಿನ ಸಾಹಿತ್ಯದಲ್ಲಿ ಮತ್ತಷ್ಟು ಗುರುತಿಸಿಕೊಂಡು, ಇನ್ನಷ್ಟು ಗೌರವ ಪುರಸ್ಕಾರಗಳಿಗೆ ಭಾಜನರಾಗಲಿ ಎಂದು ಆಶಿಸುತ್ತಾ ಪತ್ರಿಕೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ.

ಹಿಂದಿನ ಸಂಚಿಕೆಗಳು :


  • ನಾರಾಯಣಸ್ವಾಮಿ.ವಿ – ವಕೀಲರು ಮತ್ತು ಲೇಖಕರು, ಮಾಸ್ತಿ ಕೋಲಾರ ಜಿಲ್ಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW