ಹೆಂಚಿನ ಮನೆ – ಶೋಭಾ ನಾರಾಯಣ ಹೆಗಡೆ

ಅಮ್ಮಮ್ಮಂಗೆ ಹೆಂಚಿನ ಮನೆ ಮೇಲೆ ತುಂಬಾ ಪ್ರೀತಿಯಿತ್ತು. ಆದರೆ ಮೊಮ್ಮಗ ಕಿರಣ್ ತನ್ನ ಆಸೆಗಾಗಿ ಹಂಚಿನ ಮನೆಯನ್ನು ತೆಗೆಸಿ ಸಿಮೆಂಟ್ ಮನೆ ಮಾಡಿಸಿದ್ದ, ಅದು ಈಗ ಅವನಲ್ಲಿ ಪಶ್ಚಾತ್ತಾಪವಿತ್ತು, ಶೋಭಾ ನಾರಾಯಣ ಹೆಗಡೆ ಅವರ ಲೇಖನಿಯಲ್ಲಿ ಹವ್ಯಕ ಭಾಷೆಯಲ್ಲಿ ಹೆಣೆದ ಸುಂದರ ಭಾವನಾತ್ಮಕ ಪ್ರೀತಿಯ ಕತೆ.ತಪ್ಪದೆ ಮುಂದೆ ಓದಿ…

ಎಂತೇ ಇದು ಸುಬ್ಬಿ.. ಶೆಖೆ ಈನಮ್ನಿ. ನಮ್ಮನೆ ಮಳ್ ಪೋರ. ಹೇಳಿದ್ರು ಕೇಳೇ ಇಲ್ಲ ಮಾರಾಯ್ತಿ. ಹಂಚಿನ ಮನೆ ಹಂಗೆ ಇರಲೋ, ಇರಲೋ ಅಂದೆ. ಆ ಸುಟ್ಟು ಸಿಮೆಂಟ್ ಮನೆ ಮಾಡಿಟ್ಟಾವೆ ಅಪ್ಪ, ಮಗ ಕೂಡಿ….ಒಳಗೆ ಇರಕೂ ಆಗಲ್ಲ ..ಮೈಯಿಂದ ದಳ ದಳ ನೀರು ಹರೀತದೆ. ಅಷ್ಟು ಶೆಖೆ. ಅಲ್ಲೇ ಮಾರಾಯ್ತೀ.

ಎಂತದೆ ಸುಬ್ಬಿ, ಇವತ್ತ್ ಚಾಲಿ ಸುಲ್ಯಕೇ ಬಂದ್ಯನೇ. ಎಸ್ಟ್ ದಿನ ಆಗಿತ್ತು. ನಮ್ಮನೇ ದೊಡ್ಡ ಹೆಗ್ಡ್ರು ಅಡಕೆ ಸುಲ್ಯಕೇ ಬಾ ಹೇಳಿ. ರೇಟ್ ಇದ್ದಾಗ ಅಡಕೆ ಕೊಟ್ಟುಬುಡ್ಬೇಕು ಹೇಳಿ ಹೇಗ್ಡ್ರಿಗೆ. ನೀವು ಬರದೇ ಇಲ್ಲಪ ಹೇಳಕ್ಯೆತ್ತವ,ಕೈಯಲ್ಲಿ ಕವಳ ಬಟ್ಲ ಹಿಡ್ಕoಡ್ ಅಂಗಳಕ್ಕೆ ಬಂತು ಯಂಕಜ್ಜೀ.

ಇಷ್ಟ ದಿನ ಮೇಲ್ಮನೆ ಹೆಗ್ಡೆ ಮನಿಗೆ ಹೋತೀದ್ದು ಮಾರಾಯ್ರ. ಅವ್ರ ಮನಿಗೆ ಕೂಸ್ನ ಮದ್ವೆ ಬಂತoತಲ್ರ ಅದ್ಕೆ ಬ್ಯಾಗ್ ಬ್ಯಾಗ್ ಚಾಲಿ ಸುಲ್ಕುಡೀ ಹೇಳಿ ಹೆಗ್ಡೆದ್ಡು, ಹೇಗ್ಡ್ತೇರದ್ದು ಒಂದೇ ಸಮನೇ ಒತ್ತಾಯ,ಸಾಯ್ಲಿ,ನಿಮ್ದಾದ್ರೆ ಕಡೀಗಾರು ಅಡ್ಡಿಲ್ಲ,ಹೇಳಿ ಮೊದ್ಲ್ ಅವ್ರ ಮನೆದೆ ಸುಲ್ದು ಬಂದೆ.ಇಲ್ಲ ಕಾಣಿ,ಇನ್ನು ಎರ್ಡ್ ಮೂರ್ ದಿನ ನಿಮ್ಮನಿಗೇ ಬತ್ತೆ. ಪೂರ ಮುಗ್ಸೇ ಬ್ಯಾರೆ ಬದಿಗ್ ಹೋಪ್ದ್, ತಲೆ ಬಿಸಿ ಮಾಡ್ಕ ಬ್ಯಾಡ್ರ ಅಮ್ಮ. ಹೇಳಿ ಸುಬ್ಬಿ ತನ್ನ ಪಾಡಿಗೆ ತಾನು ಅಡಕೆ ಸುಲ್ಯಲೇ ಶುರು ಮಾಡ್ಚು.

ಅಯ್ಯ ತಮ್ಮ ಕವಳ ಬಟ್ಲಲ್ಲಿ ಹೊಗೆ ಸೊಪ್ಪೇ ಇಲ್ಯಲ, ಹನಿ ತನ್ಕೋಡ ಮಗ ಹೇಳಿ ಜಗ್ಲಿ ಮ್ಯಾಲೆ ಟಿವಿ ನೋಡ್ತಿದ್ದ ಮೊಮ್ಮಗ ಕಿರಣ್ ನ ಕರತ್ತು ಅಜ್ಜಿ,ಕಿರಣ್ ಅಜ್ಜಿಗೆ ಹೊಗೆ ಸೊಪ್ಪು ತಂದ್ಕೊಟ್ಟು,ಅಮ್ಮಮ್ಮ ರಾಶೀ ಹಾಕಡ,ಡಾಕ್ಟರ್ ಹೇಳಿದ್ದು ಗೊತ್ತಿದ್ದಲೇ ಹೇಳಕ್ಯೆತ್ತ ಮತ್ತೆ ಟಿವಿ ನೋಡಲೇ ಜಗ್ಲಿಗೆ ಹೋದ.

ಯಂಕಜ್ಜೀ ಬಾಯಿ ತುoಬಾ ಕವಳ ಹಾಕ್ಯಂಡ್ ಸುಬ್ಬಿ ಹತ್ರೆ ಸುದ್ದಿ ಹೇಳಲೇ ಶುರು ಮಾಡ್ಚು.

ಅಲ್ಲ ಸುಬ್ಬಿ, ಮೊದ್ಲೇಲ್ಲ ನಮ್ಮನೇ ಕಿರಣ್ ನಾ ಎಂತರು ಹೇಳಿರೆ, ದರಕಾರ ತಗಳದೇ ಇಲ್ಲಾಗಿತ್ತು ಮಾರಾಯ್ತಿ, ಸುಡು ಸುಡು ಹೇಳಿ ಹರಿ ಹಾಯ್ತಿದ್ದ.ನಾನು ಮಾತಾಡದ್ರೆ ಸಾಕು, ಸಾಕೆ ಬಾಯ್ಮುಚ್ಚೇ ಅಮ್ಮಮ್ಮ,ಎಂತ ವಟ ವಟ ಹೇಳ್ತನ, ಮಡಿನಡ,ಮೈಲ್ಗೇಡ,ಒಂದಿನ ಅಲ್ಲ ಒಂದ್ ಕಾಲ ಅಲ್ಲ,ಪ್ರತೀ ದಿನ ಇಪ್ಪದೆಯ ನಿನ್ನ ಗೋಳು ಅಂತಿದ್ದ,ನಮ್ಮನೇ ದೊಡ್ಡ ಹೆಗ್ಡ್ರು ಸಾಮ್ಮನೇ ಬೈಯ್ಯುದಿಲ್ಲಾಗಿತ್ತು.ಎಂತ ಕೊಟ ಕೊಟಗುಡ್ತ್ಯೇ,ಬಾಯ್ಮುಚ್ಯ್ಕ ಇಪ್ಪಲಾಗ್ತಿಲ್ಯ ಅಂತಿದ್ರು.ಇನ್ನು ನಮ್ಮನೇ ಹೇಗ್ಡ್ತೇರ್ ಅಂತೂ ಬಿಡು,ಬಾಯ್ಬಿಟ್ರೇ ಜಗ್ಳ.ಇನ್ನು ನಾನು ಬ್ಯಾರೆ ಅಡ್ಗೆ ಮಾಡದೊoದು ಬಾಕಿ ಇತ್ತು,ಆವಾಗೆಲ್ಲ,ಸುಬ್ಬಿ ನಾ ಬದ್ಕುದೇ ಬ್ಯಾಡ,ದೇವ್ರು ಆದಷ್ಟು ಬ್ಯಾಗ್ ಮ್ಯಾಲೆ ತಗಂಡು ಹೋಗ್ಲಿ ಅಂತಿದ್ದೆ,ಎಷ್ಟ್ ದಿನ ಕಣ್ಣೀರ್ ಕೂಳ್ ತಿoದಿದ್ನೇನ ಮಾರಾಯ್ತಿ.
ಮೊನ್ನೆ ಆಸ್ಪತ್ರಿಗೆ ಹೋಗಿ ಬಂದ್ನಲೇ ಅಲ್ಲಿಂದ ಎಲ್ರೂ ಎಷ್ಟ್ ಚೊಲೋ ನೋಡ್ಕತ್ತಾರೆ ಅoಬೆ,ಕಿರಣoಗೂ ನನ್ನ ಮ್ಯಾಲೆ ಪ್ರೀತಿ ಬಂದ್ಬುಟ್ಟದೇ,ಹೆಗ್ಡ್ರು,ಹೇಗ್ಡ್ತೇರು ಎಲ್ಲ ಚೊಲೋ ನೋಡ್ಕತ್ತಾವೇ,ಈಗ ಇನ್ನೂ ಹತ್ತು ವರ್ಷ ಬದ್ಕನ ಅನ್ನಸ್ತೈತೇ.ನಮ್ಮನೇ ಕಿರಣನ ಮದ್ವೆ ಆಗಿ ಅವ್ನ ಮಕ್ಕನ ಆಡ್ಸಿಕ್ಕೆ ನಾ ಸಾಯದು ನೋಡು ಸುಬ್ಬಿ,ಹೇಳಿ ಬಾಯಲ್ಲಿದ್ದ ಕವಳದ ರಸ ತುಪ್ಪಲೇ ಎದ್ದು ಹೋತು ಯoಕಜ್ಜೀ.

ಜಗುಲಿ ಮ್ಯಾಲೆ ಟಿವಿ ನೋಡ್ತಿದ್ದ ಕಿರಣoಗೆ ಅಜ್ಜಿ ಹೇಳಿದ್ದ ಮಾತೆಲ್ಲ ಕೇಳಚು.ಅಮ್ಮಮ್ಮನ ಮುಗ್ದತೆ,ಅವ್ಳ ಖುಷಿ,ಇನ್ನೂ ಬದ್ಕ ಆಸೆ ಎಲ್ಲ ನೋಡಿ ಕಿರಣನ ಕಣ್ಣಿoದ ಕಣ್ಣೀರು ಧಾರಾಕಾರವಾಗಿ ಹರ್ತು.

ಅಮ್ಮಮ್ಮ ನಿನ್ನ ಚೊಲೋ ಮಾಡಿ ನೋಡ್ಕ್ಯಂಜ್ವೇ ಇಲ್ಲೇ ಎಂಗವು, ಎಂಗಳ ಕ್ಷಮ್ಸು. ಈಗ್ಲೂ ಎಂಗ ಮುಖವಾಡ ಹಾಕ್ಯಂಡೇ ಇದ್ಯ. ಎಂತಕ್ಕೆ ಅಂದ್ರೆ, ನಿoಗೆ ಗುಣ ಆಗ್ದೆ ಇಪ್ಪ ರೋಗ ಬಂಜು. ಅದ್ಕೆ ಡಾಕ್ಟರ್ ಇಪ್ಪಷ್ಟ್ ದಿನ ಚೊಲೋ ಮಾಡಿ ನೋಡ್ಕ್ಯಳಿ ಹೇಳಿ ಹೇಳಿದ್ರು,ಅದ್ಕೆ ನಿನ್ನ ಮನ್ಸಿಗೆ ಬ್ಯಾಜಾರ್ ಆಗ್ದೆ ಹೋದಂಗೆ ನೋಡ್ಕ್ಯತ್ತಾ ಇದ್ಯ,ಎಷ್ಟ್ ದಿನ ಇರ್ತೆ ಹೇಳಿ ಗೊತ್ತಿಲ್ಲೆ. ಒಂದ್ ತಿoಗಳು,ಮೂರು ತಿoಗಳು,ಇಲ್ಲೇ ಒಂದ್ ವರ್ಷ ಅಷ್ಟೇಯಾ.ಈಗ ನಿನ್ನ ಬೆಲೆ ಗೊತ್ತಾಗ್ತಿದ್ದು ಅಮ್ಮಮ್ಮ. ಆದ್ರೆ ಕಾಲ ಮಿಂಚಿ ಹೋಜು,ನೀನು ಇಪ್ಪಷ್ಟು ದಿನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕ್ಯತ್ತಿ ಆನು.ನಿನ್ನ ಮೊಮ್ಮಗ ಆಗಿದ್ದಕ್ಕೂ ಸಾರ್ಥಕತೆ ಆಗ್ತು. ಮುoದಿನ ಜನ್ಮ ಹೇಳದಿದ್ರೆ ಮತ್ತೆ ನಿನ್ನ ಮೊಮ್ಮಗನಾಗೇ ಹುಡ್ತಿ. ಆವಾಗಾರು ನಿನ್ನ ಹೂವಿನoಗೆ ನೋಡ್ಕ್ಯoಬ ಭಾಗ್ಯ ದೇವ್ರು ಕೊಡ್ಲಿ. ತನ್ನಷ್ಟಕ್ಕೆ ತಾನೇ ಸಮಾಧಾನ ಮಾಡ್ಕ್ಯoಡ ಕಿರಣ್. ಆದರೂ ಅವ್ನ ಮನಸ್ಸಿಗೆ ಸಮಾಧಾನ ಹೇಳದು ಇಲ್ಲೆ..ಎಂತಕ್ಕೆ ಅಂದ್ರೆ,ಹೆಂಚಿನ ಮನೆ ಹೋಗಿ, ಆರ್ ಸಿ ಸಿ ಬಿಲ್ಡಿಂಗ್ ಮಾಡಿಯಾಗಿತ್ತು.

ಅಮ್ಮಮ್ಮಂಗೆ ಇಷ್ಟ ಇಲ್ದೇ ಹೋದ್ರೂವ…ಎಷ್ಟು ಸಲ ಹೇಳಿತ್ತು ಅದು..ತಮ್ಮ, ಹೆಂಚಿನ ಮನೆನೇ ಚಂದನ.ಈ ಸೆಕೆಗಾಲ್ದಲ್ಲಿ ರಾಶೀ ತಂಪು ಇರ್ತು ..ಹೇಳಿ. ಮಳ್ಳ ಮಾಣಿ, ಹೇಳಿದ್ರೂ ಕೇಳಿದ್ನಿಲ್ಲೆ.ಈ ಸುಡುಗಾಡು ಸಿಮೆಂಟ್ ಮನೆ ಮಾಡಿದ್ದ.ಸುಟ್ಟ ಪೋರ, ಹೇಳಿ ಅದೆಷ್ಟು ಸಲ ಬೈದಿತ್ತೇನೋ..ತನ್ನ ಫ್ಯಾಷನ್ ಗಾಗಿ ಅಮ್ಮಮ್ಮಂಗೆ ಮನಸ್ಸು ನೋಯಿಸಿ ಬಿಟ್ಟಿ..ಹಂಗೇ ಇರಲಾಗಿತ್ತು ಹೆಂಚಿನ ಮನೆ. ಹಳೇಕಾಲದ ಮನೆ. ರಾಶೀ ಚಂದ ಇತ್ತು. ಅಡಕೇ ರೇಟ್ ಬಂತು ಹೇಳಿ, ಸ್ಲ್ಯಾಪ್ ಹಾಕಿಬಿಟ್ಯ. ಹೇಳಿ, ಕಿರಣ್ ಪಶ್ಚಾತ್ತಾಪದಿಂದ ನರಳ್ತಾ ಇದ್ದಿದ್ದ. ಅಷ್ಟರಲ್ಲಿ ಜಗ್ಲಿಗೆ ಯಂಕಜ್ಜಿ ಬಂತು, ಕಿರಣ್ ಅಮ್ಮಮ್ಮನ ನೋಡಿ ಅಮ್ಮಮ್ಮ ಇಲ್ಲಿ ಬಾ ಹೇಳಿ ಕರೆದ. ಎಂತ ಮಗ ಹೇಳಿ ಕೇಳಕ್ಯೆತ ಯಂಕಜ್ಜಿ. ಸೋಪಾದ ಮ್ಯಾಲೆ ಬಂದು ಕೂತ್ಗoಡ್ಚು.ಅಮ್ಮಮ್ಮ ಆನು ಸ್ವಲ್ಪ ಹೊತ್ತು ನಿನ್ನ ಕಾಲ್ಮೇಲೆ ಮಲ್ಗಲ ಕೇಳ್ದ ಕಿರಣ್, ಅಯ್ಯೋ ಹುಚ್ಚ್ ಮುOಡೆದೆ ಅದ್ರ ಕೇಳವನ ಮಗ ಬಾ ಮನಕ್ಯ ಹೇಳಿ ಖುಷಿoದವ ಕಾಲ್ಮೇಲೆ ಮನಿಸ್ಕ್ಯೇoಡ್ಚು ಯoಕಜ್ಜೀ.ಮಗ ನೀನು ಎಷ್ಟೇ ದೊಡ್ದಾದ್ರು ಎಂಗೆ ನೀನು ಸಣ್ಣವ್ನೇಯ.ಹೇಳ ಅಮ್ಮಮ್ಮನ ಕಕ್ಕುಲತೆಯ ಭಾವಪರವಶತೆಯಲ್ಲಿ ತೇಲಿಹೋದ ಮೊಮ್ಮಗ ಕಿರಣ್.


  • ಶೋಭಾ ನಾರಾಯಣ ಹೆಗಡೆ, ಶಿರಸಿ.

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW