‘ಕೆನೆ ಮೊಸರಲ್ಲಿ ಮನಸನು ಚೆಲ್ಲಿ ಬಿಟ್ಟಳು ಪ್ರೀತಿಯಲಿ’… ಸುಂದರ ಸಾಲುಗಳು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಸಾಲುಗಳು ಕವಿ ರಸಿಕರಿಗಾಗಿ, ಮುಂದೆ ಓದಿ….
ಹೃನ್ಮನದಲ್ಲಿ ನನ್ನವಳಲ್ಲಿ
ಸೆಳೆದಳು ನಗುವಲ್ಲಿ
ಪೈರುಗಳಲ್ಲಿ ಹಸಿರೆಲೆಯಲ್ಲಿ
ಬೆರೆತಳು ಉಸಿರಲ್ಲಿ
ತೊರೆನೀರಲ್ಲಿ ಬೆಳೆದುಂಡಲ್ಲಿ
ಅರಿತಳು ನನ್ನಲ್ಲಿ
ಗೊನೆ ಬಾಳೇಲಿ ತೆನೆ ರಾಗೀಲಿ
ತೂಗಿದಳವಳಲ್ಲಿ
ಸುಮ ಘಮದಲ್ಲಿ ಮನದೊಳಗಲ್ಲಿ
ಇಳಿದಳು ಸೊಬಗಲ್ಲಿ
ಉದುಬದುವಲ್ಲಿ ನಡೆಯುತ ಮಲ್ಲಿ
ತಂದಳು ಬುತ್ತಿಯಲಿ
ಅಂಗಳದಲ್ಲಿ ಗಂಗಳದಲ್ಲಿ
ಕೊಟ್ಟಳು ಹಿಟ್ಟಿನಲಿ
ಕೆನೆ ಮೊಸರಲ್ಲಿ ಮನಸನು ಚೆಲ್ಲಿ
ಬಿಟ್ಟಳು ಪ್ರೀತಿಯಲಿ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಬರಹಗಾರರು) ಬೆಂಗಳೂರು
