ಯಕ್ಕುಂಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ, ಹೆಸರಾಂತ ಕವಿಗಳಾದ ಡಾ.ವೈ.ಎಂ.ಯಾಕೊಳ್ಳಿ ಅವರ ಈ ಕವನವನ್ನು ತಪ್ಪದೆ ಮುಂದೆ ಓದಿ…
ಕದಿಯೋ ಮನ
ಸದಾ ಕದಿಯುತ್ತದೆ
ಅವಳೊಲವ
ಹೂವು ಪಕಳೆ
ಕ್ಷಣಕೂ ರೋಮಾಂಚನ
ದುಂಬಿ ನೆನೆದು
ಬಿದ್ದನೀರದು
ಬೇರಿನುದ್ದ ಹರಿದು
ಜೀವ ಸಂಚಾರ
ಕಾದಾಡಲಲ್ಲ
ಜೀವನವು ಇರೋದು
ಹೊಂದಿ ಬಾಳಲು
ಗಿಡ ಗಿಡವೂ
ಹಣ್ಣ ನೆರಳನಿತ್ತು
ಬಾಳು ಸಾರ್ಥಕ
ತನ್ನ ನೆರಳು
ಯಾರಿಗೋ ಆಸರೆಯು
ತನಗೆ ಯಾರೋ
ಕೊಂಬೆಯ ತುದಿ
ಗೂಡು ಕಟ್ಟಿದ ಹಕ್ಕಿ
ಗಾಳಿಯುಯ್ಯಾಲೆ
ದೇವರೂ ಕೂಡ
ಬರುವ ಭಕ್ತರತ್ತ
ನೆಟ್ಟ ನೋಟವು
ಇಹದ ಸುಖ
ಕಣ್ಣು ಕುಕ್ಕಿದ ಶಿವ
ಭೂ ಆಕ್ರಮಣ
ಇಂದಿನ ಶ್ರಮ
ನಾಳೆಗೆ ಸುಖವನು
ಈವ ಗೆಳೆಯ
ಗೆಳೆತನಕೆ
ಕುಲ ಗೋತ್ರದ ಚಿಂತೆ
ಎಂದಿಗೂ ಇಲ್ಲ
- ಡಾ.ವೈ.ಎಂ.ಯಾಕೊಳ್ಳಿ – ಯಕ್ಕುಂಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು
