‘ಹಬ್ಬದ ಸಿರಿ’ ಕವನ –  ವಿ.ಎಂ.ಎಸ್. ಗೋಪಿ

ಸಂತಸದ ರೂಪ ಈ ಯುಗಾದಿ ಹಬ್ಬ… ಕವಿ ವಿ.ಎಂ.ಎಸ್.ಗೋಪಿ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಬಂತೋ.. ಬಂತೋ.. ಯುಗಾದಿ ಬಂತೋ..
ತಂತೋ.. ತಂತೋ.. ಸಡಗರ ತಂತೋ..

ಸಿರಿ ತಂದಿತಪ್ಪ ಈ ಯುಗಾದಿ ಹಬ್ಬ
ಸಂತಸದ ರೂಪ ಈ ಯುಗಾದಿ ಹಬ್ಬ

ಮನೆಯ ಅಂಗಳದಿ ಬಣ್ಣದ ರಂಗೋಲಿ
ಮನೆಯ ಬಾಗಿಲು ಮಾವಿನ ತೋರಣ

ಊರ ತುಂಬೇಲ್ಲಾ ಹೊಸತು ನೋಡಾ
ನಾಡಿನ ಜನದ ಹಿಗ್ಗು ನೋಡಾ

ಹಬ್ಬದ ಸಿರಿಗೆ ತುಪ್ಪದ ಘಮ ಘಮ
ಹಸಿರಿನ ಗರಿಗೆ ಸಂಭ್ರಮದ ಸಮ ಸಮ

ಹರಿಯುವ ನೀರಲ್ಲಿ ತಲೆ ಎಣ್ಣೆ ಸ್ನಾನ
ನಾರಿಯರ ಮುಡಿ ತುಂಬ ಮಲ್ಲಿಗೆ

ನಾಡ ತುಂಬಾ ಸಂತಸ
ಎಲ್ಲೆಲ್ಲೂ ಹಬ್ಬದ ಸಡಗರ

ಸಿಹಿಯಾಗಿರೋ ಮನಸ್ಸಿಗೆ ಬೇವು ಬೆರಸಿ
ಹೋಳಿಗೆ ತಿಂದು ಬಾಳಿಗೆ ಸಿಹಿ ಬೆರಸಿ.


  •  ವಿ.ಎಂ.ಎಸ್.ಗೋಪಿ – ಲೇಖಕರು, ಸಾಹಿತಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading