ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ಶಿಲ್ಪಗಳು

ಅಂಜನಾಪುರ ಜಲಾಶಯದ ಹತ್ತಿರ ಈಸೂರು ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ಶಿಲ್ಪಗಳ ರಮ್ಯಲೋಕ ಇರುವುದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಪಕ್ಕದಲ್ಲಿ ಶಿಕಾರಿಪುರದಿಂದ 16 ಕಿ.ಮೀ ದೂರದಲ್ಲಿದೆ. ಇದರ ಬಗ್ಗೆ ಟಿ.ಶಿವಕುಮಾರ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…

ಇಲ್ಲಿ ಯಾರನ್ನೂ ಗಲ್ಲಿಗೇರಿಸುತ್ತಿದ್ದಾರೆ ಅದರೆ ಗಲ್ಲಿಗೇರಿಸುತ್ತಿಲ್ಲ, ಇಲ್ಲಿ ಹಲಗೆ ಬಾರಿಸುತ್ತಿದ್ದಾರೆ, ಶಬ್ದ ಕೇಳುತ್ತಿಲ್ಲ. ಕುರಿ ಕಾಯುತ್ತಿದ್ದಾನೆ ಕುರಿಗಳು ಮುಂದೆ ಹೋಗುತ್ತಿಲ್ಲ, ಹೊಲವನ್ನು ಹೂಳುತ್ತಿದ್ದಾನೆ ಎತ್ತುಗಳು ಮುಂದೆ ಹೋಗುತ್ತಿಲ್ಲ, ಯಾರೋ ಸ್ವಾತಂತ್ರ್ಯಕ್ಕಾಗಿ ಚಳುವಳಿಯ ರೀತಿಯಲ್ಲಿ ಬರುತ್ತಿದ್ದಾರೆ ಮುಂದೆ ಸಾಗುತ್ತಿಲ್ಲ, ರೈತ ಗೊರಬನ್ನು ಹಾಕಿಕೊಂಡು ನಿಂತಿದ್ದಾನೆ ಮುಂದೆ ಹೋಗುತ್ತಿಲ್ಲ,

ಏನಿದು ಅಂತೀರಾ!

ಹೌದು …. ಇದೊಂದು ಸುಂದರವಾದ ಮಾಯಾ ಬಜಾರ್ ನ ಚಿತ್ರಣ ಇಲ್ಲಿ ಎಲ್ಲವೂ ಮನಮೋಹಕ ಕಣ್ಣು ಹಾಯಿಸಿದಷ್ಟು ಜಗ್ಗಲಿಗೆ ಕುಣಿತ, ಕೋಲಾಟ, ಡೊಳ್ಳು ಕುಣಿತ ಭತ್ತದ ನಾಟಿ ಮಾಡುವುದು, ಬೇಸಾಯ ಮಾಡುವುದು, ಹಿರಿಯರು ದನ ಮೇಯಿಸುವುದು, ಮಂಗಳ ವಾದ್ಯ, ಭಜನೆಯಂತಹ ದೇಶಿಯ ಕಲೆಗಳನ್ನು ಶಿಲ್ಪಕಲೆಗಳಲ್ಲಿ ಆರಳಿಸಲಾಗಿದೆ ಮತ್ತು ಇವರ ಜೀವನದ ಅಂಗವಾದ ಕೃಷಿ ಮತ್ತು ದನ ಎಮ್ಮೆ ಹಾಗೂ ಹೈನುಗಾರಿಕೆ ಮುಂತಾದ ಬದುಕಿನ ಚಿತ್ರಣಗಳನ್ನು ಶಿಲ್ಪಗಳ ರೂಪದಲ್ಲಿ ಆರಳಿಸಲಾಗಿದೆ.

ಇಂಥಹದೊಂದು ರಮ್ಯಲೋಕ ಸೃಷ್ಠಿಯಾಗಿರುವುದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಪಕ್ಕದಲ್ಲಿ ಶಿಕಾರಿಪುರದಿಂದ 16 ಕಿ.ಮೀ ದೂರವಿರುವ ಈ ಉದ್ಯಾನವನ ಸುಮಾರು 6 ಎಕರೆ ಪ್ರದೇಶದಲ್ಲಿ ಜಲಸಂಪನ್ಮೂಲ ಇಲಾಖೆಯ ನೀರಾವರಿ ನಿಗಮದ 6 ಕೋಟಿ ಅನುದಾನದಲ್ಲಿ ಈ ಒಂದು ಸುಂದರವಾದ ಉದ್ಯಾನವನ ನಿರ್ಮಾಣವಾಗಿದೆ. ಈ ಒಂದು ಉದ್ಯಾನವನವನ್ನು ಪ್ರವೇಸಿದರೆ ಯಾವುದೂ ಒಂದು ಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಒಂದು ಉದ್ಯಾನವನಕ್ಕೆ ಗುದ್ದಲಿ ಪೂಜೆ ನಡೆದಿತ್ತು. ಈಗ 8 ತಿಂಗಳಿನಿಂದ ವೀಕ್ಷಣೆಗೆ ಸಜ್ಜಾಗಿ ನಿಂತಿದೆ. ಈ ಒಂದು ಉದ್ಯಾನವನಕ್ಕೆ ಪ್ರವೇಶಿಸಿದರೆ ಮುಗಿಯಿತು. ಯಾವುದೋ ಒಂದು ಹಳ್ಳಿಯಲ್ಲಿ ಇದ್ದೇವೆಯೋ ಎನ್ನುವಂತೆ ಭಾಸವಾಗುತ್ತದೆ. ಅದರಲ್ಲೂ ಸ್ವಾತಂತ್ರದ ಹೋರಾಟದ ಕಿಚ್ಚುನ್ನು ನೆನಪಿಸುವ ಜಿಲ್ಲೆಯ ಈಸೂರು ಗ್ರಾಮದ ಹೋರಾಟವನ್ನು ನೆನಪಿಸುತ್ತದೆ. 1942ರ ಮಹಾತ್ಮ ಗಾಂಧೀಜಿ ನೇತೃತ್ವದ ಕ್ವಿಟ್ ಇಂಡಿಯಾ( ಭಾರತ ಬಿಟ್ಟು ತೊಲಗಿ) ಚಳುವಳಿಯಲ್ಲಿ ಇಡೀ ಗ್ರಾಮವೇ ಈ ಒಂದು ಚಳುವಳಿಯಲ್ಲಿ ಭಾಗವಹಿಸಿತ್ತು. ಈಸೂರು ಗ್ರಾಮದಲ್ಲಿ ನಡೆದ ಜನರು ಬ್ರಿಟಿಷರ ವಿರುದ್ದ ನಡೆಸಿದ ಚಳಿವಳಿ ಹಾಗೂ ಆ ವೇಳೆ ಹೋರಾಟಗಾರರನ್ನು ಗಲ್ಲಿಗೇರಿಸುವಂಥ ಘಟನೆಗಳು ಕಲಾಕೃತಿಗಳ ಎಂಥವರನ್ನೂ ತನ್ನತ್ತ ಸೆಳೆಯುವ ಮೂಲಕ ಕಣ್ಮನ ಸೆಳೆಯುತ್ತವೆ. ಗಲ್ಲಿಗೇರಿಸುತ್ತಿರುವ ದೃಶ್ಯದ ಪಕ್ಕದಲ್ಲಿ ನಾಯಿ ಅದನ್ನು ನೋಡುತ್ತಿರುವುದು ಕಣ್ಣಿಗೆ ಕಟ್ಟುವಂತಿದೆ. ಇಂದಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಬೇಸಾಯ ಪದ್ದತಿಯ ಬಿತ್ತುವುದು, ಕಳೆ ತೆಗೆಯುತ್ತಿರುವುದು,

ನಾಟಿಯನ್ನು ಮಾಡುತ್ತಿರುವುನ್ನು ನೋಡಿದರೆ ನಮ್ಮ ಹೊಲದಲ್ಲಿ ಇದ್ದೇವೆಯೋ ಎನ್ನುವಂತೆ ಭಾಸವಾಗುತ್ತದೆ. ಸುಂದರ ಶಿಲ್ಪಕಲಾಕೃತಿಗಳ ಮೂಲಕ ಕಣ್ಣಿಗೆ ಕಟ್ಟುವಂತೆ ನಿರ್ಮಿಸಲಾಗಿದೆ.

This slideshow requires JavaScript.

ಶಿಲ್ಪಗಳ ಜೊತೆಗೆ ಉದ್ಯಾನದ ನಡುವೆ ಸಂಗೀತ ಕಾರಂಜಿಗಳಿವೆ ಮಕ್ಕಳಿಗೆ ಆಟವಾಡಲು ಬೇಕಾದ ಪರಿಕರಗಳಿವೆ. ಉದ್ಯಾನವನವನ್ನು ಸುತ್ತಾಡಿ ಸುಸ್ತಾದರೆ ದಣಿವಾರಿಸಿಕೊಳ್ಳಲು ಆಸನಗಳಿವೆ. ಇಲ್ಲಿ ಯಾವುದೇ ರೀತಿಯಾದ ಸುಸಜ್ಜಿತವಾದ ಹೋಟೆಲ್‍ಗಳಿಲ್ಲ ಉದ್ಯಾನವನದ ಎದುರಿಗೆ ಟೀ, ಕಾಫಿಗಾಗಿ ಇರುವ ಪುಟ್ಟ ಹೋಟೆಲ್‍ಗಳಿವೆ. ಯಾವುದೇ ಸುಂದರ ಶಿಲ್ಪಕಲಾಕೃತಿಗಳ ಮೂಲಕ ಕಣ್ಣಿಗೆ ಕಟ್ಟುವಂತೆ ನಿರ್ಮಿಸಲಾಗಿದೆ.

ಅಮರ ಶಿಲ್ಪಿ ಜಕ್ಕಣ ಶಿಲೆಯಲ್ಲಿ ಕಲೆಯನ್ನು ಆರಳಿಸಿದ ಇತಿಹಾಸ ಪುರುಷ. ಆದರೆ ಇಲ್ಲಿನ ಜಕ್ಕಣರು ಸಿಮೆಂಟ್ಟಿನಲ್ಲಿಯೇ ಶಿಲ್ಪಗಳಿಗೆ ಜೀವ ತುಂಬುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ನಾಗಾಲೋಟದಂತೆ ಓಡುತ್ತಿರುವ ಜೀವನದಲ್ಲಿ ಕಲೆ ಗ¼, ಇತಿಹಾಸ, ಸಂಸ್ಕøತಿ ಮತ್ತು ಸಂಸ್ಕಾರಗಳು ಜಾಗತೀಕರಣದ ಹೊಡೆತಕ್ಕೆ ನಲುಗಿಹೋಗಿರುವ ಈ ದಿನಗಳಲ್ಲಿ ಒಂದು ಸುಂದರ ಹಳ್ಳಿಯನ್ನು ಸೃಷ್ಠಿ ಮಾಡಿದಂತಿದೆ. ಒಟ್ಟಿನಲ್ಲಿ ನಮ್ಮ ಸಂಸ್ಕøತಿಯ ಹಳೆ ಬೇರಿನಲ್ಲಿರುವ ಎಲ್ಲ ಜ್ಞಾನವನ್ನು ಹೊಸ ಚಿಗುರಿನಂತಿರುವ ಯುವ ಪೀಳಿಗೆಗೆ ಉಣಬಡಿಸುತ್ತಿದೆ ಈ ಉದ್ಯಾನವನ.

ವಿಳಾಸ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಪಕ್ಕದಲ್ಲಿ ಶಿಕಾರಿಪುರದಿಂದ 16 ಕಿ.ಮೀ ದೂರವಿರುವ ಈ ಉದ್ಯಾನವನ ಸುಮಾರು 6 ಎಕರೆ ಪ್ರದೇಶದಲ್ಲಿದೆ.


  • ಟಿ.ಶಿವಕುಮಾರ್, ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳು, ಸ ಹಿ ಪ್ರಾ ಶಾಲೆ ಅರಳೇಶ್ವರ,

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW